newsfirstkannada.com

7,698 ಕಾರುಗಳನ್ನು ಹಿಂಪಡೆಯಲು ಮುಂದಾದ ಹ್ಯುಂಡೈ ಕಂಪನಿ.. ಕಾರಿನಲ್ಲಿ ಕಾಣಿಸಿಕೊಂಡ ಸಮಸ್ಯೆಯೇನು?

Share :

Published March 26, 2024 at 1:28pm

Update March 26, 2024 at 1:31pm

  ಹ್ಯುಂಡೈ ಕಾರು ಬಳಸುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಲೇಬೇಕು

  7,698 ಕಾರುಗಳಲ್ಲಿ ಕಾಣಿಸಿಕೊಂಡ ಸಮಸ್ಯೆ ಬಗೆ ಹರಿಸಲು ಮುಂದಾದ ಕಂಪನಿ

  ಕಾರು ಮಾಲೀಕರನ್ನು ಸಂಪರ್ಕಿಸಲು ಮುಂದಾದ ಹ್ಯುಂಡೈ, ಉಚಿತವಾಗಿ ಸರಿಪಡಿಸಿಕೊಡಲಿದೆ

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹ್ಯುಂಡೈ ಭಾರತದಲ್ಲಿ ಕ್ರೆಟಾ ಎಸ್​ಯುವಿ ಮತ್ತು ವೆರ್ನಾ ಸೆಡಾನ್​ ಕಾರನ್ನು ಹಿಂಪಡೆದಿಯುತ್ತಿದೆ. ಸುಮಾರು 7,698 ಕಾರುಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಬಗೆಹರಿಸಲು ಕಾರು ಮಾಲೀಕರ ಬಳಿ ಹಿಂತಿರುಗಿಸಲು ಕೇಳಿಕೊಂಡಿದೆ.

ಫೆಬ್ರವರಿ 13, 2023ರಿಂದ ಜೂನ್​ 6, 2023ರವರೆಗೆ ತಯಾರಿಸಲಾದ ಕಾರುಗಳನ್ನು ಮಾತ್ರ ಹ್ಯುಂಡೈ ಹಿಂಪಡೆಯುವಂತೆ ಹೇಳಿದೆ. ಕಾರು ಮಾಲೀಕರು ಹತ್ತಿರದ ಹ್ಯುಂಡೈ ಡೀಲರ್​ಶಿಪ್​ಗಳನ್ನು ಭೇಟಿಯಾಗುವ ಮೂಲಕ ಯಾವುದೇ ವೆಚ್ಚವಿಲ್ಲದೆ ಸಮಸ್ಯೆ ಸರಿಪಡಿಸಿ ಕೊಡುವುದಾಗಿ ಹ್ಯುಂಡೈ ಹೇಳಿದೆ.

ಇದನ್ನೂ ಓದಿ: ಬಜಾಜ್​ ಮೊದಲ ಬಾರಿಗೆ ಸಿದ್ಧಪಡಿಸಿದೆ ಸಿಎನ್​ಜಿ ಬೈಕ್​! ಇದರ ಬೆಲೆ, ವಿಶೇಷತೆ ಏನು ಗೊತ್ತಾ?

ಸಮಸ್ಯೆ ಏನು?

ಸಿವಿಟಿ ಗೇರ್​ಬಾಕ್ಸ್​ನೊಂದಿಗೆ ಜೋಡಿಸಲಾದ 1.5 ಲೀಟರ್​ ನ್ಯಾಚುರಲ್​ ಆಸ್ಪಿರೇಟೆಡ್​ 4 ಸಿಲಿಂಡರ್​ ಪೆಟ್ರೋಲ್​ ಎಂಜಿನ್​ನಲ್ಲಿ ಸಮಸ್ಯೆಯನ್ನು ಕಂಡುಹಿಡಿಯಲಾಗಿದೆ. ಈ ಪವರ್​ಟ್ರೇನ್​ ಕಾನ್ಫಿಗರೇಶನನ್ನು ಕ್ರೆಟಾ ಮತ್ತು ವೆರ್ನಾ ಎರಡರಲ್ಲೂ ನೀಡಲಾಗಿದೆ.

ಇದೀಗ ಕಂಪನಿ ವಿಐಎನ್​ ನಂಬರ್​ ಬಳಸಿಕೊಂಡು ಕಂಪನಿ ವೆಬ್​ಸೈಟ್​ನಲ್ಲಿ ದಾಖಲಾದ ಕಾರುಗಳನ್ನು ಹಿಂಪಡೆಯಲು ಮಾಲೀಕರನ್ನು ಸಂಪರ್ಕಿಸುತ್ತಿದೆ. ಜೊತೆಗೆ ಹತ್ತಿರ ಹ್ಯುಂಡೈ ಸರ್ವೀಸ್​ ಸ್ಟೇಷನ್​ನಲ್ಲಿ ಉಚಿತವಾಗಿ ಸರಿಪಡಿಸಿಕೊಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7,698 ಕಾರುಗಳನ್ನು ಹಿಂಪಡೆಯಲು ಮುಂದಾದ ಹ್ಯುಂಡೈ ಕಂಪನಿ.. ಕಾರಿನಲ್ಲಿ ಕಾಣಿಸಿಕೊಂಡ ಸಮಸ್ಯೆಯೇನು?

https://newsfirstlive.com/wp-content/uploads/2024/03/Creta.jpg

Load More