ಫಾರ್ಮಾಸೂಟಿಕಲ್ಸ್ ಕಂಪನಿಯ ರಿಯಾಕ್ಟರ್ ಬಳಿ ದಿಢೀರ್ ಸ್ಫೋಟ
ಅಗ್ನಿಶಾಮಕದಳ, ಪೊಲೀಸರಿಂದ ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ
ಆಸ್ಪತ್ರೆಯಲ್ಲಿ ಗಾಯಗೊಂಡವರ ತೀವ್ರ ನರಳಾಟ, ಬದುಕಿಸಲು ಹರಸಾಹಸ!
ಆಂಧ್ರಪ್ರದೇಶದ SEZ ಔಷಧಿ ಕಂಪನಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಫಾರ್ಮಾಸೂಟಿಕಲ್ಸ್ ಕಂಪನಿಯ ರಿಯಾಕ್ಟರ್ ಬಳಿ ಸ್ಫೋಟವಾಗಿದ್ದು ಕನಿಷ್ಟ 15 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ಅಚ್ಯುತಪುರಂನಲ್ಲಿರುವ ಔಷಧಿ ಕಂಪನಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕದಳ, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದು, ಗಾಯಾಳುಗಳನ್ನ ಅಂಕಪಲ್ಲಿ NTR ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ: ಅವಳಲ್ಲಿ ಇವನಿಲ್ಲಿ.. 60 ವರ್ಷದ ಅರ್ಚಕ, 20ರ ಸುಂದರಿ ಮೋಸದ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಅಚ್ಯುತಪುರಂ SEZ ಫಾರ್ಮಾಸೂಟಿಕಲ್ಸ್ ಕಂಪನಿಯಲ್ಲಿ 300ಕ್ಕೂ ಹೆಚ್ಚು ಮಂದಿ ಇದ್ದಾಗ ಸ್ಫೋಟ ಸಂಭವಿಸಿದೆ. ಇದುವರೆಗೂ ಸ್ಫೋಟದಲ್ಲಿ 15 ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಂಕಪಲ್ಲಿ ಎಸ್ಪಿ ದೀಪಿಕಾ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಫಾರ್ಮಾಸೂಟಿಕಲ್ಸ್ ಔಷಧಿ ಕಂಪನಿಯ ರಿಯಾಕ್ಟರ್ ಬಳಿ ದಿಢೀರ್ ಸ್ಫೋಟ ಸಂಭವಿಸಿದ್ದು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗಾಯಾಳುಗಳನ್ನು ಅಂಕಪಲ್ಲಿ ಎನ್‌ಟಿಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ