newsfirstkannada.com

ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..!

Share :

Published April 30, 2024 at 10:05am

Update April 30, 2024 at 10:07am

    ‘ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮ ಆಗಬಹುದು, ಆದರೆ’

    ಕೋರ್ಟ್ ವಿಚಾರಣೆ ವೇಳೆ ಅಡ್ಡ ಪರಿಣಾಮದ ಬಗ್ಗೆ ಕಂಪನಿ ವಾದ

    ಸತ್ಯ ಒಪ್ಪಿಕೊಂಡ ಬೆನ್ನಲ್ಲೇ ಕೊರೊನಾ ಲಸಿಕೆ ಪಡೆದವರಿಗೆ ಭಯ

ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್​ ಮುಂದೆ ಒಪ್ಪಿಕೊಂಡಿದೆ. ತಾನು ಅಭವೃದ್ಧಿಪಡಿಸಿ ಕೋಟ್ಯಾಂತರ ಜನರಿಗೆ ನೀಡಿರುವ ಕೊರೊನಾ ಲಸಿಕೆಯು ಗಂಭೀರ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಮೊದಲ ಬಾರಿಗೆ ಹೇಳಿದೆ.

ಕೋವಿಶೀಲ್ಡ್ (Covishield), ವ್ಯಾಕ್ಸ್​​ಝೇವ್ರಿಯಾ (Vaxzevria) ಬ್ರಾಂಡ್​​ ಹೆಸರಲ್ಲಿ ಕೊರೊನಾ ಲಸಿಕೆಯನ್ನು ಪ್ರಪಂಚದಾದ್ಯಂತ ಅಸ್ಟ್ರಾಝೆನೆಕಾ ಮಾರಾಟ ಮಾಡಿತ್ತು. ಈ ಲಸಿಕೆಯಿಂದ ಟಿಟಿಎಸ್ (Thrombocytopenia Syndrome) ನಂತಹ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಆದರೆ ಇದು ತುಂಬಾನೇ ಅಪರೂಪ ಎಂದು ಲಂಡನ್ ಕೋರ್ಟ್​ ಮುಂದೆ ಕಂಪನಿ ಹೇಳಿದೆ.

ಏನಿದು ಟಿಟಿಎಸ್​..?
ಟಿಟಿಎಸ್​ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಜೊತೆಗೆ ಪ್ಲೇಟ್‌ಲೆಟ್ಸ್​ ದಿನದಿಂದ ದಿನಕ್ಕೆ ಕುಸಿಯಲು ಆರಂಭಿಸುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸ್ಟ್ರೋಕ್ ಅಥವಾ ಹೃದಯ ಸ್ತಂಭನದ ಸಾಧ್ಯತೆಗಳು ಹೆಚ್ಚಾಗುತ್ತದೆ.

ಇದನ್ನೂ ಓದಿ:ಪಾಂಡ್ಯಗೆ ಮತ್ತೊಂದು ಆಘಾತ.. ಸ್ಟಾರ್ ಆಟಗಾರನಿಂದ ಟೀಂ ಇಂಡಿಯಾದ ಉಪನಾಯಕನ ಪಟ್ಟ ಟೇಕ್ ಓವರ್..!

ಈ ವರ್ಷದ ಫೆಬ್ರವರಿಯಲ್ಲಿ UK ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ AstraZeneca ಒಪ್ಪಿಕೊಂಡಿದೆ. ಆದರೆ ಕಂಪನಿಯು ಲಸಿಕೆ ಪರವಾಗಿ ತನ್ನ ವಾದಗಳನ್ನು ಮಂಡಿಸಿದೆ.

ಏನಿದು ಪ್ರಕರಣ..?
ಜೇಮಿ ಸ್ಕಾಟ್ (Jamie Scott) ಎಂಬ ಬ್ರಿಟಿಷ್ ವ್ಯಕ್ತಿ 2021ರಲ್ಲಿ ಇದೇ ಕಂಪನಿಯ ಲಸಿಕೆಯನ್ನು ಪಡೆದುಕೊಂಡಿದ್ದರು. ಬೆನ್ನಲ್ಲೇ ಅವರಿಗೆ ಥಂಬೋಸೈಟೋಪೆನಿಯಾ ಸಿಂಡ್ರೋಮ್​ ಶುರುವಾಗಿದೆ. ನಂತರ ಅದು ಅವರ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೊನೆಗೆ ಅವರ ಕುಟುಂಬಸ್ಥರು ಕಂಪನಿ ವಿರುದ್ಧ ಕೇಸ್ ದಾಖಲಿಸುತ್ತಾರೆ. ಇದೇ ರೀತಿ ಕೊರೊನಾ ಲಸಿಕೆ ವಿರುದ್ಧ ಡಜನ್‌ಗೂ ಹೆಚ್ಚು ಕೇಸ್​ಗಳು ದಾಖಲಾಗಿವೆ. ಜನ ಲಸಿಕೆ ತೆಗೆದುಕೊಂಡ ನಂತರ ಅಡ್ಡ ಪರಿಣಾಮ ಎದುರಿಸಿದ್ದಾರೆ. ಕಂಪನಿ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿವೆ.

AstraZeneca ಕೋರ್ಟ್​ಗೆ ಹೇಳಿದ್ದೇನು?

  • ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ ಅಡ್ಡ ಪರಿಣಾಮ ಉಂಟು ಮಾಡಬಹುದು. ಈ ಅಡ್ಡಪರಿಣಾಮಗಳು ಥಂಬೋಸೈಟೋಪೆನಿಯಾ ಸಿಂಡ್ರೋಮ್​ನಂತೆಯೇ ಇರಬಹುದು. ಈ ರೀತಿ ಆಗೋದು ತುಂಬಾ ಬಹಳ ಅಪರೂಪ.
  • ಕೆಲವರಿಗೆ ಕೊರೊನಾ ಲಸಿಕೆ ಪಡೆಯುವ ಮೊದಲೇ ಥಂಬೋಸೈಟೋಪೆನಿಯಾ ಸಿಂಡ್ರೋಮ್ ಇದ್ದಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಲಸಿಕೆ ಪಡೆದ ನಂತರ ಜನ ಕಾಯಿಲೆಯಿಂದ ಹೋರಾಡ್ತಿದ್ದಾರೆ ಅನ್ನೋದು ಸರಿಯಲ್ಲ.
  • ಅನೇಕ ಅಧ್ಯಯನಗಳಲ್ಲಿ ಕೊರೊನಾ ಎದುರಿಸಲು ನಮ್ಮ ಲಸಿಕೆ ಬಹಳ ಪರಿಣಾಮಕಾರಿ ಎಂದು ಹೇಳಲಾಗಿದೆ. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಈ ಅಧ್ಯಯನಗಳನ್ನು ನೋಡುವುದು ಇಲ್ಲಿ ಮುಖ್ಯವಾಗಿದೆ
  • ಲಸಿಕೆಯ ಅಡ್ಡ ಪರಿಣಾಮ ಅತ್ಯಂತ ಅಪರೂಪ ಎಂದು ಕಂಪನಿ ನಂಬುತ್ತದೆ. ರೋಗಿಗಳ ಸುರಕ್ಷತೆ ನಮ್ಮ ಮೊದಲ ಆದ್ಯತೆ. ನಮ್ಮ ಔಷಧಿಗಳು ಸೂಕ್ತ ಮಾನದಂಡಗಳನ್ನು ಪೂರೈಸಿವೆ. ಲಸಿಕೆಗಳು ಸೇರಿದಂತೆ ಎಲ್ಲಾ ಔಷಧಿಗಳ ಸುರಕ್ಷಿತ ಬಳಕೆಯನ್ನು ಖಚಿತಪಡಿಸಿದ್ದೇವೆ.
  • ಆಸ್ಟ್ರಾಝೆನೆಕಾ ಆಕ್ಸ್‌ಫರ್ಡ್‌ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಮತ್ತು ವಿಶ್ವದಾದ್ಯಂತ ಅದರ ಸ್ವೀಕಾರ ಆಗಿದೆ. ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಪ್ರೋಗ್ರಾಂ ಆಗಿದ್ದು, ಅದರ ಪ್ರಯೋಜನ ಜನರಿಗೆ ಆಗಿದೆ. ಇದು ಲಸಿಕೆಯಿಂದ ಉಂಟಾಗುವ ಸಂಭವನೀಯ ಅಡ್ಡಪರಿಣಾಮಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಲಸಿಕೆಯ ಸಹಾಯದಿಂದ ವಿಶ್ವದಾದ್ಯಂತ 60 ಲಕ್ಷ ಜನರ ಜೀವಗಳನ್ನು ಉಳಿಸಲಾಗಿದೆ.
    ಲಸಿಕೆ ಪಡೆದ ನಂತರ ವಿವಿಧ ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳುವ ಜನರ ಸ್ಥಿತಿಯ ಬಗ್ಗೆ ನಾನು ಚಿಂತಿಸುತ್ತಿದ್ದೇವೆ. ಅದರ ದುಷ್ಪರಿಣಾಮಗಳು ತೀರಾ ಅಪರೂಪ. ನಮ್ಮ ಹೇಳಿಕೆಗೆ ನಾವು ಇನ್ನೂ ಬದ್ಧರಾಗಿದ್ದೇವೆ.

ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಸಹಯೋಗದೊಂದಿಗೆ ಅಸ್ಟ್ರಾಝೆನೆಕಾ ಭಾರತದ ಪುಣೆಯಲ್ಲಿ ಕೋವಿಶೀಲ್ ಸಿದ್ಧಪಡಿಸಿದೆ.

ಇದನ್ನೂ ಓದಿ:ಭಾರೀ ಮಳೆಗೆ 10 ಮನೆಗಳು ಕುಸಿತ.. ನದಿಗಳಂತಾದ ರಸ್ತೆಗಳು, ಪ್ರವಾಹದ ಮುನ್ಸೂಚನೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..!

https://newsfirstlive.com/wp-content/uploads/2024/04/CORONA-VACINE.jpg

Load More