4ರಲ್ಲಿ ಒಬ್ಬ MBBS ವಿದ್ಯಾರ್ಥಿಗೆ ಭಯಾನಕ ಸಮಸ್ಯೆ; NMC ಚಿಂತೆಗೆ ಕಾರಣವಾಗಿದ್ದು ಈ ಅಂಕಿ ಅಂಶ!

author-image
Gopal Kulkarni
Updated On
4ರಲ್ಲಿ ಒಬ್ಬ MBBS ವಿದ್ಯಾರ್ಥಿಗೆ ಭಯಾನಕ ಸಮಸ್ಯೆ; NMC ಚಿಂತೆಗೆ ಕಾರಣವಾಗಿದ್ದು ಈ ಅಂಕಿ ಅಂಶ!
Advertisment
  • MBBS ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳೇ ಎಚ್ಚರವಿರಲಿ!
  • 4 ಜನರಲ್ಲಿ ಒಬ್ಬ ವಿದ್ಯಾರ್ಥಿಗೆ ಕಾಡುತ್ತಿವೆ ಹಲವು ಮನೋರೋಗ
  • ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಾಡಿದ ಸರ್ವೇಯಲ್ಲಿ ಶಾಕಿಂಗ್ ಸತ್ಯ

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಮಂಡಳಿ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಎಂಬಿಬಿಎಸ್​ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಖುದ್ದು ರಾಷ್ಟ್ರೀಯ ವೈದ್ಯಕೀಯ ಮಂಡಳಿಯೇ ಒಂದು ಹಂತಕ್ಕೆ ಚಿಂತೆಗೆ ಬಿದ್ದಿದೆ. ಇತ್ತೀಚೆಗೆ ಅದು ನಡೆಸಿದೆ ಸಮೀಕ್ಷೆಯಲ್ಲಿ ಪ್ರತಿ ನಾಲ್ಕು ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮಾನಸಿಕ ಕಾಯಿಲೆಗಳಿಂದ ಬಳುಲುತ್ತಿದ್ದಾರೆ ಅನ್ನೋ ವರದಿ ಅವರ ಕೈ ಸೇರಿದೆ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಆನ್​ಲೈನ್ ಮೂಲಕ ಮಾಡಿದ ಒಂದು ಸರ್ವೇ ಹೇಳುವ ಪ್ರಕಾರ ಭಾರತದಲ್ಲಿ ನಾಲ್ಕು ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಒಬ್ಬರು ಮೆಂಟಲ್ ಡಿಸಾರ್ಡರ್​ ಸಮಸ್ಯೆಯಿಂದ ಬಳಲುತ್ತಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಮೂರರಲ್ಲಿ ಒಬ್ಬ ವಿದ್ಯಾರ್ಥಿಯಲ್ಲಿ ಆತ್ಮಹತ್ಯೆಯಂತಾ ಆಲೋಚನೆಗಳು ಬರುತ್ತವೆ ಎಂದು ಸಮೀಕ್ಷೆಯಲ್ಲಿ ಬಯಲಾಗಿದೆ.

publive-image

ಇದನ್ನೂ ಓದಿ: ಜಗತ್ತಿಗೆ ಕೊರೊನಾ ಆಯ್ತು ಈಗ ಮಂಕಿ ಫಾಕ್ಸ್​ ಭೀತಿ; ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇದರ ಲಕ್ಷಣವೇನು?

ಈ ಅಧ್ಯಯನದಲ್ಲಿ ಬಯಲಾದ ಮತ್ತೊಂದು ವಿಷಯವೆಂದರೆ, ಈ ರೀತಿಯಾದ ಸಮಸ್ಯೆಗಳಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಅದು ಅಲ್ಲದೇ ಸಮಸ್ಯೆಗಳನ್ನು ಹೇಳಿಕೊಂಡು ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಪಡೆಯಲು ಕೂಡ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಕೂಡ ಹಿಂಜರಿಯುತ್ತಿರುವುದರಿಂದ ಈ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿವೆ.

ಅಪೆಕ್ಷ್​ ಮೆಡಿಕಲ್ ಎಜ್ಯುಕೇಷನ್ ರೆಗ್ಯುಲೇಟರಿ ಹಾಗೂ ಎನ್​ಎಮ್​ಸಿ ಕೈಗೊಂಡ ಸಮೀಕ್ಷೆಯಲ್ಲಿ ಒಟ್ಟು 25590 ಪದವಿಪೂರ್ವ, 5337 ಸ್ನಾತಕೋತ್ತರ ಪದವಿಧರರು ಹಾಗೂ 7035 ಸಿಬ್ಬಂದಿಯ ಪ್ರತಿಕ್ರಿಯೆಗಳನ್ನು ಪಡೆದು ಈ ಒಂದು ಅಧ್ಯಯನವನ್ನು ರೆಡಿ ಮಾಡಿದೆ.

publive-image

ಇದನ್ನೂ ಓದಿ:ನಾಳೆ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಹೋಗುವ ಸಾರ್ವಜನಿಕರೇ ಎಚ್ಚರ.. ಏನಿರುತ್ತೆ? ಏನಿರಲ್ಲ?
ಈ ಒಂದು ವರದಿಯ ಪ್ರಕಾರ ಮಾನಸಿಕ ಒತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಶೇಕಡಾ 27.8ರಷ್ಟಿದೆ 16.2 ಶೇಕಡಾ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯಂತಹ ವಿಚಾರಗಳು ಬರುವಂತಹ ಸಮಸ್ಯೆಗಳಿವೆ. ಇದು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚು ಸುಮಾರು ಶೇಕಡಾ 31.23ರಷ್ಟು ವಿದ್ಯಾರ್ಥಿಗಳಲ್ಲಿ ಸುಸೈಡ್​ನಂತಹ ವಿಚಾರಗಳು ಬಂದು ಹೋಗುವ ಸಮಸ್ಯೆಗಳಿಂದ ಅಂದ್ರೆ ಖಿನ್ನತೆಯಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ. ಕಳೆದ ಒಂದು ವರ್ಷದಲ್ಲಿ 10.5ರಷ್ಟು ಅಂದ್ರೆ 564 ವಿದ್ಯಾರ್ಥಿಗಳೂ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮೊಟ್ಟೆ ತಿನ್ನುವುದರಿಂದ ಆಗೋ 10 ಲಾಭಗಳೇನು..? ಸಾರ್ವಜನಿಕರು ಓದಲೇಬೇಕಾದ ಸ್ಟೋರಿ!

ಇನ್ನು ಪಿಜಿ ವಿದ್ಯಾರ್ಥಿಗಳಲ್ಲಿ ಕಳೆದ 12 ತಿಂಗಳಲ್ಲಿ ಶೇಕಡಾ 4.4 ಅಂದ್ರೆ 237 ಸ್ನಾತಕೋತ್ತರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ಬಯಲಾಗಿದೆ. ಇನ್ನೂ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಶೇಕಡಾ 41ರಷ್ಟು ಜನ, ತಮ್ಮ ಮಾನಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ರೀತಿಯ ಹಿಂಜರಿಕೆಯಲ್ಲಿದ್ದಾರೆ ಎನ್ನುವುದು ಕೂಡ ಅಧ್ಯಯನದಲ್ಲಿ ವರದಿಯಾಗಿದೆ.

ಇದಕ್ಕೆ ಕಾರಣವನ್ನು ಕೂಡ ಈ ಅಧ್ಯಯನದಲ್ಲಿ ವರದಿಯಾಗಿದೆ, ಸುಮಾರ ಶೇಕಡಾ 45 ರಷ್ಟು ಎಂಬಿಬಿಎಸ್​ ಪಿಜಿ ವಿದ್ಯಾರ್ಥಿಗಳು ಒಂದು ವಾರಕ್ಕೆ 60 ಗಂಟೆಗಳ ಕಾಲ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಇವರಲ್ಲಿ ಶೇಕಡಾ 56ರಷ್ಟು ಜನರು ತಮ್ಮ ವಾರದ ರಜೆಯಿಂದಲೂ ಕೂಡ ವಂಚಿತರಾಗಿರುತ್ತಾರೆ. ಈ ರೀತಿಯ ಅನೇಕ ಸಮಸ್ಯೆಗಳಿಂದಾಗಿ ಎಂಬಿಬಿಎಸ್ ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment