newsfirstkannada.com

RCBಗೆ ಆರಂಭದಲ್ಲೇ ಆಘಾತ.. ಡಬಲ್ ಶಾಕ್ ಕೊಟ್ಟಿದ್ದ ಪಂಜಾಬ್ ತಂಡದ ಕನ್ನಡಿಗ..!

Share :

Published May 10, 2024 at 10:28am

Update May 10, 2024 at 10:29am

    ವಿರಾಟ್ ಕೊಹ್ಲಿ ವೀರಾವೇಶಕ್ಕೆ ಪಂಜಾಬ್​ ಕಂಗಾಲ್​

    ಸತತ 4ನೇ ವಿಕ್ಟರಿ.. ಪ್ಲೇಆಫ್ ಆಸೆ ಇನ್ನೂ ಜೀವಂತ

    ಪಂಜಾಬ್​​ಗೆ ಪಂಚ್..​​​​ 60 ರನ್​ಗಳ ಭರ್ಜರಿ ಜಯ

ಐಪಿಎಲ್​​​​​​​ ರಣರಂಗದಲ್ಲಿ ಆರ್​ಸಿಬಿ ದರ್ಬಾರ್​​ ಮುಂದುವರಿದಿದೆ. ತವರಿನಲ್ಲಿ ಪಂಜಾಬ್​ ಸೊಲ್ಲಡಗಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಆರ್​ಸಿಬಿ ಸೂಪರ್​ ಆಟವಾಡ್ತು. ಕಿಂಗ್ ಕೊಹ್ಲಿ ಹಾಗೂ ರಜತ್ ಪಟೀದಾರ್​ ಬೆಂಕಿ ಆಟಕ್ಕೆ ಪಂಜಾಬ್​​ ಬಾಯ್ಸ್​​ ಗಪ್​ಚುಪ್ ಆದ್ರು.

ಪಂಜಾಬ್ ಸಿಂಹಗಳನ್ನ ಬೇಟೆಯಾಡಿದ RCB ಹುಲಿಗಳು
ಕಂಪ್ಲೀಟ್ ಡಾಮಿನೆಂಟ್​​. ಧರ್ಮಶಾಲಾ ಕಾಳಗದಲ್ಲಿ ನಿನ್ನೆ ನಡೆದಿದ್ದು ಆರ್​ಸಿಬಿ ಏಕಪಕ್ಷೀಯ ಪಾರಮ್ಯ. ಡು ಆರ್ ಡೈ ಬ್ಯಾಟಲ್​ನಲ್ಲಿ ಪಂಜಾಬ್ ತಂಡವನ್ನ​​ ಸದೆಬಡಿದಿದೆ. ಆ ಮೂಲಕ 17ನೇ ಐಪಿಎಲ್​ನಲ್ಲಿ ಸತತ 4ನೇ ಗೆಲುವು ದಾಖಲಿಸಿ, ಪ್ಲೇಆಫ್​ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ತವರಿನಲ್ಲಿ ಮುಗ್ಗರಿಸಿದ ಪಂಜಾಬ್​ ಎರಡನೇ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿದೆ.

ಇದನ್ನೂ ಓದಿ:ಟಾಟಾ ಸ್ಟೀಲ್​ನ ಬ್ಯುಸಿನೆಸ್ ಹೆಡ್ ಹತ್ಯೆಗೈದಿದ್ದ ಆರೋಪಿ ಅಕ್ಕಿ ಎನ್​​ಕೌಂಟರ್​..!

ಡಬಲ್​ ಶಾಕ್​ ಕೊಟ್ಟ ಕನ್ನಡಿಗ ವಿಧ್ವತ್ ಕಾವೇರಪ್ಪ
ಧರ್ಮಶಾಲಾ ದಂಗಲ್​ನಲ್ಲಿ ಆರ್​ಸಿಬಿಗೆ ಟಾಸ್ ಕೈಕೊಡ್ತು. ಇನ್ನೊಂದೆಡೆ ಉತ್ತಮ ಆರಂಭವು ಸಿಗಲಿಲ್ಲ. ಐಪಿಎಲ್​​ಗೆ ಡೆಬ್ಯು ಮಾಡಿದ ವಿಧ್ವತ್ ಕಾವೇರಪ್ಪ ಆರಂಭದಲ್ಲೆ ಡಬಲ್​ ಶಾಕ್​​ ನೀಡಿದ್ರು. ಕ್ಯಾಪ್ಟನ್​ ಫಾಫ್​​ ಡುಪ್ಲೆಸಿ ಹಾಗೂ ಡೇಂಜರಸ್​​ ವಿಲ್​ ಜಾಕ್ಸ್​ಗೆ ಕಾವೇರಪ್ಪ ಬೇಗನೆ ಪೆವಿಲಿಯನ್ ದಾರಿ ತೋರಿಸಿದ್ರು.

ರನ್​ ಸುನಾಮಿ ಎಬ್ಬಿಸಿದ ಪಟೀದಾರ್​​​-ಕಿಂಗ್ ಕೊಹ್ಲಿ
3ನೇ ವಿಕೆಟ್​ಗೆ ಒಂದಾದ ಕಿಂಗ್ ಕೊಹ್ಲಿ ಹಾಗೂ ರಜತ್ ಪಟೀದಾರ್​ ರನ್ ಸುನಾಮಿ ಎಬ್ಬಿಸಿದ್ರು. ಬೌಲರ್​ಗಳನ್ನ ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ ಸ್ಫೋಟಕ 76 ರನ್​ ಚಚ್ಚಿದ್ರು. 239.13 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ ಪಟೀದಾರ್​ 21 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಹೊರನಡೆದ್ರು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸ್ತು.

ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್​ ಟೇಬಲ್ ಏನಾಯ್ತು..?

197.75 ಸ್ಟ್ರೈಕ್​ರೇಟ್​​​.. ಸ್ಫೋಟಕ 92 ರನ್​ ಚಚ್ಚಿದ ಕೊಹ್ಲಿ
30 ನಿಮಿಷಗಳ ಬಳಿಕ ಪಂದ್ಯ ಮತ್ತೆ ಆರಂಭಗೊಳ್ತು. ಆ ಬಳಿಕ ಧರ್ಮಶಾಲಾ ನಡೆದಿದ್ದು ಕಿಂಗ್ ಕೊಹ್ಲಿ ಬ್ಯಾಟಿಂಗ್ ರೌದ್ರನರ್ತನ. ಕ್ಲಾಸ್​ ಅಂಡ್ ಮಾಸ್​​​ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ಸಿಡಿಲಬ್ಬರದ 92 ರನ್​ ಗಳಿಸಿ ಶತಕದ ಹೊಸ್ತಿಲಲ್ಲಿ ಎಡವಿದ್ರು. ಇವರು ಸಿಡಿಸಿದ 7 ಬೌಂಡ್ರಿ ಹಾಗೂ 6 ಸಿಕ್ಸರ್​​​​ಗೆ ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು. ಸ್ಲಾಗ್ ಓವರ್​ಗಳಲ್ಲಿ ಆರ್​ಸಿಬಿ ಹುಲಿಗಳು ಘರ್ಜಿಸಿದ್ರು. ಫಿನಿಶರ್ ದಿನೇಶ್ ಕಾರ್ತಿಕ್​ 18 ಹಾಗೂ ಕ್ಯಾಮರೂನ್ ಗ್ರೀನ್​ ಬಿರುಸಿನ 46 ರನ್ ಗಳಿಸಿದ್ರು. ಫೈನಲಿ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ ಬೃಹತ್ 241 ರನ್ ಕಲೆಹಾಕ್ತು.

ಇದನ್ನೂ ಓದಿ:ಬೆಂಗಳೂರಲ್ಲಿ ಮಳೆ.. ಮಳೆ.. ಹವಾಮಾನ ಇಲಾಖೆಯಿಂದ ಮತ್ತೊಂದು ಎಚ್ಚರಿಕೆ..!

ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್​​ ಬ್ಯಾಟರ್ಸ್​ ಆರಂಭದಿಂದಲೇ ಅಬ್ಬರಿಸಿದ್ರು. ಮೊದಲ 6 ಓವರ್​ ಮುಕ್ತಾಯಕ್ಕೆ 75 ರನ್ ಬಾರಿಸ್ತು. ಪ್ರಭ್​​ಸಿಮ್ರನ್​​ ಸಿಂಗ್​ ಒಂದಂಕಿ ಸುತ್ತಿದ್ರೆ, ಜಾನಿ ಬೇರ್​ಸ್ಟೋವ್​ 25ಕ್ಕೆ ಆಟ ನಿಲ್ಲಿಸಿದ್ರು. ಆದರೆ ಬೌಲರ್ಸ್​ ಕಂಗೆಡಿಸಿದ ರೈಲಿ ರೂಸ್ಸೋ ಸ್ಪೋಟಕ 61 ಗಳಿಸಿ ಕರನ್​​ ಶರ್ಮಾಗೆ ವಿಕೆಟ್ ಒಪ್ಪಿಸಿದ್ರು.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ಗೇಮ್ ಚೇಂಜರ್ ಶಶಾಂಕ್​ಗೆ ರನೌಟ್​​​ ಶಾಕ್ ಕೊಟ್ಟ ಕೊಹ್ಲಿ
19 ಎಸೆತಗಳಲ್ಲಿ 37 ರನ್​ ಸಿಡಿಸಿದ್ದ ಗೇಮ್ ಚೇಂಜರ್​ ಶಶಾಂಕ್​​ ಸಿಂಗ್​​ ಕಂಟಕವಾಗಿ ಪರಿಣಮಿಸಿದ್ರು. ಈ ವೇಳೆ ಕೊಹ್ಲಿ, ಶಶಾಂಕ್​ರನ್ನ ಅದ್ಭುತವಾಗಿ ರನೌಟ್​ ಬಲೆಗೆ ಬೀಳಿಸಿದ್ರು. ಬಳಿಕ ಯಾರೊಬ್ಬರು ಅಬ್ಬರಿಸಲಿಲ್ಲ. ಅಶುತೋಷ್​ ಶರ್ಮಾ, ಕ್ಯಾಪ್ಟನ್​ ಸ್ಯಾಮ್​ ಕರನ್​​ ಹೀಗೆ ಬಂದು ಹಾಗೇ ಹೋದ್ರು. ಫೈನಲಿ ಪಂಜಾಬ್​​​ 181ಕ್ಕೆ ಆಲೌಟಾಗಿ, 60 ರನ್​ಗಳಿಂದ ಸೋಲೊಪ್ಪಿಕೊಳ್ತು.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCBಗೆ ಆರಂಭದಲ್ಲೇ ಆಘಾತ.. ಡಬಲ್ ಶಾಕ್ ಕೊಟ್ಟಿದ್ದ ಪಂಜಾಬ್ ತಂಡದ ಕನ್ನಡಿಗ..!

https://newsfirstlive.com/wp-content/uploads/2024/05/VIDHWATH-KAVERAPPA.jpg

Load More