newsfirstkannada.com

2 ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಅಮ್ಮ; ಕಾರಣವೇನು?

Share :

Published March 20, 2024 at 1:22pm

Update March 20, 2024 at 1:23pm

  ಗಂಡ ಲಕ್ಷ್ಮೀ ನಾರಾಯಣ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆಗೆ ಯತ್ನ

  ಕೆಆರ್ ​ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ದಾರುಣ ಘಟನೆ

  ಆಂಧ್ರಪ್ರದೇಶದ ಚಿತ್ತೂರು ಮೂಲದವರು ಸೀಗೆಹಳ್ಳಿಗೆ ಬಂದು ವಾಸವಿದ್ದರು

ಮೈಸೂರು: ಕೌಟುಂಬಿಕ ಕಲಹಕ್ಕೆ ಬೇಸತ್ತ ತಾಯಿ ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿರೋ ಹೃದಯ ವಿದ್ರಾವಕ ಘಟನೆ ಕೆಆರ್ ​ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ನಡೆದಿದೆ. ಶೃತಿಕಾ (2) ಮೃತ ಮಗು.

ಇದನ್ನು ಓದಿ: ಒಂದು ಕೋಟಿಗೂ ಹೆಚ್ಚು ಸಾಲ.. ಸಾಲಗಾರರ ಕಾಟಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ

ಇದೇ ಮಾರ್ಚ್‌ 17ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದಂಪತಿ ಆಂಧ್ರಪ್ರದೇಶದ ಚಿತ್ತೂರು ಮೂಲದವರು. ಮೂರು ತಿಂಗಳ ಹಿಂದೆ ಸೀಗೆಹಳ್ಳಿಗೆ ಬಂದು ವಾಸವಾಗಿದ್ದರು. ಚಿನ್ನಾ ಗಂಡ ಲಕ್ಷ್ಮೀನಾರಾಯಣ ಪ್ರತಿದಿನ ಹಿಂಸೆ ನೀಡುತ್ತಿದ್ದನಂತೆ. ಇದೇ 16 ತಾರೀಖಿನಂದು ರಾತ್ರಿ ಗಂಡ ಲಕ್ಷ್ಮೀನಾರಾಯಣ ಹೆಂಡತಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಹೀಗಾಗಿ ಗಂಡ ಲಕ್ಷ್ಮೀನಾರಾಯಣನ ಕಾಟಕ್ಕೆ ಬೇಸತ್ತಿದ್ದ ಪತ್ನಿ ಚಿನ್ನಾ ಮಗುವನ್ನು ಉಸಿರುಗಟ್ಟಿಸಿ ಕೊಂದು ತಾನೂ ಚೂರಿಯಿಂದ ಕತ್ತು ಸೀಳಿಕೊಂಡಿದ್ದಾಳೆ.

ಕೂಡಲೇ ಸ್ಥಳೀಯರು ಚಿನ್ನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿನ್ನಾಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ಈ ಕೇಸ್​​ ಸಂಬಂಧ ಗಂಡ ಲಕ್ಷ್ಮೀನಾರಾಯಣನ ದೂರಿನ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಅಮ್ಮ; ಕಾರಣವೇನು?

https://newsfirstlive.com/wp-content/uploads/2024/03/death-12.jpg

Load More