newsfirstkannada.com

RCB ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬೆಂಗಳೂರು ತಂಡಕ್ಕೆ ಇರುವ ದಾರಿ ಅದೊಂದೇ..!

Share :

Published May 13, 2024 at 9:25am

Update May 13, 2024 at 10:32am

    ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಗ್ಗು ಬಡಿದ ಆರ್​ಸಿಬಿ

    ಆರ್​ಸಿಬಿ ಪ್ಲೇ ಆಫ್​ಗೆ ಹೋಗಬೇಕು ಅಂದರೆ ಏನು ಮಾಡಬೇಕು?

    ನಾಲ್ಕನೇ ಸ್ಥಾನಕ್ಕಾಗಿ ಸಿಎಸ್​ಕೆ-ಆರ್​​ಸಿಬಿ ಮಧ್ಯೆ ಟಫ್ ಫೈಟ್​

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅದ್ಭುತವಾಗಿ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್​​ಗೆ ಹೋಗುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆರ್​ಸಿಬಿ ಗೆಲುವು ಬೆನ್ನಲ್ಲೇ ಪ್ಲೇ-ಆಫ್​ಗೆ ಹೇಗೆ ಪ್ರವೇಶ ಮಾಡಬೇಕು ಅನ್ನೋದ್ರ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ.

ದಿಟ್ಟ ಹೆಜ್ಜೆ

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸೋಲಿಸುವ ಮೂಲಕ ಆರ್​​ಸಿಬಿ ಸತತ ಐದನೇ ಗೆಲುವು ದಾಖಲಿಸಿದೆ. ಆರ್​ಸಿಬಿಗೆ ನಿನ್ನೆ ಸಿಕ್ಕ ಭರ್ಜರಿ ಗೆಲುವು ಪ್ಲೇ-ಆಫ್​ ರೇಸ್​ಗೆ ಮತ್ತಷ್ಟು ಬಲ ಬಂದಿದೆ. ಮಾತ್ರವಲ್ಲ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದ ಆರ್​ಸಿಬಿ ಐದನೇ ಸ್ಥಾನಕ್ಕೆ ಜಂಪ್​​ ಆಗಿದೆ. ಇದುವರೆಗೆ 13 ಪಂದ್ಯಗಳನ್ನು ಆಡಿರುವ ಆರ್​ಸಿಬಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ ನೆಟ್​ ರನ್​ರೇಟ್​ನಲ್ಲೂ ಮೇಲುಗೈ ಸಾಧಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆರ್​​ಸಿಬಿ ಪ್ಲೇ-ಆಫ್​ಗೆ ಹೋಗಲು ದಿಟ್ಟ ಹೆಜ್ಜೆ ಇಡುತ್ತಿದ್ದು, ಮೇ 18 ರಂದು ನಡೆಯುವ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್​ಕೆ ತಂಡವನ್ನು ಸೋಲಿಸಬೇಕಿದೆ. ಈ ಪಂದ್ಯದಲ್ಲಿ ಸೋತವರು ಮನೆಗೆ ಹೋಗುತ್ತಾರೆ, ಗೆದ್ದವರು ಪ್ಲೇ-ಆಫ್​ಗೆ ಎಂಟ್ರಿ ನೀಡುತ್ತಾರೆ.

ಇದನ್ನೂ ಓದಿ:ಮತ್ತೆ ಮ್ಯಾಚ್​ ಫಿಕ್ಸಿಂಗ್ ಆರೋಪ.. CSK ಬ್ಯಾನ್​​ಗೆ ಆಗ್ರಹಿಸಿದ ಫ್ಯಾನ್ಸ್..! ಏನಿದು ಅನುಮಾನ

ಸಿಎಸ್​ಕೆ ಪಾಯಿಂಟ್ಸ್ ಏನು..?
ಚೆನ್ನೈ ಸೂಪರ್​ ಕಿಂಗ್ಸ್​ ಪಾಯಿಂಟ್ಸ್​ ಟೇಬಲ್​​ನಲ್ಲಿ ಮೂರನೇ ಸ್ಥಾನದಲ್ಲಿದೆ. 13 ಪಂದ್ಯಗಳನ್ನು ಆಡಿರುವ ಚೆನ್ನೈ 7 ಪಂದ್ಯದಲ್ಲಿ ಗೆದ್ದು 14 ಅಂಕಗಳನ್ನು ಗಳಿಸಿಕೊಂಡಿದೆ. ಜೊತೆಗೆ +0.528 ರನ್​​ ರೇಟ್​ ಇದೆ. ಇನ್ನು ನಾಲ್ಕನೇ ಸ್ಥಾನದಲ್ಲಿರುವ ಎಸ್​ಆರ್​ಹೆಚ್​​ ಈಗಾಗಲೇ 7 ಪಂದ್ಯಗಳನ್ನು ಗೆದ್ದು 14 ಪಾಯಿಂಟ್ಸ್​ ಪಡೆದುಕೊಂಡಿದೆ. ಎಸ್​ಆರ್​ಹೆಚ್​ ಇಲ್ಲಿಯವರಗೆ 12 ಪಂದ್ಯಗಳನ್ನು ಆಡಿದ್ದು, ಇನ್ನೂ ಎರಡು ಪಂದ್ಯಗಳು ಬಾಕಿ ಇದೆ. ನೆಟ್​ ರನ್​ ರೇಟ್​ +0.406 ಹೊಂದಿರುವ ಎಸ್​ಆರ್​ಹೆಚ್​ ಪ್ಲೇ-ಆಫ್ ಪ್ರವೇಶ ಮಾಡೋದು ಬಹುತೇಕ ಪಕ್ಕಾ ಆಗಿದೆ. ಆದರೆ ನಾಲ್ಕನೇ ಸ್ಥಾನಕ್ಕಾಗಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಜಿದ್ದಾಜಿದ್ದಿನ ಪೈಪೋಟಿ ಪಕ್ಕಾ ಆಗಲಿದೆ.

ಆರ್​ಸಿಬಿಗೆ ಇರುವ ಚಾಲೆಂಜ್ ಏನು..?
ಮೇ 18 ರಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಸಿಎಸ್​ಕೆ ವಿರುದ್ಧ ಗೆಲ್ಲಬೇಕಿದೆ. ಗೆದ್ದರೆ ಆರ್​ಸಿಬಿ ಪಾಯಿಂಟ್ಸ್​ 14ಕ್ಕೆ ಏರಿಕೆ ಆಗಲಿದೆ. ಆದರೆ, ಕೇವಲ ಗೆಲುವು ಮಾತ್ರವಲ್ಲ, ಸಿಎಸ್​ಕೆ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಬೇಕಿದೆ. ಕೆಲವು ವರದಿಗಳ ಪ್ರಕಾರ ಸಿಎಸ್​ಕೆಯನ್ನು 18 ರನ್​ಗಳ ಅಂತರದಿಂದ ಅಥವಾ 11 ಬಾಲ್​ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಬೇಕಿದೆ ಆರ್​ಸಿಬಿ. ಜೊತೆಗೆ ಮುಂಬೈ ಇಂಡಿಯನ್ಸ್​ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್​ ಸೋಲಬೇಕು.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು..!

ಪ್ಲೇ-ಆಫ್ ರೇಸ್ ಹೆಂಗಿದೆ..?
ಎಸ್​ಆರ್​ಹೆಚ್​ ತಂಡವು ಮುಂದೆ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್​ ತಂಡದ ಜೊತೆ ಒಂದೊಂದು ಪಂದ್ಯ ಆಡಲಿದೆ. ಈ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿದರೂ SRH ಸುಲಭವಾಗಿ ಪ್ಲೇ-ಆಫ್​ಗೆ ಪ್ರವೇಶ ಮಾಡಲಿದೆ. ಯಾಕೆಂದರೆ SRHನ ನೆಟ್​ ರನ್​ ರೇಟ್​ ಉತ್ತಮವಾಗಿದೆ.

ಇದರ ಮಧ್ಯೆ ಲಕ್ನೋ ಸೂಪರ್ ಜೈಂಟ್ಸ್ ಕೂಡ ಪ್ಲೇ ಆಫ್ ಕನಸು ಕಾಣುತ್ತಿದೆ. ಆದರೆ ಎಲ್​ಎಸ್​ಜಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಕಳಪೆ ನೆಟ್​ ರನ್​ ರೇಟ್​ -0.769 ಹೊಂದಿರುವ ಎಲ್​ಎಸ್​ಜಿ ಮುಂದಿನ ಎರಡೂ ಪಂದ್ಯಗಳನ್ನೂ ಗೆದ್ದರೂ ಭಾರೀ ಅಂತರದಿಂದ ಗೆಲುವು ಸಾಧಿಸಬೇಕಿದೆ. ಇತ್ತ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಈಗಾಗಲೇ ಪ್ಲೇ-ಆಫ್ ರೇಸ್​ನಿಂದ ಹೊರಬಿದ್ದಿವೆ. ಹೀಗಾಗಿ CSK, RCB, LSG ಮತ್ತು SRH ನಡುವೆ ಪ್ಲೇ-ಆಫ್​ಗಾಗಿ ಭಾರೀ ಪೈಪೋಟಿ ಶುರುವಾಗಿದೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು ಇನ್ನೂ ಜೀವಂತ.. ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಶ್ರೇಯಾಂಕಾ ಪಾಟೀಲ್..!

ಇದನ್ನೂ ಓದಿ:ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್​ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬೆಂಗಳೂರು ತಂಡಕ್ಕೆ ಇರುವ ದಾರಿ ಅದೊಂದೇ..!

https://newsfirstlive.com/wp-content/uploads/2024/05/RCB-42.jpg

Load More