newsfirstkannada.com

ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್​ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!

Share :

Published May 13, 2024 at 6:40am

Update May 13, 2024 at 6:42am

    ಕ್ಯಾಪ್ಟನ್​ ರೋಹಿತ್​ಗೆ ತಲೆನೋವು ಹೆಚ್ಚಿಸಿದೆ ಈ ವಿಚಾರ

    ವೆಸ್ಟ್​ ಇಂಡೀಸ್ ದಿಗ್ಗಜ ಲಾರಾ ನೀಡಿದ ಸಲಹೆ ಏನು..?

    ಜೂನ್ 2 ರಿಂದ ಟಿ-20 ವಿಶ್ವಕಪ್ ಪಂದ್ಯ ಶುರುವಾಗಲಿದೆ

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಅಭಿಯಾನ ಆರಂಭಕ್ಕೆ ಒಂದು ತಿಂಗಳ ಬಾಕಿಯಿದೆ. ಟೀಮ್ ಇಂಡಿಯಾದಲ್ಲಿನ ಗೊಂದಲಗಳು ಮಾತ್ರ, ದಿನೇ ದಿನೇ ಹೆಚ್ಚಾಗ್ತಿವೆ. ಅದು ಕೂಡ ವಿರಾಟ್​ ಕೊಹ್ಲಿಯ ವಿಚಾರವಾಗಿ.

ಟಿ20 ವಿಶ್ವಕಪ್​ ಮಹಾ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮಹಾ ಸಂಗ್ರಾಮಕ್ಕಾಗಿ ಬಲಿಷ್ಠ ತಂಡಗಳನ್ನೇ ಪ್ರಕಟಿಸಿರುವ 20 ತಂಡಗಳೂ, ಈಗಾಗಲೇ ಚುಟುಕು ಸಮರದ ಅಭ್ಯಾಸದಲ್ಲಿ ನಿರತವಾಗಿವೆ. ಈ ಪೈಕಿ ಟೀಮ್ ಇಂಡಿಯಾ ಕೂಡ ಹೊರತಾಗಿಲ್ಲ. ದಿನದಿಂದ ದಿನಕ್ಕೆ ಗೊಂದಲಗಳು ಮಾತ್ರ ಹೆಚ್ಚಾಗ್ತಿವೆ. ಆದ್ರೀಗ ಟೀಮ್ ಇಂಡಿಯಾದಲ್ಲಿ ಗೊಂದಲಕ್ಕೆ ಕಾರಣವಾಗಿರೋದು ನಂ.3 ಸ್ಲಾಟ್​.
ನಂಬರ್​.3 ಸ್ಲಾಟ್.. ಇದು ವಿಶ್ವ ಸಾಮ್ರಾಟ ವಿರಾಟ್​ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕ. ಆದ್ರೀಗ ಇದೇ ಬ್ಯಾಟಿಂಗ್ ಕ್ರಮಾಂಕ ಗೊಂದಲದ ಗೂಡಾಗಿದೆ. ಇದಕ್ಕೆಲ್ಲಾ ಕಾರಣ ಟಿ20 ಸ್ಪೆಷಲಿಸ್ಟ್​ ಸೂರ್ಯಕುಮಾರ್ ಯಾದವ್​.

ಇದನ್ನೂ ಓದಿ:ಜೈಲಿನಿಂದ ಬಂದ ಬೆನ್ನಲ್ಲೇ 10 ಗ್ಯಾರಂಟಿ ಘೋಷಣೆ ಮಾಡಿದ ಕೇಜ್ರಿವಾಲ್.. ಇವೆಲ್ಲ ಉಚಿತ.. ಉಚಿತ..!

3ನೇ ಸ್ಲಾಟ್​​​​ ಗೊಂದಲ.. ಈ ಇಬ್ಬರಲ್ಲಿ ಯಾರಿಗೆ ಸ್ಥಾನ..?
ವಿರಾಟ್​ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್.. ಟೀಮ್ ಇಂಡಿಯಾದ ಸೂಪರ್ ಸ್ಟಾರ್​ ಪ್ಲೇಯರ್​ಗಳು. ಮ್ಯಾಚ್ ವಿನ್ನರ್​​​​​​​​​ಗಳು. ಆದ್ರೀಗ ಈ ಸ್ಲಾಟ್​ನಲ್ಲಿ ಸಕ್ಸಸ್​ ಕಂಡಿರುವ ವಿರಾಟ್​ ಕೊಹ್ಲಿಯನ್ನೇ ಮುಂದುವರಿಸಬೇಕಾ..? ಇಲ್ಲ ತಂಡದ ದೃಷ್ಟಿಯಿಂದ ಡೆಡ್ಲಿ ಬ್ಯಾಟರ್ ಸೂರ್ಯನಿಗೆ ಬಡ್ತಿ ನೀಡಬೇಕಾ..? ಎಂಬ ಪ್ರಶ್ನೆ ಉದ್ಬವಿಸಿದೆ. ಇದಕ್ಕೆಲ್ಲಾ ಕಾರಣ ಸೂರ್ಯ, ಐಪಿಎಲ್​ನಲ್ಲಿ ನೀಡ್ತಿರೋ ಪಾರ್ಫಮೆನ್ಸ್ ಆಗಿದೆ.

ಕ್ಯಾಪ್ಟನ್​ ರೋಹಿತ್ ತಲೆನೋವು ಹೆಚ್ಚಿಸಿದ 3ನೇ ಸ್ಲಾಟ್​..!
ಐಪಿಎಲ್​ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸ್ತಿರುವ ಸೂರ್ಯ, ಪ್ರತಿ ಮ್ಯಾಚ್​​ನಲ್ಲೂ ಅಸಾಮಾನ್ಯ ಬ್ಯಾಟಿಂಗ್ ನಡೆಸ್ತಿದ್ದಾರೆ. ಎದುರಾಳಿ ತಂಡವನ್ನ ಚಿಂದಿ ಉಡಾಯಿಸ್ತಿದ್ದಾರೆ. ಸೂರ್ಯನ ಆರ್ಭಟಕ್ಕೆ ಎದುರಾಳಿ ಪಡೆಗಳು ಬೆಚ್ಚಿಬಿದ್ದಿವೆ. ಬೌಲರ್​ಗಳಂತೂ, ಹೇಗಪ್ಪಾ ಬೌಲಿಂಗ್​ ಮಾಡೋದು ಅಂತಾ ತಲೆಕೆಡಿಸಿಕೊಂಡಿದ್ದಾರೆ. ಅದರಲ್ಲೂ ಸನ್​ ರೈಸರ್ಸ್ ಎದುರು ಸ್ಪೋಟಕ ಶತಕ ಸಿಡಿಸಿರೋ ಸೂರ್ಯ, 3ನೇ ಕ್ರಮಾಂಕಕ್ಕೆ ಪ್ರಬಲ ಪೈಪೋಟಿಯನ್ನೇ ನೀಡ್ತಿದ್ದಾರೆ. ಆದ್ರೆ, ಇದೇ ಐಪಿಎಲ್​ನಲ್ಲಿ ವಿರಾಟ್, ಓಪನರ್ ಆಗಿ ಆಡ್ತಿದ್ದಾರೆ. ಇದು ಸಹಜವಾಗೇ ರೋಹಿತ್ ಶರ್ಮಾರ ತಲೆನೋವು ಹೆಚ್ಚಿಸಿದೆ.

ವಿರಾಟ್ ಕೊಹ್ಲಿ ಕೈ ತಪ್ಪಲಿದ್ಯಾ ನಂ.3 ಸ್ಲಾಟ್..?
ಟೀಮ್ ಇಂಡಿಯಾ ಪರ ವಿರಾಟ್​, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರೆ. ಸೂರ್ಯ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಸಕ್ಸಸ್​ ಕೂಡ ಕಂಡಿದ್ದಾರೆ. 2022ರ ಟಿ20 ವಿಶ್ವಕಪ್​​ ಬಳಿಕ 3ನೇ ಸ್ಲಾಟ್​​​ನಲ್ಲಿ ಬ್ಯಾಟಿಂಗ್ ನಡೆಸಿದ್ದ ಸೂರ್ಯ, ಸಿಂಗಲ್ ಹ್ಯಾಂಡ್​​ ಆಗಿಯೇ ಮ್ಯಾಚ್ ಗೆಲ್ಲಿಸಿಕೊಡ್ಡಿದ್ದಾರೆ. ಇನ್​ಫ್ಯಾಕ್ಟ್. 3ನೇ ಕ್ರಮಾಂಕದಲ್ಲಿ ಆಡಿದ​ 14 ಇನ್ನಿಂಗ್ಸ್​ಗಳಿಂದ 479 ರನ್ ಸಿಡಿಸಿದ್ದಾರೆ. ಈ ಪೈಕಿ 4 ಅರ್ಧಶತಕ, 1 ಶತಕ ದಾಖಲಿಸಿದ್ದಾರೆ. ಹೀಗಾಗಿ ವಿರಾಟ್ ಬದಲಿಯಾಗಿ ಸೂರ್ಯನೇ 3ನೇ ಕ್ರಮಾಂಕದಲ್ಲಿ ಮುಂದುವರಿಯಲಿ ಅನ್ನೋದು ಹಲವರ ಅಭಿಪ್ರಾಯವೂ ಆಗಿದೆ.

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

3ನೇ ಸ್ಥಾನದಲ್ಲಿ ಕೊಹ್ಲಿಗಿಂತ ಸೂರ್ಯ ಬೆಸ್ಟ್​ ಏಕೆ..?
ಟಿ20 ವಿಶ್ವಕಪ್​ನಲ್ಲಿ ಅನುಭವಿ ವಿರಾಟ್​​ಗಿಂತ ಸೂರ್ಯನೇ 3ನೇ ಸ್ಲಾಟ್​​ಗೆ ಬೆಸ್ಟ್​ ಅನ್ನೋದನ್ನ ಸ್ವತಃ ವಿಂಡೀಸ್ ದಿಗ್ಗಜ ಬ್ರಯಾನ್ ಲಾರಾ ಹೇಳಿದ್ದಾರೆ. ಅಷ್ಟೇ ಅಲ್ಲ.! ಟೀಮ್ ಇಂಡಿಯಾ ಹೆಚ್ಚು ಮ್ಯಾಚ್​ಗಳನ್ನ ಗೆಲ್ಲಲು ಸಹಕಾರಿಯಾಗುತ್ತೆ ಅನ್ನೋದನ್ನ ವಿವರಿಸಿದ್ದಾರೆ. ಇದಕ್ಕೆ ಕಾರಣಗಳನ್ನು ನೀಡಿದ್ದಾರೆ.

ಸೂರ್ಯ 3ನೇ ಕ್ರಮಾಂಕಕ್ಕೆ ಏಕೆ..?
ಸೂರ್ಯಕುಮಾರ್​ 3ನೇ ಸ್ಲಾಟ್​​ನಲ್ಲಿ ಬ್ಯಾಟಿಂಗ್ ಮಾಡಬೇಕು. ಯಾಕಂದ್ರೆ, ಸೂರ್ಯ T20 ಮಾದರಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 10ರಿಂದ 15 ಓವರ್​​ಗಳ ತನಕ ಬ್ಯಾಟಿಂಗ್​ ನಡೆಸಿದರೆ, ಪಂದ್ಯ ಏನಾಗುತ್ತೆ ಅನ್ನೋದು ನಿಮಗೂ ತಿಳಿದಿದೆ. ನೀವು ಮೊದಲು ಬ್ಯಾಟಿಂಗ್ ನಡೆಸಿದ್ರೆ, ಸೂರ್ಯ ನಿಮ್ಮನ್ನ ಅಟ್ಯಾಕಿಂಗ್​​ ಮೂಡ್​​ನಲ್ಲಿ ಇರಿಸುತ್ತಾರೆ. 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ರೆ, ಮ್ಯಾಚ್ ಗೆಲ್ಲಿಸುತ್ತಾನೆ. ಹೀಗಾಗಿ 3ನೇ ಕ್ರಮಾಂಕದಲ್ಲಿ ಸೂರ್ಯಗೆ ಬ್ಯಾಟ್ ಮಾಡಲು ಅವಕಾಶ ಮಾಡಿಕೊಡಿ. ಕೊಹ್ಲಿಗೆ 4ನೇ ಕ್ರಮಾಂಕದಲ್ಲಿ ಆಡಲು ಅನುವು ಮಾಡಿಕೊಡಿ. ಟಿ20 ಫಾರ್ಮೆಟ್​ನಲ್ಲಿ ಟಾಪ್-3 ಪ್ರಮುಖ ಪಾತ್ರವಹಿಸುತ್ತೆ.
ಬ್ರಿಯನ್ ಲಾರಾ, ವಿಂಡೀಸ್ ದಿಗ್ಗಜ

ಬ್ರಿಯಾನ್ ಲಾರಾ ಹೇಳಿದಂತೆ ಸೂರ್ಯ, ಡೇಂಜರಸ್ ಬ್ಯಾಟರ್.. ಕ್ಷಣಾರ್ಧದಲ್ಲೇ ಪಂದ್ಯಕ್ಕೆ ತಿರುವು ನೀಡ್ತಾರೆ. ಅಷ್ಟೇ ಅಲ್ಲ.! ಟಿ20ಯಲ್ಲಿ ವಿರಾಟ್​ ಕೊಹ್ಲಿಗಿಂತ ಬೆಸ್ಟ್​ ಪ್ಲೇಯರ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸೂರ್ಯ ಹೆಚ್ಚೆಚ್ಚು ಬಾಲ್​ಗಳನ್ನ ಆಡುವುದರಿಂದ ಪಂದ್ಯದ ದಿಕ್ಕೇ ಬದಲಾಗುತ್ತೆ. ಆದ್ರೆ, ಹಲವು ವರ್ಷಗಳಿಂದ 3ನೇ ಸ್ಲಾಟ್​ನಲ್ಲಿ ಆಡ್ತಿರುವ ವಿರಾಟ್​ ಹಿಂಬಡ್ತಿ ಪಡೆದರೆ, ತಂಡದ ಮೇಲೆ ವ್ಯತಿರಿಕ್ತ ಪರಿಣಾಮವೇ ಬೀಳುತ್ತೆ ಅನ್ನೋದು ಮರೆಯುವಮತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಟೀಮ್ ಮ್ಯಾನೇಜ್​ಮೆಂಟ್ ಎಚ್ಚರಿಕೆಯ ಹೆಜ್ಜೆಯನ್ನೇ ಇಡಬೇಕಿದೆ. ಇಲ್ಲ ಮತ್ತೊಂದು ಸೋಲಿಗೆ ಅಣಿಯಾಗಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್​ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!

https://newsfirstlive.com/wp-content/uploads/2023/11/Virat.jpg

Load More