ದನ ಮೇಯಿಸಲು ಹೋದ 14 ವರ್ಷದ ಬಾಲಕ ಸಾವು; ಕೃಷಿಹೊಂಡದಲ್ಲಿ ಸಿಕ್ತು ಮೃತದೇಹ

author-image
AS Harshith
Updated On
ದನ ಮೇಯಿಸಲು ಹೋದ 14 ವರ್ಷದ ಬಾಲಕ ಸಾವು; ಕೃಷಿಹೊಂಡದಲ್ಲಿ ಸಿಕ್ತು ಮೃತದೇಹ
Advertisment
  • ಶಾಲೆಗೆ ರಜೆ ಇರುವ ಹಿನ್ನೆಲೆ ದನ ಮೇಯಿಸಲು ಹೋಗಿದ್ದನು
  • ಮನೆಯಿಂದ ಹೋಗಿದ್ದ ಬಾಲಕ ಸಂಜೆ ಆದ್ರೂ ಮನೆ ಸೇರಿಲ್ಲ
  • ಕೃಷಿ ಹೊಂಡದಲ್ಲಿ ಪತ್ತೆಯಾಯ್ತು 14 ವರ್ಷದ ಬಾಲಕನ ಮೃತದೇಹ

ಶಿವಮೊಗ್ಗ: ಕೃಷಿ ಹೊಂಡಕ್ಕೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಕ್ಯಾಸನೂರು ತಲಕಾಲಕೊಪ್ಪ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸಾತ್ವಿಕ್(14) ಸಾವನ್ನಪ್ಪಿರುವ ದುರ್ದೈವಿ. ನಿನ್ನೆ ಸಾತ್ವಿಕ್​ ಜಾನುವಾರು ಮೇಯಿಸಲು ತೆರಳಿದ್ದನು. ಆದರೆ ಸಂಜೆ ವೇಳೆ ಆತ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಗ್ರಾಮದ ಸುರೇಶ್ ಎಂಬುವರ ಪುತ್ರ ಸಾತ್ವಿಕ್ ಶಾಲೆಗೆ ರಜೆ ಇರುವ ಹಿನ್ನೆಲೆ ಜಾನುವಾರು ಮೇಯಿಸಲು ತೆರಳಿದ್ದನು. ಗ್ರಾಮದ ಫಾತೀಮ ಎಂಬುವವರ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾತ್ವಿಕ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದ ಆಘಾತಕಾರಿ ಘಟನೆ.. ತಾಯಿ, ಮಗಳು, ಮೊಮ್ಮಗ ನಿಗೂಢ ಸಾವು

ವಿಷಯ ತಿಳಿದು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment