ಗೌರಿ ಹಬ್ಬದ ದಿನ ಭೀಕರ ದುರಂತ.. ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ 13 ಮಂದಿ ಸಾವು

author-image
AS Harshith
Updated On
ಗೌರಿ ಹಬ್ಬದ ದಿನ ಭೀಕರ ದುರಂತ.. ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ 13 ಮಂದಿ ಸಾವು
Advertisment
  • ವೀಲ್ಹಿಂಗ್ ಹುಚ್ಚಾಟಕ್ಕೆ ಬೈಕ್​​ ಸವಾರ ಸೇರಿ ನಾಲ್ವರು ಬಲಿ
  • ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವು
  • ಸ್ಕೂಟರ್-​​ ಬೈಕ್​​ ನಡುವೆ ಅಪಘಾತ.. ಪ್ರೊಫೆಸರ್​​ ಸೇರಿ 3 ಸಾವು

ರಾಯಚೂರು: ಟಂಟಂ ವಾಹನ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ರಾಯಚೂರು ಹೈದ್ರಾಬಾದ್ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಓವರ್ ಟೆಕ್ ಮಾಡುವ ವೇಳೆ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿದ್ದ ಕ್ಲೀನರ್ ಸಾವನ್ನಪ್ಪಿದ್ದಾನೆ.

ಅಪಘಾತದ ವೇಳೆ ತರಕಾರಿ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಟಂಟಂ ವಾಹನ ಚಾಲಕರು, ಕ್ಲೀನರ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

publive-image

ಇದನ್ನೂ ಓದಿ: ಲಕ್ಷ್ಮೀ ಬಾರಮ್ಮದಲ್ಲಿ ಆತ್ಮ, ಪ್ರೇತಾತ್ಮಕ ಭಯಾನಕ ದೃಶ್ಯ; ನಾಗವಲ್ಲಿ ನೆನಪಿಸಿದ ಕೀರ್ತಿ..!

ವಿಜಯಪುರ: ಜಾತ್ರೆಗೆಂದು ಬಂದವರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮುದ್ದೇಬಿಹಾಳ ತಾಲೂಕಿನ
ಕುಂಟೋಜಿ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬೈಕ್​ ಸವಾರ ವೀಲ್ಹಿಂಗ್​ ಮಾಡಿದ ಪರಿಣಾಮ ಪಾದಚಾರಿಗಳ ಮೇಲೆ ಪಲ್ಸರ್ 200cc ಬೈಕ್ ಹರಿದಿದೆ. ಅಪಘಾತದಲ್ಲಿ ಒಟ್ಟು ನಾಲ್ವರು ಯುವಕರ ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.

[caption id="attachment_85240" align="alignnone" width="800"]ಉದಯ್ ಕುಮಾರ್ ಪ್ಯಾಟಿ, ನಿಂಗರಾಜ ಚೌಧರಿ ಉದಯ್ ಕುಮಾರ್ ಪ್ಯಾಟಿ, ನಿಂಗರಾಜ ಚೌಧರಿ[/caption]

ನಿನ್ನೆ ರಾತ್ರಿ 11.30ಕ್ಕೆ ನಡೆದ ಘಟನೆ ಇದಾಗಿದೆ. ಅನಿಲ ಖೈನೂರ (23), ನಿಂಗರಾಜ್ ಚೌಧರಿ (ಬೈಕ್ ಸವಾರ) ( 22 ), ಕುಮಾರ ಪ್ಯಾಟಿ (18), ರಾಯಪ್ಪ ಬಾಗೇವಾಡಿ (24) ಮೃತ ದುರ್ದೈವಿಗಳು. ಶಾಹಿದ ಹುನಗುಂದ, ಪ್ರಶಾಂತ ಕುರುಬಗೌಡರ, ಹನಮಂತ ಕರುಬಗೌಡರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಬಾಗಲಕೋಟ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಟಕ‌ ನೋಡಲು ಗುಂಪಾಗಿ ಹೋಗುತ್ತಿದ್ದವರ ಮೇಲೆ ಪಲ್ಸರ್ 200cc ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರನ ವೇಗ ಮತ್ತು ವೀಲ್ಹಿಂಗ್​ ಈ ಅಪಘಾತಕ್ಕೆ ಕಾರಣವಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾರ್ಜ್​​ಶೀಟ್​ನಲ್ಲಿ ಇದೆ ದರ್ಶನ್​ಗೆ ಕಂಟಕ ಆಗುವ ಹತ್ತು ವಿಚಾರಗಳು.. ಅವು ಯಾವುದು..?

ರಾಮನಗರ: ಲಾರಿಗೆ ಬೈಕ್ ಡಿಕ್ಕಿ ಹೊಡೆದು ಮೂವರ ಸಾವನ್ನಪ್ಪಿದ ಘಟನೆ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿ ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ.

ಮೃತರನ್ನು ಗುರುಮೂರ್ತಿ (39), ಶೇಕ್ ಅಫೀಸ್ (45), ವೆಂಕಟೇಶ್ (50) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಗಾರೆ ಕೆಲಸವರಾಗಿದ್ದು,  ಗಾಯಾಳು ಹನುಮಂತಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

publive-image

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯ ಸರ್ವೀಸ್ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ರಾಮನಗರದಿಂದ ಬಿಡದಿ ಕಡೆಗೆ ಹೋಗುತ್ತಿದ್ದಾಗ ಬೈಕ್​​ ಲಾರಿಗೆ ಡಿಕ್ಕಿ ಹೊಡೆದಿದೆ.

ಒಂದೇ ಬೈಕ್ ನಲ್ಲಿ ನಾಲ್ವರು ಪ್ರಯಾಣ ಮಾಡ್ತಿದ್ದರು. ಈ ವೇಳೆ ಲಾರಿ ಅಡ್ಡ ಬಂದ ಹಿನ್ನಲೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಎಎಸ್ಪಿ ಸುರೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಮನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  ಮುದ್ದಾದ ಅಳಿಯನಿಗೆ ಈಗಿನಿಂದಲೇ ನೀತಿ ಪಾಠ; ನಿನ್ನ ಸಾರಥಿ ನಾನಿರುವೆ ಎಂದ ಕಾರ್ತಿಕ್​ ಮಹೇಶ್​

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಸಿಮೆಂಟ್ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಕಂಟೈನರ್ ಹಾಗೂ ಮಂಗಳೂರಿಗೆ ತೆರಳುತ್ತಿದ್ದ ಬಸ್​ಗೆ ಹಿಂಭಾಗದಲ್ಲಿ ಡಿಕ್ಕಿ ಹೊಡೆದಿದೆ.

publive-image

ಮಂಗಳೂರಿಗೆ ತೆರಳುತ್ತಿದ್ದ ರೇಷ್ಮಾ ಹೆಸರಿನ ಬಸ್ ಹಿಂಬಂದಿಗೆ ಡಿಕ್ಕಿ ಹೊಡೆದಿದೆ. ಲಾರಿ ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬಸ್ ನಲ್ಲಿದ್ದ ಚಾಲಕ ಅಯೂಬ್ ಗೆ ಗಾಯವಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಶಕಗಳ ಕನಸು ಈಡೇರುವ ಸಮಯ.. ಇಂದು ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಉದ್ಘಾಟನೆ

ಬಾಗಲಕೋಟೆ: ಎರಡು ಬೈಕ್​ಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಮೂವರ ಸಾವನ್ನಪ್ಪಿದ ಘಟನೆ ಬಾಗಲಕೋಟೆಯ ನವನಗರದಲ್ಲಿ ತಡರಾತ್ರಿ ನಡೆದಿದೆ. ಸ್ಕೂಟಿಯಲ್ಲಿದ್ದ ಗೆಳತಿಯರಿಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇನೊಂದು ಬೈಕ್‌ನಲ್ಲಿದ್ದ ಇಬ್ಬರು ಯುವಕರ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಾಯವಾಗಿದೆ.

ನವನಗರದ ಅಬಕಾರಿ ಇಲಾಖೆ ಸಮೀಪದಲ್ಲಿ ನಡೆದಿರುವ ಘಟನೆ ಇದಾಗಿದೆ. ಪ್ರೊಫೆಸರ್ ಕೃತಿಕಾ ಒಂಟಕುದರಿ (32), ಸ್ನೇಹಿತೆ ರಜನಿ ಒಂಟಕುದರಿ (34), ಅಭಿಷೇಕ ಬಂಡಿವಡ್ಡರ ಮೃತರು ಎಂದು ಗುರುತಿಸಲಾಗಿದೆ.

[caption id="attachment_85241" align="alignnone" width="800"]ಕೃತಿಕಾ, ರಜನಿ, ಅಭಿಷೇಕ್ ಕೃತಿಕಾ, ರಜನಿ, ಅಭಿಷೇಕ್[/caption]

ಕೃತಿಕಾ ಖಾಸಗಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ರಜನಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಸ್ನೇಹಿತೆ ಜೊತೆಗೆ ಸ್ಕೂಟಿಯಲ್ಲಿ ಹೊರಟಿದ್ದ ವೇಳೆ ಬೈಕ್ ನಲ್ಲಿ ಕಾಳಿದಾಸ್ ಸರ್ಕಲ್ ನಿಂದ ಬಸ್ ನಿಲ್ದಾಣದ ಕಡೆಗೆ ಹೊರಟಿದ್ದ ಯುವಕರು ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದಲ್ಲಿ ರಜನಿ, ಅಭಿಷೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಕೃತಿಕಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನವನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ತಡರಾತ್ರಿ ಬೈಕ್‌ ಅಪಘಾತ ಸವಾರರಿಬ್ಬರ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಯೆಯ್ಯಾಡಿ ಎಂಬಲ್ಲಿ ನಡೆದಿದೆ. ಅಲ್ಲಿನ ಹರಿಪದವು ಎಂಬಲ್ಲಿ ದುರ್ಘಟನೆ ಸಂಭವಿಸಿದೆ.

ಉಪ್ಪಿನಂಗಡಿಯ ಚೇತನ್(24) ಮತ್ತು ಕೋಡಿಕಲ್​ನ ಕಾಶೀನಾಥ್ (17) ಮೃತ ದುರ್ದೈವಿಗಳು. ಲಾರಿಯೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬೈಕ್ ನಿಯಂತ್ರಣ ತಪ್ಪಿದೆ.

ಬೈಕ್ ನಿಂದ ಬಿದ್ದು ಸವಾರರು ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment