newsfirstkannada.com

ರಾಹುಲ್​ರಿಂದ ನಾಯಕತ್ವ ಕಿತ್ತುಕೊಳ್ಳುವ ವಿಚಾರ.. ಸ್ಫೋಟಕ ಹೇಳಿಕೆ ಕೊಟ್ಟ LSG ಮ್ಯಾನೇಜ್ಮೆಂಟ್..

Share :

Published May 10, 2024 at 11:31am

Update May 10, 2024 at 12:18pm

    ನಿಜವಾಗಿಯೂ ಕೆ.ಎಲ್.ರಾಹುಲ್ ಕ್ಯಾಪ್ಟನ್ಸಿ ತೊರೆಯುತ್ತಾರಾ?

    ಗೋಯೆಂಕಾ ಕಿತ್ತಾಡಿದ ನಂತರ ಹೆಚ್ಚಾದ ಕ್ಯಾಪ್ಟನ್ಸಿ ವಿಚಾರ

    LSGಗೆ ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ 6ನೇ ಸ್ಥಾನ

ಐಪಿಎಲ್​-2024ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕಳಪೆ ಪ್ರದರ್ಶನ ನೀಡ್ತಿದೆ. ಮೊನ್ನೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್​ಆರ್​ಹೆಚ್​ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 165 ರನ್ ಗಳಿಸಿದ್ದು, ಉತ್ತರವಾಗಿ ಹೈದರಾಬಾದ್ ಕೇವಲ 9.4 ಓವರ್‌ಗಳಲ್ಲಿ ಗುರಿ ಮುಟ್ಟಿತು. ಈ ಹೀನಾಯ ಸೋಲಿನ ನಂತರ ನಾಯಕ ಕೆ.ಎಲ್.ರಾಹುಲ್‌ ಅವರನ್ನು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ಬೆನ್ನಲ್ಲೇ ನಾಯಕ ಕೆ.ಎಲ್​.ರಾಹುಲ್​ಗೆ ಫ್ರಾಂಚೈಸಿಯಿಂದ ಕೊಕ್ ನೀಡಲಾಗುತ್ತದೆ ಎಂದ ವದಂತಿ ಶುರುವಾಗಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಕೆ.ಎಲ್.ರಾಹುಲ್​ಗೆ ಮುಂದಿನ ಎರಡು ಪಂದ್ಯಗಳಿಗೆ ಕೊಕ್ ನೀಡಿ, ವೆಸ್ಟ್​​ ವಿಂಡೀಸ್ ಪ್ರತಿಭೆ ನಿಕೊಲಸ್ ಪೂರನ್​​ಗೆ ಕ್ಯಾಪ್ಟನ್ಸಿ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ವದಂತಿಯನ್ನು ಎಲ್​​ಎಸ್​ಜಿ ತಂಡದ ಅಧಿಕಾರಿಯೊಬ್ಬರು ತಳ್ಳಿ ಹಾಕಿದ್ದಾರೆ. ನಮ್ಮ ಬಳಿ ಅಂತಹ ಯಾವುದೇ ಯೋಜನೆಗಳು ಇಲ್ಲ ಎಂದಿದ್ದಾರೆ.

ಎಲ್​ಎಸ್​ಜಿ ಅಧಿಕಾರಿ ಹೇಳಿದ್ದೇನು..?
ರಾಹುಲ್ ನಾಯಕ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ ಎಂಬ ಮಾಹಿತಿಯೇ ತಪ್ಪಿದೆ. ಈ ಸಮಯದಲ್ಲಿ ನಾವು ನಾಯಕನನ್ನು ತೆಗೆದು ಹಾಕುವ ಬಗ್ಗೆ ಯೋಚನೆ ಮಾಡಿಲ್ಲ. ಪ್ಲೇ-ಆಫ್ ತಲುಪಲು ನಮಗೆ ಇನ್ನೂ ಅವಕಾಶ ಇದೆ. ನಾವು ಅದರ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ನಾವು ಮುಂದಿನ ಪಂದ್ಯದ ಬಗ್ಗೆ ಯೋಚನೆ ಮಾಡುತ್ತಿದ್ದೇವೆಯೇ ಹೊರತು, ನಾಯಕನನ್ನು ಕೆಳಗೆ ಇಳಿಸುವ ಬಗ್ಗೆ ಅಲ್ಲ. ಆ ಪ್ರಶ್ನೆಯೇ ಬರುವುದಿಲ್ಲ.

ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್​ ಟೇಬಲ್ ಏನಾಯ್ತು..?

ಹಾಗೆ ನೋಡಿದ್ರೆ ಕೆಲವು ತಂಡಗಳು 10 ಮತ್ತು 9ನೇ ಸ್ಥಾನದಲ್ಲಿವೆ. ಅವರು ಕೂಡ ನಾಯಕತ್ವ ಬದಲಾವಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹಾಗಿದ್ದ ಮೇಲೆ ನಾವ್ಯಾಕೆ ಆ ಬಗ್ಗೆ ಯೋಚನೆ ಮಾಡಬೇಕು. ನಾವು ಆರನೇ ಸ್ಥಾನದಲ್ಲಿರುವ ಕಾರಣ ಪ್ಲೇ-ಆಫ್​ಗೆ ಹೋಗಲು ಇನ್ನೂ ಅವಕಾಶ ಇದೆ. ಪ್ರತಿ ತಂಡಕ್ಕೆ ಕೆಟ್ಟ ದಿನ ಇದೆ. ನಾಯಕತ್ವವೂ ಕೆಟ್ಟದಾಗಲೂಬಹುದು. ಇದರ್ಥ ನಾಯಕತ್ವ ಬದಲಾವಣೆ ಮಾಡಬೇಕು ಎಂದಲ್ಲ ಅಂತಾ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಹುಲ್​ರಿಂದ ನಾಯಕತ್ವ ಕಿತ್ತುಕೊಳ್ಳುವ ವಿಚಾರ.. ಸ್ಫೋಟಕ ಹೇಳಿಕೆ ಕೊಟ್ಟ LSG ಮ್ಯಾನೇಜ್ಮೆಂಟ್..

https://newsfirstlive.com/wp-content/uploads/2024/05/KL-Rahul-8.jpg

Load More