newsfirstkannada.com

ಅಂದು ಧೋನಿ ಕೆಳಗೆ ಇಳಿಸಿದ್ದ ಗೋಯೆಂಕಾ.. ಇಂದು KL ರಾಹುಲ್ ಅಷ್ಟೇ..!

Share :

Published May 10, 2024 at 1:54pm

Update May 11, 2024 at 6:23am

  ಕನ್ನಡಿಗನಿಗೂ ನಾಯಕತ್ವದಿಂದ ನೀಡ್ತಾರಾ ಕೊಕ್..?

  ಲಕ್ನೋ ಸೂಪರ್ ಜೈಂಟ್ಸ್ ಆಟಕ್ಕೆ ಮಾಲೀಕ ಗರಂ

  ಕೆ.ಎಲ್.ರಾಹುಲ್​ಗೆ ಸಂಜೀವ್ ಗೋಯೆಂಕಾ ತರಾಟೆ

ಐಪಿಎಲ್​ ಹಿಸ್ಟರಿಯಲ್ಲೇ ಲಕ್ನೋ ಹೀನಾಯ ಸೋಲು ಕಂಡಿದೆ. ಈ ಹೀನಾಯ ಸೋಲಿಗೆ ಭಾರೀ ದಂಡವನ್ನೇ ತೆತ್ತಿದೆ. ಇದೇ ಸೋಲು ಲಕ್ನೋ ತಂಡದ ಮಾಲೀಕ ಹಾಗೂ ನಾಯಕ ನಡುವಿನ ಜಗಳಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ.. ಮಾಲೀಕರ ನಡೆ ಭಾರೀ ವಿವಾದಕ್ಕೂ ಕಾರಣವಾಗಿದೆ.

ಕ್ರಿಕೆಟ್​.. ಜಂಟಲ್​ಮನ್ ಗೇಮ್.. ಈ ಜಂಟಲ್​ಮನ್ ಗೇಮ್​ನಲ್ಲಿ ಸೋಲು ಹಾಗೂ ಗೆಲುವು ಕಾಮನ್. ಆದ್ರೆ, ಸೋಲು, ಗೆಲುವುಗಳನ್ನ ಸಮನಾಗಿ ಸ್ವೀಕರಿಸುವುದೇ ಆಟಗಾರನ ಲಕ್ಷಣ.. ಸೋತಾಕ್ಷಣ ಕುಗ್ಗುವುದು. ಗೆದ್ದಾಗ ಹಿಗ್ಗುವುದು ಆಟಗಾರನ ಏಳ್ಗೆಗೆ ಒಳಿತಲ್ಲ. ಆದ್ರೆ, ಒಂದೇ ಒಂದು ಹೀನಾಯ ಸೋಲು ಲಕ್ನೋ ಮಾಲೀಕನ ನಿಜಬಣ್ಣ ಬಯಲಾಗಿಸಿದೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

ಸನ್ ​ರೈಸರ್ಸ್ ಹೈದ್ರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 10 ವಿಕೆಟ್​ಗಳ ಹೀನಾಯ ಸೋಲು ಕಾಣ್ತು. ಇದರೊಂದಿಗೆ ಲಕ್ನೋ ಪ್ಲೇ ಆಫ್​ ಹಾದಿಯೂ ದುರ್ಗಮವಾಗಿದೆ. ಇದೇ ವಿಚಾರ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾರ ಪಿತ್ತ ನೆತ್ತಿಗೇರಿಸಿದೆ.

ಕೆ.ಎಲ್.ರಾಹುಲ್​ಗೆ ಸಂಜೀವ್ ಗೋಯೆಂಕಾ ತರಾಟೆ
ಸನ್ ರೈಸರ್ಸ್​ ಎದುರಿನ ಪಂದ್ಯ ಲಕ್ನೋ ಪಾಲಿಗೆ ಮಹತ್ವದ್ದಾಗಿತ್ತು. ಆದ್ರೆ, ಈ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಲಕ್ನೋ, ಕನಿಷ್ಠ ಪಕ್ಷ ಪ್ರತಿರೋಧವನ್ನು ತೋರದೆ ಶರಣಾಯ್ತು. 9.4 ಓವರ್​ಗಳಲ್ಲೇ ಸೋಲು ಒಪ್ಪಿಕೊಳ್ಳುವ ಮೂಲಕ ಹೀನಾಯ ದಾಖಲೆ ಬರೆಯಿತು. ಆದ್ರೆ, ಲಕ್ನೋ ತಂಡದ ಈ ಸೋಲು ಮಾಲೀಕ ಸಂಜೀವ್​ ಗೋಯೆಂಕಾ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:KL ರಾಹುಲ್​ ಕ್ಯಾಪ್ಟನ್ಸಿಗೆ ಕೊಕ್ ನೀಡುವ ಬಗ್ಗೆ ಮೌನ ಮುರಿದ LSG ಮ್ಯಾನೇಜ್ಮೆಂಟ್..!

ಪಂದ್ಯದ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ ಕೆ.ಎಲ್.ರಾಹುಲ್, ಮಾಲೀಕ ಸಂಜೀವ್ ಗೋಯೆಂಕಾರನ್ನ ಭೇಟಿಯಾದರು. ಈ ವೇಳೆ ಸಾರ್ವಜನಿಕವಾಗೇ ಕೆ.ಎಲ್.ರಾಹುಲ್​​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆನ್​ಫೀಲ್ಡ್​ನಲ್ಲಾದ ತಪ್ಪುಗಳ ಬಗ್ಗೆ ಕಿಡಿಕಾರಿದ್ದಾರೆ. ಕನ್ನಡಿಗ​​​​​​ನ ಮಾತನ್ನು ಕೇಳಿಸಿಕೊಳ್ಳುವ ಸಂಯಮ ತೋರದ ಗೋಯೆಂಕಾ, ಏರುಧ್ವನಿಯಲ್ಲೇ ರಾಹುಲ್​​ನ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೆಲ ಕಾಮೆಂಟೇಟರ್​ಗಳು ಪ್ರತಿಕ್ರಿಯೆ ನೀಡಿದ್ದಾರೆ.

ಚರ್ಚೆ ಆರೋಗ್ಯಕವಾಗಿರಬೇಕು..!
ಚರ್ಚೆಗಳು ಯಾವಾಗಲೂ ಆರೋಗ್ಯಕರವಾಗಿರುತ್ತವೆ. ಆದರೆ, ಅದು ಖಾಸಗಿ ಸ್ಥಳದಲ್ಲಿ ನಡೆದರೆ ಉತ್ತಮವಾಗಿರುತ್ತೆ-ಎಸ್.ಬದ್ರಿನಾಥ್​, ಮಾಜಿ ಕ್ರಿಕೆಟರ್

LSG ತೊರೆದು RCB ಸೇರುವಂತೆ ಫ್ಯಾನ್ಸ್ ಮನವಿ
ಕೆ.ಎಲ್.ರಾಹುಲ್​ ಜೊತೆ ಸಂಜೀವ್ ಗೋಯೆಂಕಾ ನಡೆದುಕೊಂಡ ವರ್ತನೆ ಬಗ್ಗೆ ಫ್ಯಾನ್ಸ್​ ಕಿಡಿಕಾರಿದ್ದಾರೆ. ಕ್ರಿಕೆಟ್​​ನ ಗಂಧಗಾಳಿಯೇ ಗೊತ್ತಿಲ್ಲದ ಗೋಯೆಂಕಾ, ತಂಡದ ಮಾಲೀಕನಾಗಲು ಅರ್ಹನಲ್ಲ ಎಂದು ಕಿಡಿಕಾರಿದ್ದಾರೆ. ನಾಯಕನ ಮೇಲೆ ಕೂಗಾಡೋದು ಸರಿಯಲ್ಲ ಎಂದಿರುವ ಅಭಿಮಾನಿಗಳು, ಡ್ರೆಸ್ಸಿಂಗ್‌ ರೂಮ್‌ನಲ್ಲಿ ಚರ್ಚಿಸಿದ್ದರೆ, ನಿಮಗೊಂದು ಘನತೆ ಇರುತ್ತಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ.! ಮೆಗಾ ಹರಾಜಿನ ವೇಳೆ ತಂಡವನ್ನ ತೊರೆಯುವಂತೆ ಕೆ.ಎಲ್.ರಾಹುಲ್​​ಗೆ ಸಲಹೆ ನೀಡಿರುವ ಫ್ಯಾನ್ಸ್​, ಆರ್​ಸಿಬಿಗೆ ಬರುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಧೋನಿಯಂತೆಯೇ ಆಗುತ್ತಾ ಕೆ.ಎಲ್.ರಾಹುಲ್ ಹಣೆಬರಹ..?
2016ರ ಐಪಿಎಲ್​ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಮಾಲೀಕರಾಗಿದ್ದ ಸಂಜಯ್​​​​ ಗೋಯೆಂಕಾ, 2017ರಲ್ಲಿ ಧೋನಿಯನ್ನ ತಂಡದ ನಾಯಕತ್ವದ ಸ್ಥಾನದಿಂದ ಕೆಳಗಿಳಿಸಿದ್ರು. ಇದಕ್ಕೆ ಕಾರಣ 2016ರಲ್ಲಿ ರೈಸಿಂಗ್ ಪುಣೆ ನೀಡಿದ್ದ ಪರ್ಪಾಮೆನ್ಸ್ ಆಗಿತ್ತು. 2016ರಲ್ಲಿ ಧೋನಿ ನಾಯಕತ್ವದಲ್ಲಿ 14 ಪಂದ್ಯಗಳ ಪೈಕಿ 5 ಪಂದ್ಯಗಳನ್ನಷ್ಟೇ ಗೆದ್ದು 7ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಇದಕ್ಕೆ ಕುಪಿತರಾಗಿದ್ದ ಸಂಜಯ್ ಗೋಯೆಂಕಾ, ಧೋನಿಯನ್ನ ನಾಯಕತ್ವದ ಪಟ್ಟದಿಂದಲೇ ಕೆಳಗಿಳಿಸಿ ಸ್ಟೀವ್ ಸ್ಮಿತ್​ಗೆ ನಾಯಕನ ಪಟ್ಟ ಕಟ್ಟಿತ್ತು. ಇದೀಗ ಲಕ್ನೋ ಫ್ರಾಂಚೈಸಿ ಮಾಲೀಕ ಅಂದು ತಾಳಿದ ನಿಲುವನ್ನೇ ರಾಹುಲ್ ವಿಚಾರ ತಾಳುತ್ತಾರಾ ? ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.

ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್​ ಟೇಬಲ್ ಏನಾಯ್ತು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಂದು ಧೋನಿ ಕೆಳಗೆ ಇಳಿಸಿದ್ದ ಗೋಯೆಂಕಾ.. ಇಂದು KL ರಾಹುಲ್ ಅಷ್ಟೇ..!

https://newsfirstlive.com/wp-content/uploads/2024/05/DHONI-and-rahul.jpg

Load More