/newsfirstlive-kannada/media/media_files/2025/08/01/dharamasthala-case-2025-08-01-06-52-04.jpg)
ಧರ್ಮಸ್ಥಳ ಪ್ರಕರಣದ ಅನಾಮಿಕ ದೂರುದಾರ
ಧರ್ಮಸ್ಥಳದಲ್ಲಿ ಶ*ವ ಹೂತಿಟ್ಟ ಆರೋಪಕ್ಕೆ ಸಾಕ್ಷಿ ಸಿಕ್ತಾ ಅನ್ನೋ ಪ್ರಶ್ನೆಗಳು ಹಬ್ಬಿವೆ. ಪಾಯಿಂಟ್-6ರಲ್ಲಿ ತನಿಖೆಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು, ದೂರುದಾರ ಮಾರ್ಕ್ ಮಾಡಿದ್ದ ಸ್ಥಳದಲ್ಲಿ ಮಾನವ ದೇಹದ ಮೂಳೆಗಳು ಸಿಕ್ಕಿವೆ. ಸದ್ಯ ಅವಶೇಷಗಳು ಸಿಕ್ಕ ಸ್ಥಳಕ್ಕೆ SIT ಹೆಚ್ಚಿನ ಭದ್ರತೆ ಕ್ರಮ ಕೈಗೊಂಡಿದ್ದು, 4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ..
ಪಾಯಿಂಟ್-6ರಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ
ದಟ್ಟ ಕಾನನದಲ್ಲಿ ಹುದುಗಿದ್ದ ರಹಸ್ಯಗಳು ಸಮಾಧಿಯಿಂದ ಮೇಲೆಳ್ತಿವೆ. ಎರಡು ದಿನಗಳ ಕಾಲ ಅಗೆದರೂ ಬಗೆದರೂ ಸಿಗದ ಕುರುಹು, ನಿನ್ನೆ ಬಹುದೊಡ್ಡ ತಿರುವು ಕೊಟ್ಟಿದೆ. ನಿನ್ನೆ ಪಾಯಿಂಟ್ 6ರ ಅಗೆಯುವ ಕಾರ್ಯಾಚರಣೆ ಅಂತ್ಯ ಆಗಿದ್ದು, ಸ್ಥಳವನ್ನ ಸೆಕ್ಯೂರ್ ಮಾಡಲಾಗಿದೆ.
ಇದನ್ನೂ ಓದಿ: SSLC, PUC ಮುಗಿದಿದ್ರೆ, ರಾಷ್ಟ್ರೀಯ ಕೌಶಲ್ಯ ಅಕಾಡೆಮಿಯಿಂದ ಸಾಫ್ಟ್ ವೇರ್ ಕೋರ್ಸ್ ತರಬೇತಿ
ಪಾಯಿಂಟ್-6 ಟ್ವಿಸ್ಟ್
- ಮಾನವ ದೇಹದ ತಲೆಬುರುಡೆಯ ಎರಡು ತುಂಡುಗಳು
- ಕಾಲಿನ 2 ಮೂಳೆ, ಬೆನ್ನು ಮೂಳೆಗಳ, ಸಣ್ಣ ಮೂಳೆಗಳು
- ತಲೆ ಬುರುಡೆಯ ಎರಡು ಚೂರುಗಳು ಸಹ ಪತ್ತೆ ಆಗಿವೆ
- ತುಂಡಾದ ಎಲೆಸ್ಟಿಕ್ ಒಳ ಉಡುಪಿನ ತುಂಡು ಸಹ ಪತ್ತೆ
- ಪಾಯಿಂಟ್-6ರಲ್ಲಿ 12 ಅಸ್ಥಿಪಂಜರ ಮೂಳೆಗಳು ಲಭ್ಯ
- ಅವಶೇಷ ಸಿಕ್ಕ ಸ್ಥಳದಲ್ಲಿ ಹೆಚ್ಚಿನ ಭದ್ರತೆಗೆ SIT ಕ್ರಮ
- 4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ
ಇವತ್ತು ಬೆಳಿಗ್ಗೆಯಿಂದಲೇ ಪಾಯಿಂಟ್ ನಂ.7 ಅಗೆಯುವ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದ್ದು, ಸಂಪೂರ್ಣ ಅಸ್ಥಿಪಂಜರ ಹಾಗೂ ತಲೆಬುರುಡೆ ಸಿಕ್ಕರೆ ಮೇಜರ್ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.
ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯ ಬಯಲು
ಪಾಯಿಂಟ್ 1ರಲ್ಲಿ ಪತ್ತೆಯಾಗಿದ್ದ ಡೆಬಿಟ್ ಹಾಗು ಪಾನ್ ಕಾರ್ಡ್ಗೆ ಬೇರೆಯದ್ದೆ ತಿರುವು ಸಿಕ್ಕಿದೆ.. ಅನಾರೋಗ್ಯದಿಂದ ಪಾನ್ ಕಾರ್ಡ್ ವಾರಸುದಾರ ಸಾ*ವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಡೆಬಿಟ್ ಕಾರ್ಡ್ ಸಾ*ವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಆಕೆ ಜೀವಂತ ಇದ್ದಾರೆಂಬ ಮಾಹಿತಿ ಲಭ್ಯ ಆಗಿದೆ.. ಮಹಿಳೆಯನ್ನ ಸಂಪರ್ಕಿಸಿದ SIT, ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿ ಖಚಿತ ಪಡಿಸಿಕೊಂಡಿದೆ. ಡೆಬಿಟ್ ಕಾರ್ಡ್ ಹಾಗು ಪಾನ್ ಕಾರ್ಡ್ ಕುರಿತು ಎದ್ದಿದ್ದ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದೆ.
ಧರ್ಮಸ್ಥಳದ ಉಳಿವಿಗಾಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಗಚ್ಚಿನ ಮಠದಲ್ಲಿ ನೂರಾರು ಭಕ್ತರಿಂದ ವಿಶೇಷ ಹೋಮ, ಹವನ ನಡೆಯುತ್ತಿದೆ. ಧರ್ಮಸ್ಥಳದ ಪಾವಿತ್ರತೆಗೆ ಯಾರೂ ಕೂಡ ಧಕ್ಕೆ ತರುವ ಕೆಲಸ ಮಾಡಬಾರದು ಅಂತ ಪೂಜೆಯಲ್ಲಿ ನಿರತವಾಗಿದೆ. ಧರ್ಮಸ್ಥಳದ ವಿಚಾರದಲ್ಲಿ SIT ತನಿಖೆ ಸ್ವಾಗತ ಮಾಡ್ತೇವೆ. ಆದ್ರೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಸಹಿಸಲ್ಲ ಅಂತ ಸಾರಿದೆ.
ಇದನ್ನೂ ಓದಿ:ಮತ್ತೆ ನಿಜವಾಯ್ತು ಬಾಬಾ ವಾಂಗಾ ನುಡಿದ ಭವಿಷ್ಯ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ