newsfirstkannada.com

ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

Share :

Published May 13, 2024 at 12:55pm

Update May 13, 2024 at 12:57pm

    ಡೆಲ್ಲಿ ವಿರುದ್ಧ 47 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ಆರ್​ಸಿಬಿ

    ಮೇ 18 ರಂದು ಸಿಎಸ್​ಕೆ ವಿರುದ್ಧ ಬೆಂಗಳೂರಲ್ಲಿ RCB ಸೆಣಸಾಟ

    ಎಲ್​ಎಸ್​ಜಿ ತಂಡವು ಮುಂಬೈ ವಿರುದ್ಧ ಸೋತರೆ ಚಾನ್ಸ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರ್​ಸಿಬಿ 47 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರ್​ಸಿಬಿಯ ಪ್ಲೇ-ಆಫ್ ಕನಸು ಇನ್ನೂ ಜೀವಂತವಾಗಿದೆ.

ಅಂದ್ಹಾಗೆ ಆರ್​ಸಿಬಿ ಪ್ಲೇ ಆಫ್ ಪ್ರವೇಶ ಮಾಡೋದು ಅಷ್ಟೊಂದು ಈಜಿ ಇಲ್ಲ. ಯಾಕೆಂದರೆ ಪ್ಲೇ ಆಫ್​ ರೇಸ್​ನಲ್ಲಿ ಎಸ್​ಆರ್​ಹೆಚ್​, ಲಕ್ನೋ, ಸಿಎಸ್​​ಕೆ ಪ್ರಬಲ ಆಕಾಂಕ್ಷಿಗಳು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸ್ವಲ್ಪ ಯಡವಟ್ಟುಗಳು ಆದರೂ ಅಥವಾ ಬೇರೆ ಯಾವುದೋ ಪಂದ್ಯದಲ್ಲಿ ಏರಿಳಿತಗಳು ಆದರೂ ಆರ್​ಸಿಬಿ ಪ್ಲೇ-ಆಫ್ ಕನಸು ಕನಸಾಗಿಯೇ ಉಳಿದು ಬಿಡಲಿದೆ.

ಇದನ್ನೂ ಓದಿ:‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ..

ವಿಶ್ವಾಸದಲ್ಲಿ ಹೈದರಾಬಾದ್..!

ಪ್ಲೇ-ಆಫ್​ ರೇಸ್​ನ ಮೂರನೇ ಸ್ಥಾನ ಸನ್ ರೈಸರ್ಸ್​ ಹೈದರಾಬಾದ್​ ಗಿಟ್ಟಿಸಿಕೊಳ್ಳೋದು ಬಹುತೇಕ ಪಕ್ಕಾ ಆಗಿದೆ. ಯಾಕೆಂದರೆ ಎಸ್​ಆರ್​ಹೆಚ್​ ಇನ್ನೂ ಎರಡೂ ಪಂದ್ಯಗಳನ್ನು ಆಡಬೇಕಿದೆ. ಈ ಎರಡು ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯದಲ್ಲಿ ಗೆದ್ದರೆ ಹೈದರಾಬಾದ್ ಸುಲಭವಾಗಿ ಪ್ಲೇ-ಆಫ್​ಗೆ ಹೋಗಲಿದೆ. ಮಾತ್ರವಲ್ಲ ಹೈದರಾಬಾದ್ ತಂಡದ ರನ್​ ರೇಟ್ ಕೂಡ ಚೆನ್ನಾಗಿ ಇರೋದ್ರಿಂದ ಸುಲಭವಾಗಿ ಮೂರನೇ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಒಂದು ವೇಳೆ ನಾಲ್ಕನೇ ಸ್ಥಾನಕ್ಕೆ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಹಣಾಹಣಿ ಏರ್ಪಟ್ಟರೆ.. ನಮ್ಮ ಆರ್​ಸಿಬಿ ದೊಡ್ಡ ಗೆಲುವನ್ನು ಸಾಧಿಸಬೇಕಿದೆ. ಅಂದರೆ 18 ರನ್​ಗಳ ಅಂತರ ಅಥವಾ 18.1 ಓವರ್​ ಒಳಗೆ ಗೆಲ್ಲಬೇಕಿದೆ. ಅಂದರೆ ಆರ್​ಸಿಬಿ ಚೇಸಿಂಗ್ ತೆಗೆದುಕೊಂಡರೆ 11 ಬಾಲ್​ಗಳು ಬಾಕಿ ಇರುವಾಗಲೇ ಗೆಲುವಿನ ದಡ ಮುಟ್ಟಬೇಕಿದೆ.

ಇದನ್ನೂ ಓದಿ:ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ

ಯಾಕೆಂದರೆ.. ಈಗಾಗಲೇ 13 ಪಂದ್ಯಗಳನ್ನು ಆಡಿರುವ ಆರ್​ಸಿಬಿ 6 ಪಂದ್ಯಗಳಲ್ಲಿ ಗೆದ್ದು +0.387 ನೆಟ್​ ರೇಟ್​ನೊಂದಿಗೆ 12 ಪಾಯಿಮಟ್ಸ್ ಗಳಿಸಿದೆ. ಆದರೆ ಸಿಎಸ್​ಕೆ ಈಗಾಗಲೇ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು +0528 ನೆಟ್ ​ರನ್​​ ರೇಟ್​ನೊಂದಿಗೆ 14 ಪಾಯಿಂಟ್​​ ಗಳಿಸಿದೆ. ಹೀಗಾಗಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆದ್ದರೆ ಎರಡೂ ತಂಡಗಳ ಪಾಯಿಂಟ್​ ಸಮಬಲ ಆಗಲಿದೆ. ನೆಟ್​ ರನ್​ ರೇಟ್​ನಲ್ಲಿ ಮುಂದಿರುವ ಸಿಎಸ್​ಕೆ ಪ್ಲೇ ಆಫ್​ಗೆ ಹೋಗುವ ಚಾನ್ಸ್ ಜಾಸ್ತಿ ಇದೆ. ಹೀಗಾಗಿ ಆರ್​ಸಿಬಿ ದೊಡ್ಡ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಮಾತ್ರವಲ್ಲ, ಮುಂಬೈ ಮತ್ತು ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ಲಕ್ನೋ ತಂಡ ಸೋತರೆ ಮಾತ್ರ ಆರ್​ಸಿಬಿ ಪ್ಲೇ-ಆಫ್​ಗೆ ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

https://newsfirstlive.com/wp-content/uploads/2024/05/RCB-vs-CSK.jpg

Load More