newsfirstkannada.com

ಬಿಜೆಪಿ ಅಭ್ಯರ್ಥಿಗೆ ಥ್ಯಾಂಕ್ಸ್​ ಕೊಟ್ಟು, ತಬ್ಬಿಕೊಂಡಿದ್ದಕ್ಕೆ ಮಹಿಳಾ ASI ಅಮಾನತು

Share :

Published April 23, 2024 at 10:54am

    ನಗರದ ಪೊಲೀಸ್ ಕಮಿಷನರ್​ರಿಂದ ಅಮಾನತು ಮಾಡಿ ಆದೇಶ ​

    ಬಿಜೆಪಿ ಅಭ್ಯರ್ಥಿಯನ್ನು ಕಂಡು ನಕ್ಕು, ಕೈ ಕುಲುಕಿ, ತಬ್ಬಿಕೊಂಡಿದ್ದರು

    ಠಾಣಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವಾಗ ಭದ್ರತೆಗೆ ಆಗಮಿಸಿದ್ರು

ಹೈದರಾಬಾದ್:​ ಹೈದರಾಬಾದ್​ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಪ್ರಚಾರ ಮಾಡುವಾಗ ಮಹಿಳಾ ಎಎಸ್‌ಐಯೊಬ್ಬರು ತಬ್ಬಿಕೊಂಡು ಥ್ಯಾಂಕ್ಸ್​ ನೀಡಿದ್ದರಿಂದ ಅಮಾನತುಗೊಂಡಿದ್ದಾರೆ.

ಸೈದಾಬಾದ್‌ನ ಎಎಸ್‌ಐ ಪೋಲೀಸ್ ಠಾಣೆಯ ಎಎಸ್‌ಐ ಉಮಾದೇವಿಯವರನ್ನು ಹೈದರಾಬಾದ್​ ನಗರದ ಪೊಲೀಸ್ ಕಮಿಷನರ್ ಕೆ.ಶ್ರೀನಿವಾಸ್ ರೆಡ್ಡಿಯವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ವಿಧಿಯ ಆಟ ಘೋರ! ಮುದ್ದಾದ ಕಂದಮ್ಮನ ಮೇಲೆ ಕಾರು ಹರಿಸಿದ ಅಪ್ಪ.. ಮಗು ಸಾವು

ಸೈದಾಬಾದ್​ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಭದ್ರತೆಗಾಗಿ ಮಹಿಳಾ ಎಎಸ್‌ಐ ಉಮಾದೇವಿಯವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಪ್ರಚಾರ ಮಾಡುವಾಗ ಬಿಜೆಪಿ ಅಭ್ಯರ್ಥಿಯನ್ನು ಕಂಡು ಮುಗುಳು ನಗು ನಕ್ಕು, ಕೈ ಕುಲುಕಿ, ಅಪ್ಪಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಅಲ್ಲದೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಸರ್ಕಾರಿ ಅಧಿಕಾರಿಯಾಗಿ ರಾಜಕಾರಣಿಯ ಕೈ ಕುಲುಕಿ, ಥ್ಯಾಂಕ್ಸ್​ ನೀಡಿದ್ದಕ್ಕೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರೆಂದು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಹೋರಾಟಕ್ಕೆ ಸಜ್ಜು.. ಮೋದಿ ಸರ್ಕಾರದ ವಿರುದ್ಧ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್​ ಸಮರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಅಭ್ಯರ್ಥಿಗೆ ಥ್ಯಾಂಕ್ಸ್​ ಕೊಟ್ಟು, ತಬ್ಬಿಕೊಂಡಿದ್ದಕ್ಕೆ ಮಹಿಳಾ ASI ಅಮಾನತು

https://newsfirstlive.com/wp-content/uploads/2024/04/AP_POLICE.jpg

Load More