newsfirstkannada.com

ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲಕಿ.. ಇಷ್ಟಕ್ಕೆಲ್ಲಾ ಕಾರಣ ಯಾರು?

Share :

Published May 8, 2024 at 1:02pm

    ಬಾಲಕಿಯ ದೇಹದಲ್ಲಾದ ಬದಲಾವಣೆ ಗಮನಿಸಿ ಪೊಲೀಸರಿಗೆ ದೂರು

    ಪೊಲೀಸರು ಅನುಮಾನದ ಮೇರೆಗೆ ತನಿಖೆಗೆ ಕರೆಸಿಕೊಂಡಿದ್ದು ಯಾರನ್ನು ಗೊತ್ತಾ?

    ಮಗುವಿನ ಡಿಎನ್​ಎ​ ಪರೀಕ್ಷೆ ಮೂಲಕ ಅಪರಾಧಿ ಯಾರೆಂದು ಪೊಲೀಸರಿಂದ ಹುಡುಕಾಟ

13 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಡಿಎನ್​ಎ ಪರೀಕ್ಷೆ ಮೂಲಕ ಅಪರಾಧಿ ಯಾರೆಂದು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಅನುಮಾನದ ಮೇರೆಗೆ ಇಬ್ಬರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಾಹಿತಿಯ ಪ್ರಕಾರ, ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ತಾಯಿ ಮಗುವನ್ನು ಸಾಕಲು ನಿರಾಕರಿಸಿದ ಕಾರಣ ಶಿಶು ಕಲ್ಯಾಣ ಸಮಿತಿಯು ಮಗುವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ಪೊಲೀಸರು ಅನುಮಾನದ ಮೇರೆಗೆ ಆಕೆಯ ಸಹೋದರ ಮತ್ತು ನೆರೆಹೊರೆಯ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಅವರ ಹೇಳಿಕೆಯ ಆಧಾರಿಸಿ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: AIR INDIA: ಸಾಮೂಹಿಕ ರಜೆ ಹಾಕಿದ ಉದ್ಯೋಗಿಗಳು.. 70 ವಿಮಾನಗಳು ರದ್ದು​​! ಪರದಾಡಿದ ಪ್ರಯಾಣಿಕರು

ಬಾಲಕಿಯ ದೇಹದಲ್ಲಿ ಬದಲಾವಣೆ ಗಮನಿಸಿದ ಸಂತ್ರಸ್ತೆ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಪೊಲೀಸರು ತನಿಖೆ ಚುರುಗೊಳಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲಕಿ.. ಇಷ್ಟಕ್ಕೆಲ್ಲಾ ಕಾರಣ ಯಾರು?

https://newsfirstlive.com/wp-content/uploads/2023/09/NewBornBaby.jpg

Load More