newsfirstkannada.com

ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

Share :

Published May 10, 2024 at 1:35pm

    ಯಾರು, ಸೋಲಬೇಕು? ಯಾರು ಗೆಲ್ಲಬೇಕು..?

    ಆರ್​ಸಿಬಿ ಪ್ಲೇ ಆಫ್ ಕನಸಿಗೆ ಕಲ್ಲುಮುಳ್ಳುಗಳ ಸವಾಲ್

    ಕಪ್ ಗೆಲ್ಲಲು ಕೊಹ್ಲಿ-ಫಾಫ್ ಮಾಡಬೇಕಾಗಿದ್ದು ಏನು?

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಸತತ 4 ಪಂದ್ಯಗಳನ್ನು ಗೆದ್ದುಕೊಂಡು ಪ್ಲೇ-ಆಫ್ ಕನಸು ಕಾಣುತ್ತಿದೆ. ಅಂದ್ಹಾಗೆ ಆರ್​ಸಿಬಿಯ ಪ್ಲೇ-ಆಫ್ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿದೆ. ಅಂದುಕೊಂಡಷ್ಟು ಪ್ಲೇ-ಆಫ್ ಹಾದಿ ಸುಲಭ ಇಲ್ಲವೇ ಇಲ್ಲ.

ಯಾಕೆಂದರೆ.. ಸದ್ಯದ ಪಾಯಿಂಟ್ಸ್ ಟೇಬಲ್​​ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್​, ರಾಜಸ್ಥಾನ್ ರಾಯಲ್ಸ್​ ಟಾಪ್​ನಲ್ಲಿವೆ. ಈ ಎರಡು ತಂಡಗಳು ಈಗಾಗಲೇ 16 ಅಂಕಗಳನ್ನು ಗಳಿಸಿರೋದ್ರಿಂದ ಪ್ಲೇ-ಆಫ್ ಹಾದಿ ಸುಗಮವಾಗಿದೆ. ಜೊತೆಗೆ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಪ್ಲೇ-ಆಫ್ ಪ್ರವೇಶಿಸಲು ಪೈಪೋಟಿ ನಡೆಸುತ್ತಿವೆ.

ಇದನ್ನೂ ಓದಿ:KL ರಾಹುಲ್​ ಕ್ಯಾಪ್ಟನ್ಸಿಗೆ ಕೊಕ್ ನೀಡುವ ಬಗ್ಗೆ ಮೌನ ಮುರಿದ LSG ಮ್ಯಾನೇಜ್ಮೆಂಟ್..!

ಆರ್​ಸಿಬಿ ತಂಡವು ಪ್ಲೇ-ಆಫ್​ಗೆ ಪ್ರವೇಶ ಮಾಡಬೇಕು ಅಂದರೆ..

ಈಗಾಗಲೇ 12 ಪಂದ್ಯಗಳನ್ನು ಆಡಿ 7 ಪಂದ್ಯಗಳನ್ನು ಗೆದ್ದಿರುವ ಹೈದರಾಬಾದ್ 14 ಅಂಕಗಳನ್ನು ಹೊಂದಿದೆ. ಇತ್ತ ಚೆನ್ನೈ 11 ಪಂದ್ಯಗಳನ್ನು ಆಡಿ 6 ರಲ್ಲಿ ಗೆದ್ದು 12 ಅಂಕಗಳೊಂದಿಗೆ ಪ್ಲೇ-ಆಫ್ ಲೆಕ್ಕಾಚಾರ ಹಾಕ್ತಿದೆ. ಈ ಎರಡು ತಂಡಗಳ ಜೊತೆ ಆರ್​ಸಿಬಿ ಪ್ಲೇ-ಆಫ್ ಪ್ರವೇಶಿಸಲು ಪ್ರಬಲ ಪೈಪೋಟಿ ನೀಡಬೇಕಿದೆ. ಹೈದರಾಬಾದ್, ಚೆನ್ನೈ ತಂಡಗಳು ಉಳಿದ ಪಂದ್ಯಗಳಲ್ಲಿ ಸೋಲಬೇಕು. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಎಲ್​ಎಸ್​ಜಿ ತಂಡದ ಸೋಲು ಗೆಲುವಿನ ಮೇಲೂ ಆರ್​ಸಿಬಿ ಭವಿಷ್ಯ ನಿಂತಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಅದು ಹೇಗೆಂದರೆ..

ಸದ್ಯ ಫಾಫ್ ನೇತೃತ್ವದ ಆರ್​ಸಿಬಿ ತಂಡವು 5 ಪಂದ್ಯಗಳನ್ನು ಗೆದ್ದುಕೊಂಡು 10 ಪಾಯಿಂಟ್ಸ್​ ಗಳಿಸಿದೆ. 10 ಪಾಯಿಂಟ್ಸ್ ಗಳಿಸಿರುವ ಆರ್​ಸಿಬಿ ಪಾಯಿಂಟ್ಸ್ ಟೇಬಲ್​​ನಲ್ಲಿ 7ನೇ ಸ್ಥಾನದಲ್ಲಿದೆ. ಖುಷಿಯ ವಿಚಾರ ಏನೆಂದರೆ ನೆಟ್ ರನ್​ ರೇಟ್​ ಸದ್ಯ ಚೆನ್ನಾಗಿಯೇ ಇಟ್ಟುಕೊಂಡಿರುವ ಆರ್​ಸಿಬಿ ಮುಂದೆ ಎರಡು ಪಂದ್ಯಗಳು ಎದುರಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಆರ್​ಸಿಬಿ ಸೆಣಸಾಟ ನಡೆಸಲಿದೆ. ಈ ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆಲ್ಲಬೇಕು. ಆಗ ಮಾತ್ರ ಆರ್​ಸಿಬಿ ಪಾಯಿಂಟ್ಸ್ 14ಕ್ಕೇ ಏರಿಕೆ ಆಗಲಿದೆ. 14 ಅಂಕ ಗಳಿಸಿದರೂ ಆರ್​ಸಿಬಿ ಭವಿಷ್ಯ ಹೈದರಾಬಾದ್, ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಪಂದ್ಯಗಳ ಫಲಿತಾಂಶವನ್ನು ಅವಲಂಭಿಸಿರುತ್ತದೆ.

ಮುಂದಿನ ಪಂದ್ಯಗಳ ಫಲಿತಾಂಶ ಹೇಗೆ ಆಗಬೇಕು..?

  • ಚೆನ್ನೈ ತಂಡಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ಗುಜರಾತ್, ರಾಜಸ್ಥಾನ್ ಹಾಗೂ ಆರ್​ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ಧೋನಿ ಬಳಗ ಸೋಲಬೇಕು.
  • ಹೈದರಾಬಾದ್​ ತಂಡಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಇವೆ. ಗುಜರಾತ್ ಹಾಗೂ ಪಂಜಾಬ್ ವಿರುದ್ಧ ಹೈದರಾಬಾದ್ ಸೋಲಬೇಕು. ಅಂದರೆ ಎರಡೂ ಪಂದ್ಯಗಳಲ್ಲೂ ಹೈದರಾಬಾದ್ ಸೋಲಬೇಕಿದೆ.
  • ಡೆಲ್ಲಿ ಕ್ಯಾಪಿಟಲ್ಸ್​ಗೂ ಎರಡು ಪಂದ್ಯಗಳು ಇವೆ. ಆರ್​ಸಿಬಿ ಹಾಗೂ ಎಲ್​​ಎಸ್​ಜಿ ವಿರುದ್ಧ ಪಂತ್ ಪಡೆ ಸೋಲಲೇಬೇಕು
  • ಇನ್ನು ಲಕ್ನೋ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಅನ್ನು ಸೋಲಿಸಬೇಕು. ಜೊತೆಗೆ ಮುಂಬೈ ವಿರುದ್ಧ ಸೋಲಬೇಕಿದೆ. ಅಂದರೆ ಮುಂಬೈ ವಿರುದ್ಧ ಕೆಎಲ್ ರಾಹುಲ್ ಬಳಗ ಸೋಲಲೇಬೇಕು.
  • ಈ ಮೇಲಿನ ಸಮೀಕರಣ ಸರಿ ಹೋದರೆ ಆರ್​ಸಿಬಿ ಮೂರನೇ ಸ್ಥಾನ, ಲಕ್ನೋ ನಾಲ್ಕನೇ ಸ್ಥಾನ ಪಡೆಯಬಹುದು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ತಂಡವನ್ನು ಸೋಲಿಸಿದರೂ ಆರ್​ಸಿಬಿ ಮೂರನೇ ಸ್ಥಾನದಲ್ಲಿ ಉಳಿಯಬಹುದು. ಏಕೆಂದರೆ ಪಂತ್ ತಂಡದ ನೆಟ್​ ರನ್​ ರೇಟ್ ಆರ್​ಸಿಬಿಗಿಂತ ಕೆಟ್ಟದಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮಳೆ.. ಮಳೆ.. ಹವಾಮಾನ ಇಲಾಖೆಯಿಂದ ಮತ್ತೊಂದು ಎಚ್ಚರಿಕೆ..!

4ನೇ ಸ್ಥಾನ ಪಡೆಯೋದು ಹೇಗೆ..?

  • ಆರ್​ಸಿಬಿ ಉಳಿದಿರುವ ಎರಡೂ ಪಂದ್ಯಗಳು ಗೆಲ್ಲಬೇಕು. ಅಲ್ಲದೇ SRH ಮತ್ತ CSK ಉಳಿದ ಪಂದ್ಯಗಳನ್ನು ಸೋಲುತ್ತವೆ ಎಂದು ಭಾವಿಸಬೇಕು. ಒಂದು ವೇಳೆ SRH ಮತ್ತು CSK 16 ಅಂಕಗಳನ್ನು ತಲುಪಿದರೆ ಆರ್​ಸಿಬಿ ಕನಸು ನುಚ್ಚು ನೂರಾಗಲಿದೆ. ಯಾಕೆಂದರೆ ಆರ್​ಸಿಬಿ 14 ಪಾಯಿಂಟ್ಸ್​ಗಳನ್ನಷ್ಟೇ ಗಳಿಸಲು ಸಾಧ್ಯವಾಗುತ್ತದೆ.
  • ಒಂದು ವೇಳೆ SRH ಅಥವಾ CSK ಯಾವುದಾದರೂ ಒಂದು ತಂಡ 16 ಅಥವಾ 18 ಅಂಕಗಳನ್ನು ಪಡೆದುಕೊಂಡರೂ ಆರ್​ಸಿಬಿಗೆ ಲಾಭ ಇದೆ. ಆದರಿಲ್ಲ ಯಾವುದಾದರೂ ಒಂದು ತಂಡದ ಪಾಯಿಂಟ್ಸ್ 14 ಮೀರಿ ಹೋಗುವಂತಿಲ್ಲ. ಯಾಕೆಂದರೆ ಇಲ್ಲಿ ಆರ್​ಸಿಬಿ ಜೊತೆ ಪೈಪೋಟಿ ನಡೆಸುವ ಒಂದು ತಂಡದ ಪಾಯಿಂಟ್ಸ್​ ಕೂಡ 14 ಆಗಿರುತ್ತದೆ.
  • ಇಂತಹ ಪರಿಸ್ಥಿತಿಯಲ್ಲಿ ಆರ್​ಸಿಬಿ ರನ್​ ರೇಟ್ CSK/SRH ಮತ್ತು LSG/DCಗಿಂತ ಉತ್ತಮವಾಗಿರಬೇಕು. ಅಂತೆಯೇ ಮೇ 14 ರಂದು ನಡೆಯುವ ಪಂದ್ಯದಲ್ಲಿ ಎಲ್​ಎಸ್​ಜಿ, ಡೆಲ್ಲಿಯನ್ನು ಸೋಲಿಸಲು ಆರ್​ಸಿಬಿ ಬಯಸುತ್ತದೆ. ಯಾಕೆಂದರೆ ಇಲ್ಲಿ ಎಲ್​ಎಸ್​ಜಿ ನೆಟ್​ ರನ್​ ರೇಟ್ ಕಮ್ಮಿ ಇದೆ.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ಉಳಿದ ಐಪಿಎಲ್ ಲೀಗ್ ಪಂದ್ಯಗಳು

  • ಮೇ 10: GT vs CSK
  • ಮೇ 11: KKR vs MI
  • ಮೇ 12: CSK vs RR
  • ಮೇ 12: RCB vs DC
  • ಮೇ 13: GT vs KKR
  • ಮೇ 14: DC vs LSG
  • ಮೇ 15: SRH vs GT
  • ಮೇ 17: MI vs LSG
  • ಮೇ 18: RCB vs CSK
  • ಮೇ 19: SRH vs PBKS
  • ಮೇ 19: RR vs KKR

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

https://newsfirstlive.com/wp-content/uploads/2024/05/RCB-37.jpg

Load More