newsfirstkannada.com

2 ಹೆಲಿಕಾಪ್ಟರ್ ನಡುವೆ ಭಯಾನಕ ಡಿಕ್ಕಿ.. ಆಗಸದಲ್ಲೇ ಉಸಿರು ಚೆಲ್ಲಿದ 10 ಸಿಬ್ಬಂದಿ

Share :

Published April 23, 2024 at 11:34am

    ಆಕಾಶದಲ್ಲಿ 2 ಹೆಲಿಕಾಪ್ಟರ್ ಡಿಕ್ಕಿ ಆಗ್ತಿರುವುದು ಭಯಾನಕವಾಗಿದೆ

    90ನೇ ವಾರ್ಷಿಕೋತ್ಸವಕ್ಕಾಗಿ ಪೂರ್ವಾಭ್ಯಾಸದ ವೇಳೆ ಅವಘಡ

    ಮೃತಪಟ್ಟವರ ಗುರುತಿಗಾಗಿ ರಕ್ಷಣಾ ಪಡೆಯಿಂದ ತನಿಖೆ ಚುರುಕು

ರಾಯಲ್ ಮಲೇಷ್ಯಾ ನೇವಿಯ ಎರಡು ಹೆಲಿಕಾಪ್ಟರ್​ಗಳು ಆಗಸದಲ್ಲಿ ಡಿಕ್ಕಿಯಾದ ಪರಿಣಾಮ ಒಳಗಿದ್ದ 10 ಸಿಬ್ಬಂದಿ ಸಾವನ್ನಪ್ಪಿದ್ದಾರೆ. 2 ಹೆಲಿಕಾಪ್ಟರ್​ಗಳು ಡಿಕ್ಕಿಯಾಗುತ್ತಿರುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೆಲವೇ ಕ್ಷಣದಲ್ಲಿ ನೆಲಕ್ಕೆ ಬಿದ್ದ ಕಾಪ್ಟರ್ಸ್​ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.

ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾ ನೆಲೆಯಲ್ಲಿ ಹೆಲಿಕಾಪ್ಟರ್​ಗಳು ಅಭ್ಯಾಸ ನಡೆಸುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ. ಪರಿಣಾಮ ಎರಡು ಹೆಲಿಕಾಪ್ಟರ್​ನಲ್ಲಿದ್ದ 10 ಸಿಬ್ಬಂದಿ ಆಗಸದಲ್ಲೇ ಉಸಿರು ಚೆಲ್ಲಿದ್ದಾರೆ. ಒಂದು ಹೆಲಿಕಾಪ್ಟರ್​ನಲ್ಲಿ 7 ಮಂದಿ, ಇನ್ನೊಂದು ಹೆಲಿಕಾಪ್ಟರ್​​ನಲ್ಲಿ ಮೂವರು ಮೃತಪಟ್ಟಿದ್ದಾರೆ. ಮಲೇಷ್ಯಾದ ಉತ್ತರ ಪೆರಾಕ್​ ನೌಕಾ ನೆಲೆಯಲ್ಲಿ ನಡೆಯಲಿರುವ ರಾಯಲ್ ಮಲೇಷ್ಯಾ ನೇವಿಯ 90ನೇ ವಾರ್ಷಿಕೋತ್ಸವದ ಆಚರಣೆಯ ಪೂರ್ವಾಭ್ಯಾಸದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ ಎಂದು ಅಲ್ಲಿನ ನೌಕಾಪಡೆ ವರದಿ ಮಾಡಿದೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಥ್ಯಾಂಕ್ಸ್​ ಕೊಟ್ಟು, ತಬ್ಬಿಕೊಂಡಿದ್ದಕ್ಕೆ ಮಹಿಳಾ ASI ಅಮಾನತು

ಇದನ್ನೂ ಓದಿ: ರೋಹಿತ್​​​-ಕೊಹ್ಲಿರನ್ನ ಓವರ್​ಟೇಕ್ ಮಾಡ್ತಿರೋ ಯಂಗ್​ಸ್ಟರ್ಸ್​.. ಯುವ ಆಟಗಾರರ ಬ್ಯಾಟಿಂಗ್​ಗೆ ದಿಗ್ಗಜರು ಶಾಕ್ 

ಆಡುವ ಮೈದಾನಕ್ಕೆ ಒಂದು ಹೆಲಿಕಾಪ್ಟರ್ ಬಿದ್ದಿದ್ದರೇ ಇನ್ನೊಂದು ನೀರಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ಪಡೆ ತೆರಳಿದ್ದು ನೆಲದ ಬಿದ್ದಿರುವ ಅವಶೇಷಗಳನ್ನು ಸಂಗ್ರಹ ಮಾಡಲಾಗಿದೆ. ಈ ಅವಶೇಷಗಳನ್ನು ಆಸ್ಪತ್ರೆಗೆ ಕಳುಹಿಸುವ ಮೂಲಕ ಪರೀಕ್ಷೆ ನಂತರ ಘಟನೆಯಲ್ಲಿ ಯಾರು, ಯಾರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಹೆಲಿಕಾಪ್ಟರ್ ನಡುವೆ ಭಯಾನಕ ಡಿಕ್ಕಿ.. ಆಗಸದಲ್ಲೇ ಉಸಿರು ಚೆಲ್ಲಿದ 10 ಸಿಬ್ಬಂದಿ

https://newsfirstlive.com/wp-content/uploads/2024/04/Malaysian_Navy_Chopper.jpg

Load More