newsfirstkannada.com

‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ..

Share :

Published May 13, 2024 at 12:20pm

    ಏನಾಯ್ತು, ಏನಾಯ್ತು ಎನ್ನುತ್ತಲೇ ಉಸಿರು ನಿಲ್ಲಿಸಿಬಿಟ್ಟಳು

    ಪ್ರಯಾಣದ ವೇಳೆ ಸುಸ್ತಾಗಿತ್ತು, ನಾವು ನಿದ್ರೆಗೆ ಜಾರಿದ್ದೇವು

    ಪವಿತ್ರ ಬಿಟ್ಟರೆ ಬೇರೆ ಯಾರಿಗೂ ಏನೂ ಆಗಿಲ್ಲ-ಚಂದು ಗೌಡ

ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯು ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿಯ ಅವರ ತೋಟದಲ್ಲಿ ನೆರವೇರಲಿದೆ. ಸದ್ಯ ಪವಿತ್ರ ಜಯರಾಂ ಅವರ ಅಂತಿಮ ದರ್ಶನ ನಡೆಯುತ್ತಿದೆ. ಅಪಘಾತದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪವಿತ್ರ ಅವರ ಸ್ನೇಹಿತ ಚಂದುಗೌಡ ಇಂದು ಬೆಳಗ್ಗೆ ಅಂತಿಮ ದರ್ಶನ ಪಡೆದುಕೊಂಡರು.

ಸ್ನೇಹಿತ ಚಂದುಗೌಡ ಹೇಳಿದ್ದೇನು..?

ನಾವು ಬೆಂಗಳೂರಿನಿಂದ ಹೈದರಾಬಾದ್​ಗೆ ಪ್ರಯಾಣ ಮಾಡುತ್ತಿದ್ದೇವು. ಮಧ್ಯಾಹ್ನ 2.30ರ ಸುಮಾರಿಗೆ ಪ್ರಯಾಣ ಆರಂಭಿಸಿದ್ದೇವು. ರಸ್ತೆ ಮಧ್ಯೆ ಭಾರೀ ಮಳೆ ಸುರಿಯುತ್ತಿತ್ತು. ಪರಿಣಾಮ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ನಾವು ತುಂಬಾ ಸುಸ್ತಾಗಿದ್ದೇವು. ನಮಗೆ ನಿದ್ರೆ ಬರುತ್ತಿತ್ತು.

ಇದನ್ನೂ ಓದಿ:ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ

ಕಾರಿನಲ್ಲಿ ನಾವು ನಾಲ್ವರು ಪ್ರಯಾಣ ಮಾಡುತ್ತಿದ್ದೇವು. ಡ್ರೈವರ್, ಪವಿತ್ರ ಅವರ ಸಹೋದರಿಯ ಮಗಳು ಇದ್ದರು. ನಾನು ಡ್ರೈವರ್​ನ ಹಿಂಬದಿಯಲ್ಲಿ ಕೂತಿದ್ದೆ. ಪವಿತ್ರ ನನ್ನ ಪಕ್ಕ ಕೂತಿದ್ದರು. ಪ್ರಯಾಣದ ವೇಳೆ ನಾವು ನಿದ್ರೆಗೆ ಜಾರಿದ್ದೇವು. ನಮ್ಮ ಡ್ರೈವರ್ 60 ಫೀಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಸರ್ಕಾರದ ಆರ್​ಟಿಸಿ ಬಸ್​ ಬಂದಿದೆ. ಈ ವೇಳೆ ಎದರುಗಡೆಯಿಂದ ಬಂದ ಸ್ಕಾರ್ಪಿಯೋಗೆ ಕಾರು ಡಿಕ್ಕಿ ಆಯ್ತು‌. ಬ್ರೇಕ್ ಹಾಕಿದ ಹಿನ್ನಲೆ ಬಲಗಡೆಗೆ ಕಾರು ವಾಲಿತು. ಇದರಿಂದ ಎದುರುಗಡೆ ಇದ್ದ ಬಸ್​ಗೆ ನಮ್ಮ ಕಾರು ಡಿಕ್ಕಿ ಹೊಡೆದಿದೆ. ನಿಜ ಹೇಳಬೇಕು ಎಂದರೆ ಪವಿತ್ರ ಬಿಟ್ಟು ಬೇರೆ ಯಾರಿಗೂ ಏನೂ ಆಗಿಲ್ಲ. ನನ್ನ ಕೈಗೆ ಗಾಯವಾಗಿದೆ. ತಲೆಗೂ ಪೆಟ್ಟು ಆಗಿದೆ.

ಅಪಘಾತದ ಭೀಕರತೆಯಿಂದ ಅವಳು ಆಘಾತದಲ್ಲಿದ್ದಳು. ಉಸಿರು ಕಟ್ಟಿದ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸಿದಳು. ಏನಾಯ್ತು? ಏನಾಯ್ತು? ಎನ್ನುತ್ತ ಉಸಿರಾಡೋದನ್ನೇ ನಿಲ್ಲಿಸಿಬಿಟ್ಟಳು. ನಾನು ಅಷ್ಟರೊಳಗೆ ಪ್ರಜ್ಞೆ ತಪ್ಪಿಹೋದೆ. ಕೆಲವರು ಹೇಳುವ ಮಾಹಿತಿ ಪ್ರಕಾರ ಅಷ್ಟರೊಳಗೆ ಮಧ್ಯರಾತ್ರಿ 1.30 ಆಗಿದೆ ಎಂದರು.

ಇದನ್ನೂ ಓದಿ:RCB ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬೆಂಗಳೂರು ತಂಡಕ್ಕೆ ಇರುವ ದಾರಿ ಅದೊಂದೇ..!

ಪವಿತ್ರ ಸಾವಿಗೆ ಪ್ರಮುಖ ಕಾರಣ ಆ್ಯಂಬುಲೆನ್ಸ್ ಮಾತ್ರ. ಆ್ಯಂಬುಲೆನ್ಸ್ ಬರೋದೇ 20 ನಿಮಿಷ ತಡವಾಗಿದೆ. ಪರಿಣಾಮ ಇಂದು ಪವಿ ನಮ್ಮ ಜೊತೆ ಇಲ್ಲ. ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಏನಾಗಿದೆ ಎಂದು ನನಗೆ ಗೊತ್ತಾಗಲಿಲ್ಲ. ಬೆಳಗ್ಗೆ 4.30ರ ಸುಮಾರಿಗೆ ಎಚ್ಚರ ಆಗಿದೆ. ಕೊನೆಗೆ ನಾನು ಮಾಹಿತಿ ಪಡೆದುಕೊಂಡೆ.

ಯಾರು ಚಂದು ಗೌಡ..?
ಚಂದು ಗೌಡ ಪವಿತ್ರ ಜಯರಾಂ ಅವರ ಸ್ನೇಹಿತ. ನಟಿ ಪವಿತ್ರ ಜೊತೆ ಹಲವಾರು ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡುತಿದ್ದರು. ಇವರು ತೆಲಗು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕನ್ನಡ ಕಿರುತೆರೆಯಲ್ಲೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್​ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ..

https://newsfirstlive.com/wp-content/uploads/2024/05/PAVITRA-JAYARAM-1-1.jpg

Load More