newsfirstkannada.com

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕಿ ದಾರುಣ ಸಾವು

Share :

Published April 22, 2024 at 6:56am

  ದುರ್ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ

  ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದಾಗ ನಡೆದ ಅನಾಹುತ

  ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ

ಬೆಂಗಳೂರು: ತಡರಾತ್ರಿ ಬೆಂಗಳೂರಿನ ನೈಸ್​ ರಸ್ತೆಯಲ್ಲಿ ಅಪಘಾತಕ್ಕೀಡಾದ ಕಾರು ಬೆಂಕಿಗಾಹುತಿಯಾಗಿ 14 ವರ್ಷದ ಬಾಲಕಿ ಸಜೀವ ದಹನವಾಗಿದ್ದಾಳೆ.

ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಸುನಿತಾ, 65 ವರ್ಷದ ಮಂಜುಳ, 16 ವರ್ಷದ ಮಯಾಂಕ್, 17 ವರ್ಷದ ನಮನ್ , ಮಹೇಶ್, ತರುಣ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಅಬ್ಬಿಗೆರೆಯಿಂದ ದಾಸನಪುರಕ್ಕೆ ವಾಪಾಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:ಬೆಚ್ಚಿ ಬೀಳಿಸಿದ ಕೊರೊನಾ! ಈ ವ್ಯಕ್ತಿಗೆ 613 ದಿನಗಳ ಕಾಲ ಕಾಡಿದ ಸೋಂಕು, 50 ಬಾರಿ ರೂಪಾಂತರಗೊಂಡ ವೈರಸ್..!

ಓಮ್ನಿ ಹಾಗೂ ಬೊಲೆನೊ ಕಾರಿನ ನಡುವೆ ಡಿಕ್ಕಿಯಾಗಿ ಅಪಘಾತವಾಗಿದೆ.. ಘಟನೆಯಲ್ಲಿ ಓಮ್ನಿ ಕಾರಿಗೆ ಬೆಂಕಿ ತಗುಲಿ ಧಗಧಗ ಹೊತ್ತಿ ಉರಿದಿದೆ. ಗಾಯಾಳುಗಳು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕಿ ದಾರುಣ ಸಾವು

https://newsfirstlive.com/wp-content/uploads/2024/04/BNG-ACCIDENT-1.jpg

Load More