newsfirstkannada.com

ಮತ್ತೆ ಮ್ಯಾಚ್​ ಫಿಕ್ಸಿಂಗ್ ಆರೋಪ.. CSK ಬ್ಯಾನ್​​ಗೆ ಆಗ್ರಹಿಸಿದ ಫ್ಯಾನ್ಸ್..! ಏನಿದು ಅನುಮಾನ

Share :

Published May 13, 2024 at 8:26am

  ಸೋಶಿಯಲ್ ಮೀಡಿಯಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ

  ರಾಜಸ್ಥಾನ್, ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಗುಮಾನಿ

  ಅಭಿಮಾನಿಗಳ ಆರೋಪ ಏನು? ನಿಜಕ್ಕೂ ಆಗಿದ್ದೇನು..?

ಚೆನ್ನೈನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಗಾಯಕ್ವಾಡ್ ನೇತೃತ್ವದ ಸಿಎಸ್​ಕೆ, ರಾಜಸ್ಥಾನ್ ರಾಯಲ್ಸ್​ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಪ್ಲೇ-ಆಫ್​ಗೆ ಪ್ರವೇಶ ಮಾಡಲು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಆದರೆ ರಾಜಸ್ಥಾನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯ ಫಿಕ್ಸಿಂಗ್ ಮತ್ತು ಸ್ಕ್ರಿಪ್ಟೆಡ್​ ಎಂಬ ಆರೋಪ ಕೇಳಿಬಂದಿದೆ.

ಯಾಕೆ ಈ ಆರೋಪ..?
ಮೊದಲ ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್​ ನಿಗದಿತ 20 ಓವರ್​ನಲ್ಲಿ ಐದು ವಿಕೆಟ್ ಕಳೆದುಕೊಂಡು 141 ರನ್ ಬಾರಿಸಿತ್ತು. ರಾಜಸ್ಥಾನ್ ರಾಯಲ್ಸ್​ ಕೇವಲ 141 ರನ್​ಗಳಿಸಿರೋದನ್ನು ಅನುಮಾನಿಸಿರುವ ಅಭಿಮಾನಿಗಳು ಇದು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯುತ್ತಿದ್ದಾರೆ. ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗ್ತಿದೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು ಇನ್ನೂ ಜೀವಂತ.. ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಶ್ರೇಯಾಂಕಾ ಪಾಟೀಲ್..!

ಐಪಿಎಲ್ 2024ರ ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಸಿಎಸ್​ಕೆ ರಾಜಸ್ಥಾನ್ ವಿರುದ್ಧ ಗೆಲ್ಲಬೇಕಾಗಿತ್ತು. ಅವರು ಪಂದ್ಯವನ್ನು ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಕೆಲವು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿಎಸ್​ಕೆ ಅಭಿಮಾನಿಗಳು, ಆರ್​ಸಿಬಿ ಅಭಿಮಾನಿಗಳ ಅಜೆಂಡಾ ಇದೆ. ಉದ್ದೇಶಪೂರ್ವಕವಾಗಿ ಸಿಎಸ್​ಕೆ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆರ್​ಸಿಬಿ ಅಭಿಮಾನಿಗಳ ಇಂತಹ ಆರೋಪ ಸಾಮಾನ್ಯವಾಗಿಬಿಟ್ಟಿದೆ. ಅವರು ಸಿಎಸ್​ಕೆ ವಿರುದ್ಧ ಯಾವತ್ತೂ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು..!

ಹೇಗಿತ್ತು ನಿನ್ನೆಯ ಮ್ಯಾಚ್​..?
ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 24 ರನ್ ಗಳಿಸಿದರೆ, ಮತ್ತೊಬ್ಬ ಆರಂಭಿಕ ಆಟಗಾರ ಬಟ್ಲರ್ 25 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. CSK ಬೌಲಿಂಗ್ ವಿಭಾಗ ಅಷ್ಟೊಂದು ಚೆನ್ನಾಗಿ ಇಲ್ಲದಿದ್ದರೂ ಇನ್ನಿಂಗ್ಸ್​ ಕೊನೆಯವರೆಗೂ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ಸ್​ ವಿಫಲವಾದಂತೆ ಕಂಡುಬಂದಿದೆ. ಸ್ಯಾಮ್ಸನ್ ಕೂಡ 19 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾದರು. ರಿಯಾನ್ ಪರಾಗ್ (47*) ಮತ್ತು ಧ್ರುವ್ ಜುರೆಲ್ 28 ರನ್​​ಗಳಿಸಿದರು. CSKಯ ಎಲ್ಲಾ ಬೌಲರ್ಸ್​​ 8ಕ್ಕಿಂತ ಕಡಿಮೆ ಎಕಾನಮಿ ರೇಟ್‌ನೊಂದಿಗೆ ಬೌಲಿಂಗ್ ಮಾಡಿದರು. ಕೇವಲ ಏಳು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳನ್ನು ಮಾತ್ರ ರಾಜಸ್ಥಾನ್ ರಾಯಲ್ಸ್ ಬಾರಿಸಿತು. ವಿಶೇಷ ಅಂದರೆ ಸಂಜು ಸ್ಯಾಮ್ಸನ್​ ಡೆಲ್ಲಿ ವಿರುದ್ಧದ ಕೊನೆಯ ಪಂದ್ಯದಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್‌ ಸಿಡಿಸಿದ್ದರು.

ಇದನ್ನೂ ಓದಿ:ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್​ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮತ್ತೆ ಮ್ಯಾಚ್​ ಫಿಕ್ಸಿಂಗ್ ಆರೋಪ.. CSK ಬ್ಯಾನ್​​ಗೆ ಆಗ್ರಹಿಸಿದ ಫ್ಯಾನ್ಸ್..! ಏನಿದು ಅನುಮಾನ

https://newsfirstlive.com/wp-content/uploads/2024/05/CSK-vs-RR-1.jpg

Load More