102 ವರ್ಷದ ಅಜ್ಜಿಯ ಸಾಹಸಕ್ಕೆ ಎಲ್ರೂ ಶಾಕ್‌.. ಗಟ್ಟಿ ಗುಂಡಿಗೆ ಇದ್ದವರು ಈ ವಿಡಿಯೋ ನೋಡಿ!

author-image
Gopal Kulkarni
102 ವರ್ಷದ ಅಜ್ಜಿಯ ಸಾಹಸಕ್ಕೆ ಎಲ್ರೂ ಶಾಕ್‌.. ಗಟ್ಟಿ ಗುಂಡಿಗೆ ಇದ್ದವರು ಈ ವಿಡಿಯೋ ನೋಡಿ!
Advertisment
  • ಸಾಧಕರಿಗೆ ವಯಸ್ಸು ಒಂದು ನಂಬರ್ ಎಂದು ಸಾಕ್ಷಿಕರಿಸಿದ ವೃದ್ಧೆ
  • 102ನೇ ವಯಸ್ಸಿನಲ್ಲಿ 2100 ಅಡಿಯಿಂದ ಸ್ಕೈ ಡೈವ್ ಮಾಡಿದ ಬೈಲಿ
  • ಜೀವನೋತ್ಸಾಹಕ್ಕೆ ಉದಾಹರಣೆಯಾಗಿ ನಿಂತ 102ರ ಹರೆಯದ ಬೈಲಿ

ಲಂಡನ್: ಸಾಧನೆಗೆ ಜೀವನೋತ್ಸಾಹಕ್ಕೆ ವಯಸ್ಸು ಅನ್ನೋ ಮಿತಿ ಇರುವುದಿಲ್ಲ. ಬದುಕನ್ನ ಅತ್ಯಂತ ಉತ್ಕೃಷ್ಟವಾಗಿ ಪ್ರೀತಿಸುವವನಿಗೆ, ಉತ್ಕೃಷ್ಟವಾಗಿ ಬದುಕುವವರಿಗೆ ವಯಸ್ಸು ಕೇವಲ ಒಂದು ನಂಬರ್ ಅಷ್ಟೇ. ಯಾವ ಸಾಧನೆಗೂ ಕೂಡ ವಯಸ್ಸು ಅಡ್ಡಿಯಾಗುವುದಿಲ್ಲ ಅನ್ನೋದಕ್ಕೆ ದೊಡ್ಡ ಸಾಕ್ಷಿಯಾಗಿ, ನಿದರ್ಶನವಾಗಿ ನಿಂತಿದ್ದಾರೆ ಬ್ರಿಟನ್​ನ ಈ ಮೆನೆಟ್ ಬೈಲಿ ಅನ್ನೋ ಈ 102 ವರ್ಷದ ವೃದ್ಧೆ.

ಇದನ್ನೂ ಓದಿ:ಟೆಲಿಗ್ರಾಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್‌.. ಸಂಸ್ಥಾಪಕ, CEO ಅರೆಸ್ಟ್; ಆ್ಯಪ್ ಬ್ಯಾನ್ ಆಗುತ್ತಾ?

ಬ್ರಿಟನ್​ನ ಅತ್ಯಂತ ಹಿರಿಯ ಸ್ಕೈ ಡೈವರ್ ಅನ್ನೋ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಮೆನೆಟ್ ಬೈಲಿ. ತಮ್ಮ 102ನೇ ವಯಸ್ಸಿನಲ್ಲಿ 2100 ಮೀಟರ್ ಎತ್ತರದಿಂದ ಸ್ಕೈ ಡೈವ್ ಮಾಡುವ ಮೂಲಕ ಈ ವೃದ್ಧೆ ಹೊಸ ಇತಿಹಾಸ ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಮೆನೆಟ್ ಬೈಲಿ ತಮ್ಮ 100ನೇ ವರ್ಷದ ಹುಟ್ಟಿದ ಹಬ್ಬದ ಪ್ರಯುಕ್ತವಾಗಿ ಸಿಲ್ವರ್​ಸ್ಟೋನ್ ಮೋಟರ್​ ರೇಸಿಂಗ್ ಸರ್ಕ್ಯೂಟ್​ನ ಸ್ಪರ್ಧೆಯಲ್ಲಿ ಗಂಟೆಗೆ 210 ಕಿಲೋಮೀಟರ್ ವೇಗದಲ್ಲಿ ಫೆರಾರಿ ಕಾರ್ ಓಡಿಸಿ ದಾಖಲೆ ಬರೆದಿದ್ದರು.

ಇದನ್ನೂ ಓದಿ:ವಿಲನ್ ಚೆಲುವೆಗೆ ಕಲ್ಯಾಣ ಯೋಗ.. ಆ್ಯಮಿ ಜಾಕ್ಸನ್ ಅದ್ಧೂರಿ ಮದುವೆ ನಡೆದಿದ್ದು ಎಲ್ಲಿ? ಫೋಟೋ ಇಲ್ಲಿವೆ

ಈಗ ಬೆಕ್​ಲೆಸ್ ಏರ್​ಫೀಲ್ಡ್​ ಏರ್ಪಡಿಸಿದ್ದ ಸ್ಕೈ ಡೈವ್​ನಲ್ಲಿ ಸುಮಾರು 2100 ಮೀಟರ್ ಎತ್ತರದ ಸ್ಕೈ ಡೈವಿಂಗ್ ಮಾಡುವ ಮೂಲಕ ಸಾಧನೆಗೆ ಜೀವನೋತ್ಸಾಹಕ್ಕೆ ವಯಸ್ಸು ಎಂದಿಗೂ ಅಡ್ಡಿಯಿಲ್ಲ. ಸದಾ ಚಿಲುಮೆಯಂತಿರಲು ಬದುಕನ್ನ ಹೊಸ ಹೊಸ ಸಾಧನೆಗೆ ಒಡ್ಡಿಸಿಕೊಳ್ಳಬೇಕು ಎಂದು ಸಾರಿದ್ದಾರೆ.


">August 25, 2024

publive-image

ಬ್ರಿಟನ್​ನ ಮಾಧ್ಯಮಗಳ ಮುಂದೆ ಮಾತನಾಡಿರುವ 102ರ ಹರೆಯದ ಬೈಲಿ. 80, 90 ವಯಸ್ಸಿಗೆ ಬಂದವರು ಬದುಕೇ ಮುಗಿದು ಹೋಯ್ತು ಎಂದು ಕುಳಿತವರಿಗೆ ಸಂದೇಶ ನೀಡಲು ನಾನು ಈ ಸಾಹಸಕ್ಕೆ ಕೈ ಹಾಕಿದ್ದೆ. ಸ್ಕೈ ಡೈವ್​ ಮಾಡುವಾಗ ಆರಂಭದಲ್ಲಿ ಭಯವಾಗಿದ್ದು ನಿಜ, ಆದ್ರೆ ನಾನು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದೆ. ಇದು ನನಗೆ ಸಹಾಯವಾಯ್ತು. ವಯಸ್ಸಾಯ್ತು ಎಂದು ಮನೆಯಲ್ಲಿ ಕುಳಿತುಕೊಳ್ಳುವವರಿಗೆ ಯಾವುವೇ ವಯಸ್ಸಲ್ಲೂ ನಾವು ಚಟುವಟಿಕೆಯಿಂದ ಇರಬಹುದು ಅನ್ನೋದನ್ನ ಹೇಳಲು ನಾನು ಈ ಸಾದನೆಗೆ ಕೈ ಹಾಕಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment