newsfirstkannada.com

Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

Share :

Published May 10, 2024 at 2:28pm

Update May 10, 2024 at 2:30pm

    Beat the Heat ಹೆಸರಲ್ಲಿ ಕೇಂದ್ರ ಮಾರ್ಗಸೂಚಿ

    ಬಿಸಿಲಿನಿಂದ ನಿಮ್ಮನ್ನು ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ

    ಮನೆಯಿಂದ ಹೊರಗೆ ಹೋಗುವ ಮುನ್ನ ಹುಷಾರ್..!

ಇದು ಹೇಳಿ, ಕೇಳಿ ಬೇಸಿಗೆ ಕಾಲ. ಬಿಸಿಲಿನಲ್ಲಿ ಮನೆಯಿಂದ ಹೊರಗೆ ಹೋಗೋದ್ರಿಂದ ಅನೇಕರು ನಿರ್ಜಲೀಕರಣಕ್ಕೆ ಬಲಿ ಆಗ್ತಾರೆ. ದೇಶದಲ್ಲಿ ಬಿಸಿಗಾಳಿ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ವಿಶೇಷ ಮಾರ್ಗಸೂಚಿ ಹೊರಡಿಸಿದೆ.

‘ಬೀಟ್ ದಿ ಹೀಟ್’ (Beat the Heat) ಹೆಸರಲ್ಲಿ ಹೊರಡಿಸಿದ ಮಾರ್ಗಸೂಚಿಯಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ನಿಮ್ಮನ್ನು ಹೈಡ್ರೀಕರಿಸಿದ ಮತ್ತು ತಂಪಾಗಿರಿಸಲು ಸಾಕಷ್ಟು ನೀರು ಕುಡಿಯುವಂತೆ ಸಲಹೆ ನೀಡಿದೆ. ಜೊತೆಗೆ ವ್ಯಕ್ತಿ ಪ್ರಜ್ಞೆ ತಪ್ಪಿದರೆ ಮೊದಲು ಏನು ಮಾಡಬೇಕು ಅಂತಲೂ ತಿಳಿಸಿದೆ.

ಇದನ್ನೂ ಓದಿ:ಅಂದು ಧೋನಿಯನ್ನೂ ಕೆಳಗೆ ಇಳಿಸಿದ್ದ ಗೋಯೆಂಕಾ.. ಧೋನಿಯಂತೆಯೇ ರಾಹುಲ್​ಗೂ ಶಿಕ್ಷೆ..?

ಮಾರ್ಗ ಸೂಚಿಯಲ್ಲಿ ಏನಿದೆ?
ಶಾಖದ ಅಲೆಯಿಂದ ಸುರಕ್ಷಿತವಾಗಿರೋದು ಮುಖ್ಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಶಾಖದಿಂದ ನರಗಳ ಸಮಸ್ಯೆ ಉಂಟಾಗುತ್ತದೆ. ದೇಹವನ್ನು ತಂಪಾಗಿರಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮನ್ನು ಹೈಡ್ರೀಕರಿಸಿ, ಅದಕ್ಕೆ ಸಾಧ್ಯವಾದಷ್ಟು ನೀರು ಕುಡಿಯಿರಿ. ನೀವು ಫಿಟ್ ಆಗಿರಬೇಕು ಅಂದರೂ ನೀರು ಕುಡಿಯಿರಿ. ಹತ್ತಿ ಬಟ್ಟೆಗಳನ್ನು ಧರಿಸೋದು ಉತ್ತಮ. ಮನೆಯಲ್ಲಿ ಅಥವಾ ತಂಪಾದ ಸ್ಥಳಗಳಲ್ಲಿ ಇರಿ. ಈ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ ತಕ್ಷಣವೇ ಅವನಿಗೆ ಕುಡಿಯಲು ನೀರನ್ನು ನೀಡಬೇಡಿ ಎಂದು ಸಲಹೆ ನೀಡಿದೆ.

ತಜ್ಞರು ಏನು ಹೇಳುತ್ತಾರೆ?
ಆರೋಗ್ಯ ತಜ್ಞರ ಪ್ರಕಾರ.. ಒಬ್ಬ ವ್ಯಕ್ತಿಯು ಬಿಸಿಲಿನಲ್ಲಿ ಪ್ರಜ್ಞಾಹೀನನಾಗಿದ್ದರೆ ಅವನಿಗೆ ನೀರು ನೀಡುವ ತಪ್ಪನ್ನು ಮಾಡಬಾರದು. ಏಕೆಂದರೆ ಆತ ನೀರು ಕುಡಿಯಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾನೆ. ಈ ಸಂದರ್ಭದಲ್ಲಿ ನೀರು ಹೊಟ್ಟೆಗೆ ಬದಲಾಗಿ ಶ್ವಾಸಕೋಶಕ್ಕೆ ಹೋಗಬಹುದು. ಇದು ಉಸಿರಾಟದಲ್ಲಿ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ.

ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್​ ಟೇಬಲ್ ಏನಾಯ್ತು..?

ಒಂದು ವೇಳೆ ನೀರು ಶ್ವಾಸಕೋಶಕ್ಕೆ ಹೋದರೆ ನ್ಯುಮೋನಿಯಾಗೆ ಬಲಿಯಾಗಬಹುದು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ, ನೀರಿನಂತಹ ದ್ರವವನ್ನು ತಪ್ಪಾಗಿ ನೀಡಲಾಗುತ್ತದೆ. ಇದರಿಂದ ರಕ್ತದಲ್ಲಿನ ಎಲೆಕ್ಟ್ರೋಲೈಟ್‌ಗಳ ಬ್ಯಾಲೆನ್ಸ್ ಕಷ್ಟವಾಗುತ್ತದೆ. ನಂತರ ಹೃದಯ ಸಂಬಂಧಿ ಸಮಸ್ಯೆಗಳು ಶುರುವಾಗುತ್ತವೆ ಎನ್ನುತ್ತಾರೆ ವೈದ್ಯರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

https://newsfirstlive.com/wp-content/uploads/2024/02/HEAT-WAVES.jpg

Load More