Advertisment

ಗಾಳಿ ಮಳೆಗೆ ಭಾರೀ ಅನಾಹುತ.. ಹೋರ್ಡಿಂಗ್ ಬಿದ್ದು 12 ಜನ ಸಾವು

author-image
Ganesh
Updated On
ಗಾಳಿ ಮಳೆಗೆ ಭಾರೀ ಅನಾಹುತ.. ಹೋರ್ಡಿಂಗ್ ಬಿದ್ದು 12 ಜನ ಸಾವು
Advertisment
  • ದುರಂತದಲ್ಲಿ 64ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
  • ಗಾಯಗೊಂಡವರ ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ
  • ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಂದ ರಕ್ಷಣಾಕಾರ್ಯ

ವಾಣಿಜ್ಯ ನಗರಿ ಮುಂಬೈಯಲ್ಲಿ ನಿನ್ನೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಭೀಕರ ಮಳೆಗೆ ಕಬ್ಬಿಣದ ಹೋರ್ಡಿಂಗ್​ವೊಂದು ಕುಸಿದು ಬಿದ್ದ ಪರಿಣಾಮ,12 ಜನರು ಸಾವನ್ನಪ್ಪಿದ್ದು, 64ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಘಾಟ್ಕೋಪರ್ ಪ್ರದೇಶದಲ್ಲಿ ನಡೆದಿದೆ.

Advertisment

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ರು. ಕುಸಿದು ಬಿದ್ದ ಬೃಹತ್ ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಹಲವು ಮಂದಿಯನ್ನ ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಇದನ್ನೂ ಓದಿ:ಕುಡುಗೋಲಿನಿಂದ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ.. ತ್ರಿಬಲ್ ಮರ್ಡರ್ ಬೆನ್ನಲ್ಲೇ ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ

publive-image

ಬಿರುಗಾಳಿಯ ರಭಸಕ್ಕೆ ಮುಂಬೈನ ಘಟಕೋಪುರದ ಪೆಟ್ರೋಲ್ ಬಂಕ್ ಮೇಲೆ ದೊಡ್ಡದಾದ ಜಾಹೀರಾತು ಫಲಕ ಬಿದ್ದಿದೆ. ದೊಡ್ಡ ಜಾಹೀರಾತು ಫಲಕ ಬೀಳುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮುಂಬೈನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಮತ್ತೊಂದೆಡೆ ಮುಂಬೈನ ವಾಡಾಲದಲ್ಲಿ ಕಬ್ಬಿಣದ ಪಾರ್ಕಿಂಗ್ ಲಾಟ್‌ ಕೂಡ ಕುಸಿದು ಬಿದ್ದಿದೆ. ಭಾರಿ ಮಳೆ, ಬಿರುಗಾಳಿಯಿಂದ ಮುಂಬೈನ ಹಲವಡೆ ಭಾರೀ ಅನಾಹುತ ಸಂಭವಿಸಿದೆ.

Advertisment

ಧೂಳು ಸಹಿತ ಬಿರುಗಾಳಿಯಿಂದ ಮುಂಬೈ ಏರ್ ಪೋರ್ಟ್‌ನಲ್ಲಿ ಕೆಲ ಕಾಲ ವಿಮಾನ ಹಾರಾಟ ಸ್ಥಗಿತ ಮಾಡಲಾಗಿದೆ. ಅನೇಕ ಕಡೆಗಳಲ್ಲಿ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಬೈಕ್ ಸವಾರರು, ಕಾರ್ ಡ್ರೈವರ್‌ಗಳಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಪೊಲೀಸರು ಸಲಹೆ ನೀಡಿದ್ದಾರೆ. ಪಶ್ಚಿಮ ರೈಲ್ವೇ ಇಲಾಖೆ ಕೂಡ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

ಇದನ್ನೂ ಓದಿ:ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment