newsfirstkannada.com

ಬಜಾಜ್​ ಮೊದಲ ಬಾರಿಗೆ ಸಿದ್ಧಪಡಿಸಿದೆ ಸಿಎನ್​ಜಿ ಬೈಕ್​! ಇದರ ಬೆಲೆ, ವಿಶೇಷತೆ ಏನು ಗೊತ್ತಾ?

Share :

Published March 26, 2024 at 12:56pm

Update March 26, 2024 at 12:57pm

    ಸಿಎನ್​ಜಿ ಮೂಲಕ ಚಲಿಸುತ್ತೆ ಬಜಾಜ್​ನ ನೂತನ ಬೈಕ್​

    ಜೂನ್​ ತಿಂಗಳಲ್ಲಿ ​ಮಾರುಕಟ್ಟೆಗೆ ಬರಲಿದೆ ನೂತನ ಸಿಎನ್​ಜಿ ಬೈಕ್

    ನೂತನ ಬೈಕ್​ ಹೆಸರೇನು? ಬೆಲೆ ಎಷ್ಟು? ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

ಪ್ರೆಟ್ರೋಲ್​ ಆಯ್ತು, ಎಲೆಕ್ಟ್ರಿಕ್​ ಆಯ್ತು, ಇದೀಗ ಜನಪ್ರಿಯ ಬಜಾಜ್​ ಕಂಪನಿ ಸಿಎನ್​ಜಿ ಚಾಲಿತ ಬೈಕ್​ ಅನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಮುಂಬರುವ ಜೂನ್​ ತಿಂಗಳಲ್ಲಿ ನೂತನ ಸಿಎನ್​ಜಿ ಬೈಕ್​ ಮಾರುಕಟ್ಟೆಗೆ ಧಾವಿಸಲಿದೆ ಎಂದು ಹೇಳಲಾಗುತ್ತಿದೆ.

ಬಜಾಜ್​ ಇದೇ ಮೊದಲ ಬಾರಿಗೆ ಮೊದಲ ಸಿಎನ್​ಜಿ ಬೈಕ್​ ಅನ್ನು ಸಿದ್ಧಪಡಿಸಿದೆ. ನೂತನ ಬೈಕ್​ಗೆ ‘ಬ್ರೂಜರ್’​ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ದ್ವಿಚಕ್ರ ಸವಾರರು ನೂತನ ಬೈಕ್​ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಸಿಎನ್​ಜಿ ಟ್ಯಾಂಕ್​

ಬ್ರೂಜರ್​ ಬೈಕ್​ ವಿನ್ಯಾಸಕ್ಕೆ ತಕ್ಕಂತೆ ಟ್ಯಾಂಕ್​ ಕೂರಿಸಲಾಗಿದೆ. ಉದ್ದವಾದ, ಸಮತಟ್ಟಾದ ಸೀಟಿನ ಕೆಳಭಾಗದಲ್ಲಿ ಟ್ಯಾಂಕ್​ ಸಂಯೋಜಿಲಾಗಿದೆ. ಇದನ್ನು ಇಂಧನ ಬಳಸಿಕೊಂಡು ಸವಾರಿ ಮಾಡುಚ ಆಯ್ಕೆಯನ್ನು ನೀಡಲಾಗಿದೆ ಎನ್ನಲಾಗುತ್ತಿದೆ

ವಿಶೇಷತೆ

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಬಜಾಜ್ಗ್ 100-160ಸಿಸಿಯಲ್ಲಿ ಬ್ರೂಜತ್​ ಅನ್ನು ಪರಿಚಯಿಸಲಿದೆ. ಇದರಲ್ಲಿ ಎಲ್​ಇಡಿ ದೀಪ, ಡಿಜಿಟಲ್​ ಇನ್ಟ್ರುಮೆಂಟ್​​ ಕ್ಲಸ್ಟರ್​, ಟೆಲೆಸ್ಕೋಪಿಕ್​ ಪೋರ್ಕ್​, ಮೊನೊಶಾಕ್​ ಸಸ್ಪೆನ್ಷನ್​ ಮತ್ತು 17 ಇಂಚಿನ ಟೈರ್​ ಅನ್ನು ಹೊಂದಿದೆ ಎನ್ನಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಬೈಕ್​ ಡಿಸ್ಕ್​ ಬ್ರೇಕ್​, ಹಿಂಭಾಗ ಡ್ರಮ್​ ಬ್ರೇಕ್​ ಹೊಂದಿದೆ.

ಇದನ್ನೂ ಓದಿ: ನಟಿ ಊರ್ಮಿಳಾಗೆ ‘ಸಾಫ್ಟ್​​ ಪೋರ್ನ್​​ ಸ್ಟಾರ್​’ ಎಂದ ಕಂಗನಾ.. ಹಳೇಯ ವಿಡಿಯೋ ಹಂಚಿಕೊಂಡ ಯುವ ಕಾಂಗ್ರೆಸ್​​ ಅಧ್ಯಕ್ಷ

ಬೆಲೆ

ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್​ ದ್ವಿಚಕ್ರ ವಾಹನಗಳ ಜೊತೆಗೆ ಎಲೆಕ್ಟ್ರಿಕ್​ ವಾಹನಗಳಿಗೇನು ಕೊರತೆಯಿಲ್ಲ. ನಾನಾ ಕಂಪನಿಗಳು ಹಲವು ವಿಶೇಷತೆಗಳನ್ನು ಒಳಗೊಂಡ ದ್ವೀಚಕ್ರ ವಾಹನವನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ಬಜಾಜ್​ ಹೊಸ ಸಿಎನ್​ಜಿ ಬೈಕ್​ ಉತ್ಪಾದನೆಯ ಮುಖ ಮಾಡಿದೆ.

ಇನ್ನು ಬಜಾಜ್​ ಸಿದ್ಧಪಡಿಸಿರುವ ನೂತನ ಸಿಎನ್​ಜಿ ಬೈಕ್​ ಬೆಲೆ 80 ಸಾವಿರ ಎಂದು ಅಂದಾಜಿಸಲಾಗಿದೆ. ಆದರೆ ಬಜಾಜ್​ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಜಾಜ್​ ಮೊದಲ ಬಾರಿಗೆ ಸಿದ್ಧಪಡಿಸಿದೆ ಸಿಎನ್​ಜಿ ಬೈಕ್​! ಇದರ ಬೆಲೆ, ವಿಶೇಷತೆ ಏನು ಗೊತ್ತಾ?

https://newsfirstlive.com/wp-content/uploads/2024/03/Bjaj-CNG.jpg

Load More