newsfirstkannada.com

ಪತಿಯ IPL ಬೆಟ್ಟಿಂಗ್​ನಿಂದ 1.5 ಕೋಟಿ ರೂಪಾಯಿ ಸಾಲ: ಮನನೊಂದು ಪತ್ನಿ ಆತ್ಮಹತ್ಯೆ; ಮೂವರು ಅರೆಸ್ಟ್​

Share :

Published March 27, 2024 at 6:15am

Update March 27, 2024 at 6:19am

    ಐಪಿಎಲ್ ಬೆಟ್ಟಿಂಗ್ ನಲ್ಲಿ ಸುಮಾರು 1.5 ಕೋಟಿ ಸಾಲ ಮಾಡಿಕೊಂಡಿದ್ದ ಪತಿ

    1 ಕೋಟಿಗೂ ಹೆಚ್ಚು ಹಣ ಮರುಪಾವತಿ, 54 ಲಕ್ಷ ಸಾಲ ಉಳಿಸಿಕೊಂಡಿದ್ದ ಪತಿ

    13 ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ಚಿತ್ರದುರ್ಗ: ಪತಿಯ ಐಪಿಎಲ್ ಬೆಟ್ಟಿಂಗ್​ನಿಂದ​​ 1.5 ಕೋಟಿ ರೂಪಾಯಿ ಸಾಲಕ್ಕೆ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಸಂಬಂಧ ಪಟ್ಟಂತೆ 3 ಜನ ಆರೋಪಿಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೊಳಲ್ಕೆರೆ ಪೊಲೀಸರು 13 ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಗಿರೀಶ್, ಶಿವು, ವೆಂಕಟೇಶ್​ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಬಲೆ‌ ಬೀಸಿದ್ದಾರೆ.

ಪತಿ ದರ್ಶನ್ ಬಾಬು ಐಪಿಎಲ್ ಬೆಟ್ಟಿಂಗ್ ನಲ್ಲಿ ಸುಮಾರು 1.5 ಕೋಟಿ ಸಾಲ ಮಾಡಿದ್ದರು. 1 ಕೋಟಿಗೂ ಹೆಚ್ಚು ಹಣ ಮರುಪಾವತಿ ಮಾಡಿದ್ದರು. ಇನ್ನೂ ಸುಮಾರು 54 ಲಕ್ಷ ಸಾಲ ಉಳಿಸಿಕೊಂಡಿದ್ದರು. ಆರೋಪಿಗಳು ಹಣ ಕೊಡದಿದ್ರೆ ಮಾನ ಹರಾಜು ಹಾಕುವ ಬೆದರಿಕೆ ಒಡ್ಡಿದ್ದರು.

ಇದನ್ನೂ ಓದಿ: 7,698 ಕಾರುಗಳನ್ನು ಹಿಂಪಡೆಯಲು ಮುಂದಾದ ಹ್ಯುಂಡೈ ಕಂಪನಿ.. ಕಾರಿನಲ್ಲಿ ಕಾಣಿಸಿಕೊಂಡ ಸಮಸ್ಯೆಯೇನು?

ಇತ್ತ ಆರೋಪಿಗಳು ಶ್ರೀಮಂತಿಕೆಯ ಆಸೆ ತೋರಿಸಿ ಬೆಟ್ಟಿಂಗ್ ದಂಧೆಗೆ ದರ್ಶನ್ ರನ್ನು ಪರಿಚಯಿಸಿದ್ದರು. ಮೃತ ರಂಜಿತಾ ತಂದೆ ವೆಂಕಟೇಶ್ ಈ ಕುರಿತು ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಸದ್ಯ ಮೂವರನ್ನು ಹೊಳಲ್ಕೆರೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇನ್ನುಳಿದವರಿಗಾಗಿ ಹುಡುಕಾಡುತ್ತಿದ್ದಾರೆ.

(ವಿ.ಸೂ: ಬೆಟ್ಟಿಂಗ್​ ದಂಧೆ ಕಾನೂನು ಬಾಹಿರ. ಇದರಿಂದ ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಎಚ್ಚರಿಕೆಯಿಂದಿರಿ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತಿಯ IPL ಬೆಟ್ಟಿಂಗ್​ನಿಂದ 1.5 ಕೋಟಿ ರೂಪಾಯಿ ಸಾಲ: ಮನನೊಂದು ಪತ್ನಿ ಆತ್ಮಹತ್ಯೆ; ಮೂವರು ಅರೆಸ್ಟ್​

https://newsfirstlive.com/wp-content/uploads/2024/03/Chitradurga.jpg

Load More