newsfirstkannada.com

ಪ್ಲೇ ಆಫ್ ಕನಸು ಇನ್ನೂ ಜೀವಂತ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು..!

Share :

Published May 12, 2024 at 11:07pm

Update May 12, 2024 at 11:09pm

    ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆರ್​ಸಿಬಿಗೆ 46 ರನ್​ಗಳ ಗೆಲುವು

    ಪಂತ್ ಅನುಪಸ್ಥಿತಿಯಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿಗೆ ಸೋಲು

    ಮೇ 8 ರಂದು ಚೆನ್ನೈ ಸೂಪರ್ ಕಿಂಗ್ಸ್ ಎದುರಿಸಲಿರುವ ಆರ್​ಸಿಬಿ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅದ್ಭುತವಾಗಿ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್​​ಗೆ ಹೋಗುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಕ್ಸರ್ ಪಟೇಲ್ ಮುನ್ನಡೆಸಿದ್ದರು. ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಆರ್​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತ್ತು. ನಿಗದಿತ 20 ಓವರ್​ನಲ್ಲಿ ಆರ್​ಸಿಬಿ 9 ವಿಕೆಟ್ ಕಳೆದುಕೊಂಡು 187 ರನ್​ಗಳ ಸಾಧಾರಣ ಟಾರ್ಗೆಟ್ ನೀಡಿತ್ತು.

ಇದನ್ನೂ ಓದಿ:Obstructing the Field: ದುರಾದೃಷ್ಟಕರ ರೀತಿಯಲ್ಲಿ ಔಟ್ ಆದ ಜಡೇಜಾ, ಭಾರೀ ವಿವಾದ..!

ಈ ಗುರಿಯನ್ನು ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​.. ಆಘಾತದ ಮೇಲೆ ಆಘಾತ ಅನುಭವಿಸಿತು. ಆರ್​ಸಿಬಿಯ ಮಾರಕ ಬೌಲಿಂಗ್ ದಾಳಿ ಹಾಗೂ ಫೀಲ್ಡಿಂಗ್​ನಲ್ಲಿ ನಡೆದ ಚಮತ್ಕಾರದಿಂದ 187 ರನ್​ಗಳನ್ನು ಡಿಫೆನ್ಸ್​ ಮಾಡಿಕೊಳ್ಳುವಲ್ಲಿ ಯಶಸ್ವಿ ಆಯಿತು. 19.1 ಓವರ್​​ನಲ್ಲಿ 140 ರನ್​ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಆಲ್​ಔಟ್ ಆಯಿತು. ಈ ಮೂಲಕ ಆರ್​ಸಿಬಿ 46 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಯಶ್ ದಯಾಳ್, ಗ್ರೀನ್ ತಲಾ ಒಂದೊಂದು ರನೌಟ್​ ಮೂಲಕ ವಿಕೆಟ್ ಪಡೆದರು. ಆರ್​ಸಿಬಿ ಪರ ಯಶ್ ದಯಾಳ್ 3, ಸಿರಾಜ್ 1, ಫರ್ಗುಸನ್ 2, ಸ್ವಪ್ನಿಲ್ ಸಿಂಗ್ 1, ಗ್ರೀನ್ 1 ವಿಕೆಟ್​​ ಪಡೆದರು.

ಇಲ್ಲಿಯವರೆಗೆ 13 ಪಂದ್ಯಗಳನ್ನು ಆಡಿರುವ ಆರ್​ಸಿಬಿ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಒಟ್ಟು 12 ಪಾಯಿಂಟ್ಸ್​ಗಳನ್ನು ಹೊಂದಿರುವ ಆರ್​ಸಿಬಿ, ಪ್ಲೇ-ಆಫ್​ಗೆ ಪ್ರವೇಶ ಮಾಡಲು ಸಣ್ಣ ಅವಕಾಶ ಇದೆ. ಇವತ್ತಿನ ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ನೆಟ್ ರನ್​​ ರೇಟ್ ಕೂಡ ಸುಧಾರಿಸಿದೆ. ಮುಂದಿನ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್​ಸಿಬಿ ಎದುರಿಸಲಿದೆ. ಅಲ್ಲಿ ಏನಾದರೂ ಚಮತ್ಕಾರ ಮಾಡಿದರೆ ಆರ್​ಸಿಬಿ ಪ್ಲೇ-ಆಫ್​ಗೆ ಹೋಗೋದು ಬಹುತೇಕ ಪಕ್ಕಾ ಆಗಿದೆ.

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪ್ಲೇ ಆಫ್ ಕನಸು ಇನ್ನೂ ಜೀವಂತ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು..!

https://newsfirstlive.com/wp-content/uploads/2024/05/RCB-41.jpg

Load More