ಕಾಣೆಯಾಗಿದ್ದ ಮಗಳು ವಾಪಸ್ ಮನೆಗೆ ಬರಲೇ ಇಲ್ಲ
ಅಪ್ರಾಪ್ತ ಬಾಲಕಿ ಸಾಯಿಸಿದ ಕಿರಾತಕರು ಮಾಡಿದ್ದೇನು?
ಕುಲುಮೆಯಲ್ಲಿ ಶವವನ್ನು ಸುಟ್ಟು ಹಾಕಲು ಯತ್ನಿಸಿದರು
ಭಿಲ್ವಾರ: ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಮಗಳು ಮನೆಗೆ ಬರ್ತಾಳೆ ಅಂತಾ ತಂದೆ, ತಾಯಿ ಕಾಯುತ್ತಿದ್ದರು. ಆದರೆ ಆ ಅಪ್ರಾಪ್ತ ಬಾಲಕಿ ಶವವಾಗಿಯೂ ಸಿಕ್ಕಿಲ್ಲ. ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಹೋಗಿರೋ ಮೂಳೆಗಳು ಮಾತ್ರ ಪತ್ತೆಯಾಗಿವೆ. ಅಬ್ಬಾ.. ರಾಜಸ್ಥಾನದ ಭಿಲ್ವಾರ್‌ನಲ್ಲಿ ರಾಕ್ಷಸರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಸಾಯಿಸಿದ್ದಾರೆ. ಬಾಲಕಿ ಸತ್ತ ನಂತರ ಕಲ್ಲಿದ್ದಲು ಕುಲುಮೆಯಲ್ಲಿ ಶವದ ತುಂಡುಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ರೇಪ್ ಅಂಡ್ ಮರ್ಡರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಮೂರು ದಿನಗಳಲ್ಲಿ 5ನೇ ಅತ್ಯಾಚಾರದ ಪ್ರಕರಣ ಇದಾಗಿದೆ.
ಕಳೆದ ಬುಧವಾರವಷ್ಟೇ ಭಿಲ್ವಾರ್‌ನ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದ ದೂರು ಕೇಳಿ ಬಂದಿತ್ತು. ಆ ಬಾಲಕಿಯ ಸುಳಿವು ಹುಡುಕಿ ಹೋದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅದಕ್ಕಿಂತಲೂ ಘೋರವಾದ ಸಂಗತಿ ಏನಂದ್ರೆ ಕಲ್ಲಿದ್ದಲು ಕುಲುಮೆಯಲ್ಲಿ ಪೊಲೀಸರು ಬಾಲಕಿಯ ಮೂಳೆಗಳನ್ನು ಶೋಧಿಸಿ ಕಲೆ ಹಾಕಿದ್ದಾರೆ. ಆ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: VIDEO: ಜಡೆ ಹಿಡಿದ ಜಗಳಕ್ಕೆ ರೊಚ್ಚಿಗೆದ್ದ ಮೂವರು ಮಹಿಳೆಯರು; ಅಕ್ಕಪಕ್ಕ ಮನೆಯವರ ಮಧ್ಯೆ ಡಿಶುಂ, ಡಿಶುಂ!
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆಯಿದೆ. ಇದಕ್ಕೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳು ದೊರಕಿವೆ ಎನ್ನಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಸಾಯಿಸಿದ ಮನುಷ್ಯ ರೂಪದ ರಾಕ್ಷಸರು ತುಂಡು, ತುಂಡಾಗಿ ಕತ್ತರಿಸಿದ್ದಾರೆ. ಆ ಬಳಿಕ ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಹಾಕಲು ಯತ್ನಿಸಿದ್ದಾರೆ. ಈ ಅಮಾನುಷ ಘಟನೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ರಾಜಸ್ಥಾನದ ಮನೆಗಳಲ್ಲೂ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದ ಬಿಜೆಪಿ ಕಿಡಿಕಾರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ