ಸಾಧಕರಿಗೆ ವಯಸ್ಸು ಒಂದು ನಂಬರ್ ಎಂದು ಸಾಕ್ಷಿಕರಿಸಿದ ವೃದ್ಧೆ
102ನೇ ವಯಸ್ಸಿನಲ್ಲಿ 2100 ಅಡಿಯಿಂದ ಸ್ಕೈ ಡೈವ್ ಮಾಡಿದ ಬೈಲಿ
ಜೀವನೋತ್ಸಾಹಕ್ಕೆ ಉದಾಹರಣೆಯಾಗಿ ನಿಂತ 102ರ ಹರೆಯದ ಬೈಲಿ
ಲಂಡನ್: ಸಾಧನೆಗೆ ಜೀವನೋತ್ಸಾಹಕ್ಕೆ ವಯಸ್ಸು ಅನ್ನೋ ಮಿತಿ ಇರುವುದಿಲ್ಲ. ಬದುಕನ್ನ ಅತ್ಯಂತ ಉತ್ಕೃಷ್ಟವಾಗಿ ಪ್ರೀತಿಸುವವನಿಗೆ, ಉತ್ಕೃಷ್ಟವಾಗಿ ಬದುಕುವವರಿಗೆ ವಯಸ್ಸು ಕೇವಲ ಒಂದು ನಂಬರ್ ಅಷ್ಟೇ. ಯಾವ ಸಾಧನೆಗೂ ಕೂಡ ವಯಸ್ಸು ಅಡ್ಡಿಯಾಗುವುದಿಲ್ಲ ಅನ್ನೋದಕ್ಕೆ ದೊಡ್ಡ ಸಾಕ್ಷಿಯಾಗಿ, ನಿದರ್ಶನವಾಗಿ ನಿಂತಿದ್ದಾರೆ ಬ್ರಿಟನ್ನ ಈ ಮೆನೆಟ್ ಬೈಲಿ ಅನ್ನೋ ಈ 102 ವರ್ಷದ ವೃದ್ಧೆ.
ಇದನ್ನೂ ಓದಿ: ಟೆಲಿಗ್ರಾಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್.. ಸಂಸ್ಥಾಪಕ, CEO ಅರೆಸ್ಟ್; ಆ್ಯಪ್ ಬ್ಯಾನ್ ಆಗುತ್ತಾ?
ಬ್ರಿಟನ್ನ ಅತ್ಯಂತ ಹಿರಿಯ ಸ್ಕೈ ಡೈವರ್ ಅನ್ನೋ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಮೆನೆಟ್ ಬೈಲಿ. ತಮ್ಮ 102ನೇ ವಯಸ್ಸಿನಲ್ಲಿ 2100 ಮೀಟರ್ ಎತ್ತರದಿಂದ ಸ್ಕೈ ಡೈವ್ ಮಾಡುವ ಮೂಲಕ ಈ ವೃದ್ಧೆ ಹೊಸ ಇತಿಹಾಸ ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಮೆನೆಟ್ ಬೈಲಿ ತಮ್ಮ 100ನೇ ವರ್ಷದ ಹುಟ್ಟಿದ ಹಬ್ಬದ ಪ್ರಯುಕ್ತವಾಗಿ ಸಿಲ್ವರ್ಸ್ಟೋನ್ ಮೋಟರ್ ರೇಸಿಂಗ್ ಸರ್ಕ್ಯೂಟ್ನ ಸ್ಪರ್ಧೆಯಲ್ಲಿ ಗಂಟೆಗೆ 210 ಕಿಲೋಮೀಟರ್ ವೇಗದಲ್ಲಿ ಫೆರಾರಿ ಕಾರ್ ಓಡಿಸಿ ದಾಖಲೆ ಬರೆದಿದ್ದರು.
ಇದನ್ನೂ ಓದಿ: ವಿಲನ್ ಚೆಲುವೆಗೆ ಕಲ್ಯಾಣ ಯೋಗ.. ಆ್ಯಮಿ ಜಾಕ್ಸನ್ ಅದ್ಧೂರಿ ಮದುವೆ ನಡೆದಿದ್ದು ಎಲ್ಲಿ? ಫೋಟೋ ಇಲ್ಲಿವೆ
ಈಗ ಬೆಕ್ಲೆಸ್ ಏರ್ಫೀಲ್ಡ್ ಏರ್ಪಡಿಸಿದ್ದ ಸ್ಕೈ ಡೈವ್ನಲ್ಲಿ ಸುಮಾರು 2100 ಮೀಟರ್ ಎತ್ತರದ ಸ್ಕೈ ಡೈವಿಂಗ್ ಮಾಡುವ ಮೂಲಕ ಸಾಧನೆಗೆ ಜೀವನೋತ್ಸಾಹಕ್ಕೆ ವಯಸ್ಸು ಎಂದಿಗೂ ಅಡ್ಡಿಯಿಲ್ಲ. ಸದಾ ಚಿಲುಮೆಯಂತಿರಲು ಬದುಕನ್ನ ಹೊಸ ಹೊಸ ಸಾಧನೆಗೆ ಒಡ್ಡಿಸಿಕೊಳ್ಳಬೇಕು ಎಂದು ಸಾರಿದ್ದಾರೆ.
‘Whatever happens, don’t give up until you’re forced to’
Manette Baillie decided to mark her 102nd birthday by becoming the oldest person in Britain to jump out of a plane.
Read more: https://t.co/EtZUSGBZcT pic.twitter.com/6q8xLDZdjg
— Sky News (@SkyNews) August 25, 2024
ಬ್ರಿಟನ್ನ ಮಾಧ್ಯಮಗಳ ಮುಂದೆ ಮಾತನಾಡಿರುವ 102ರ ಹರೆಯದ ಬೈಲಿ. 80, 90 ವಯಸ್ಸಿಗೆ ಬಂದವರು ಬದುಕೇ ಮುಗಿದು ಹೋಯ್ತು ಎಂದು ಕುಳಿತವರಿಗೆ ಸಂದೇಶ ನೀಡಲು ನಾನು ಈ ಸಾಹಸಕ್ಕೆ ಕೈ ಹಾಕಿದ್ದೆ. ಸ್ಕೈ ಡೈವ್ ಮಾಡುವಾಗ ಆರಂಭದಲ್ಲಿ ಭಯವಾಗಿದ್ದು ನಿಜ, ಆದ್ರೆ ನಾನು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದೆ. ಇದು ನನಗೆ ಸಹಾಯವಾಯ್ತು. ವಯಸ್ಸಾಯ್ತು ಎಂದು ಮನೆಯಲ್ಲಿ ಕುಳಿತುಕೊಳ್ಳುವವರಿಗೆ ಯಾವುವೇ ವಯಸ್ಸಲ್ಲೂ ನಾವು ಚಟುವಟಿಕೆಯಿಂದ ಇರಬಹುದು ಅನ್ನೋದನ್ನ ಹೇಳಲು ನಾನು ಈ ಸಾದನೆಗೆ ಕೈ ಹಾಕಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ