/newsfirstlive-kannada/media/media_files/2025/08/01/dr-rajkumar-sister-nagamma2-2025-08-01-12-49-22.jpg)
ಚಾಮರಾಜನಗರ: ಡಾ. ರಾಜ್​ಕುಮಾರ್ ಅವರ ಸಹೋದರಿ ನಿಧನರಾಗಿದ್ದಾರೆ. ಡಾ ರಾಜ್​ಕುಮಾರ್ ಸಹೋದರಿ ನಾಗಮ್ಮ ಗಾಜನೂರಿನ ಮನೆಯಲ್ಲೇ ಮೃತಪಟ್ಟಿದ್ದಾರೆ. ಡಾ ರಾಜ್​ಸಹೋದರಿ ನಾಗಮ್ಮ ಅವರು ಗಾಜನೂರಿನ ಮನೆಯಲ್ಲಿ ವಾಸವಾಗಿದ್ದರು. ರಾಜ್​ಕುಮಾರ್ ಸಹೋದರಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
/filters:format(webp)/newsfirstlive-kannada/media/media_files/2025/08/01/shivanna9-2025-08-01-12-43-29.jpg)
ರಾಜ್​ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆ ಇವರಾಗಿದ್ದರು. ನಾಗಮ್ಮ ಅವರಿಗೆ 92 ವರ್ಷ ವಯಸ್ಸಾಗಿತ್ತು. ಪುನೀತ್​ ರಾಜ್​ಕುಮಾರ್​ ಅವರು ಅಗಲಿ ವರ್ಷಗಳೇ ಕಳೆದು ಹೋಗಿವೆ. ಆದ್ರೆ ಈ ವಿಚಾರ ನಾಗಮ್ಮ ಅವರಿಗೆ ಗೊತ್ತಿರಲಿಲ್ಲ. ಆದರೆ, ಅತ್ತೆ ನಾಗಮ್ಮ ಆಗಾಗ ಅಪ್ಪು ಕಂದ ಬಂದು ನನ್ ನೋಡ್ಕೊಂಡು ಹೋಗು ಅಂತ ಹೇಳ್ತಾನೇ ಇರುತ್ತಿದ್ದರಂತೆ.
/filters:format(webp)/newsfirstlive-kannada/media/media_files/2025/08/01/dr-rajkumar-sister-nagamma-2025-08-01-12-32-37.jpg)
ತುಂಬಾ ವಯಸ್ಸಾಗಿದ್ದ ಕಾರಣ ನಾಗಮ್ಮ ಅವರಿಗೆ ಕುಟುಂಬಸ್ಥರು ಅಪ್ಪು ನಿಧನದ ಸುದ್ದಿ ತಿಳಿಸಿರಲಿಲ್ಲ. ಹಾಗಾಗಿ ನಾಗಮ್ಮ ಅವರು ಅಪ್ಪು ಬರ್ತಾನೆ. ಬಂದು ನೋಡಿಕೊಂಡು ಹೋಗ್ತಾನೆ ಅನ್ನುವ ನಂಬಿಕೆಯಲ್ಲಿಯೇ ಇದ್ದರು. ಆದ್ರೆ ಇಂದು ರಾಜ್​ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆ ಅಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us