60 ವರ್ಷದ ಅರ್ಚಕನಿಗೆ ಫೇಸ್ಬುಕ್ನಲ್ಲಿ ಸಿಕ್ಕಿದ್ಳು ಮೋಹಕ ಸುಂದರಿ
ವಾಟ್ಸ್ ಅಪ್ ನಲ್ಲಿ ಚಾಟಿಂಗ್, ಆನ್ ಲೈನ್ಲ್ಲಿ ವಸೂಲಿ ಕಾರ್ಯಕ್ರಮ
ಅನಾಥೆ ಅಂತ ಕಣ್ಣೀರಿಟ್ಲು, ಕರಗಿದ ಅರ್ಚಕ ಕಳೆದುಕೊಂಡಿದ್ದು ಎಷ್ಟು ಲಕ್ಷ?
ಮಂಡ್ಯ: ಆನ್ಲೈನ್ನಲ್ಲಿ ಯಾವುದಾದರೂ ಸುಂದರಿ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ತನ್ನ ಗೋಳನ್ನು ಹೇಳಿಕೊಂಡು ಗೋಳೋ ಅಂತ ಅಳ್ತಿದ್ದಾಳಾ.? ಪ್ಲೀಸ್ ಸಹಾಯ ಮಾಡಿ ಅಂತಿದ್ದಾಳಾ, ದುಡಕಬೇಡಿ, ಅದು ಫೇಕ್ ಅಕೌಂಟ್ ಆಗಿರಬಹುದು. ನಿಮ್ಮಿಂದ ವಸೂಲಿ ಕಾರ್ಯಕ್ರಮ ಅವಳು ಇಟ್ಟುಕೊಂಡಿರಬಹುದು ಅಥವಾ ಆ ಕಡೆಯಿಂದ ಬರ್ತಿರೋ ಮೆಸೇಜ್ಗಳು ಹುಡುಯಗಿಯದೇ ಅಲ್ಲದಿರಬಹುದು. ಯಾಕಂದ್ರೆ ಫೇಸ್ಬುಕ್ನಲ್ಲಿ ಸುಂದರಿಯ ಕಣ್ಣೀರಿಗೆ ಕರಗಿದ 60 ವರ್ಷದ ಅರ್ಚಕರೊಬ್ಬರು ಬರೋಬ್ಬರಿ ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ.
ಇದನ್ನೂ ಓದಿ: 2ನೇ ಮದುವೆಯಾಗಲು ರೆಡಿಯಾಗಿದ್ದ ಭೂಪನಿಗೆ ಶಾಕ್: ಚರ್ಚ್ಗೆ ನುಗ್ಗಿದ ಮೊದಲನೇ ಹೆಂಡ್ತಿ ಮಾಡಿದ್ದೇನು?
ಅರ್ಚಕ ವಿಜಯ್ಕುಮಾರ್ ಮಂಡ್ಯದ ಪಾಂಡವಪುರ ತಾಲೂಕಿ ಪಟ್ಟ ಸೋಮನಹಳ್ಳಿ ನಿವಾಸಿ. ಅರ್ಚಕ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ವಿಜಯಕುಮಾರ್ 60ನೇ ಹರೆಯದಲ್ಲಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನ ಗೀಳು ಹಿಡಿದಿತ್ತು. ಮೊಬೈಲ್ನಲ್ಲಿ ಬ್ಯುಸಿಯಾಗಿರ್ತಾರೆ. ಈ ವಿಜಯಕುಮಾರ್ ಕೂಡ ಮೊಬೈಲ್ನಲ್ಲಿ ಬ್ಯುಸಿ ಇರ್ತಿದ್ರು. ಇಂಥಾ ಟೈಮ್ನಲ್ಲೇ ಈ ವಿಜಯ್ಕುಮಾರ್ಗೆ ಫೇಸ್ಬುಕ್ನಲ್ಲಿ ಸಿರಿ ಶ್ರೇಷಾ ಅನ್ನೋ ಖಾತೆಯಿಂದ ರಿಕ್ವೆಸ್ಟ್ ಬಂದಿದೆ. ಡಿಪಿ ನೋಡಿದ್ರೆ ಚೆಂದದ ಯುವತಿಯ ಫೋಟೋ ಇದೆ. ಹುಡುಗಿ ಚೆನ್ನಾಗಿಯೇ ಇದ್ದಾಳಲ್ಲ ಅಂತ ವಿಜಯಕುಮಾರ್ ರಿಕ್ವೆಸ್ಟ್ ಓಕೆ ಮಾಡಿ ಫ್ರೆಂಡ್ ಮಾಡ್ಕೊಂಡಿದ್ದಾರೆ. ಅಲ್ಲಿಂದ ಈ ಸಿರಿ ಶ್ರೇಷಾ ಮತ್ತು ವಿಜಯಕುಮಾರ ಮಧ್ಯೆ ಚಾಟಿಂಗ್ ಶುರುವಾಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲೊಂದು ಮೂಕ ಪ್ರಾಣಿಯ ಮರುಕ.. ಮಾಲೀಕ ಸಾವನ್ನಪ್ಪಿದ್ರೂ ಆಸ್ಪತ್ರೆ ಬಳಿ ಬಂದು ಕಾಯುತ್ತಿದೆ ಶ್ವಾನ
ವಿಜಯಕುಮಾರ ಚಾಟಿಂಗ್ ಶುರು ಮಾಡಿದ್ರು. ಅತ್ತ ಸಿರಿ ಶ್ರೇಷಾ ಅಕೌಂಟ್ನಿಂದ ಚಾಟ್ ಮಾಡ್ತಿದ್ದವರು ಅರ್ಚಕನ ಜೊತೆ ಎಲ್ಲವನ್ನು ಶೇರ್ ಮಾಡ್ಕೊಳೋದಕ್ಕೆ ಶುರು ಮಾಡಿದ್ದಾರೆ. ದಿನ ಕಳೆದಂತೆ ಇಬ್ಬರ ಮಧ್ಯೆ ಆತ್ಮೀಯತೆಯೂ ಬೆಳೆದಿದೆ. ಪೇಸ್ಬುಕ್ ಸುಂದರಿಗೆ ಮರುಳಾಗಿದ್ದ ಅರ್ಚಕ ವಿಜಯಕುಮಾರ ಆಕೆ ಕಷ್ಟ ನಷ್ಟಗಳನ್ನೆ ಕೇಳೋದಕ್ಕೆ ಶುರು ಮಾಡಿದ್ದಾನೆ. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ರು ಹಾಲು ಅನ್ನ ಅನ್ನೋವಂತೆ ಚಾಟಿಂಗ್ ಮಾಡ್ತಿದ್ದ ಯುವತಿಗೂ ಅದೇ ಬೇಕಾಗಿತ್ತು. ಒಳ್ಳೆ ಬಕ್ರಾನೇ ಸಿಕ್ಕ ಅಂತ ಫೇಸ್ಬುಕ್ನಲ್ಲಿ ಸಿಕ್ಕ ಸುಂದರಿ ಹೊಸ ವರಸೆ ಶುರು ಹಚ್ಕೊಂಡಿದ್ದಳು.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಅತ್ತ ಗಂಡನೂ ಆತ್ಮ*ಹತ್ಯೆ; ಕೋಪಗೊಂಡು ಅಳಿಯನ ಮನೆಗೆ ಬೆಂಕಿ ಇಟ್ಟ ಕುಟುಂಬಸ್ಥರು
ಯಾವಾಗ ಇಬ್ಬರ ನಡುವೆ ಒಂದು ಆತ್ಮಿಯತೆ ಬೆಸೆಯಿತೋ ಯುವತಿ ವಸೂಲಿ ಕಾರ್ಯಕ್ರಮಕ್ಕೆ ಇಳಿದಿದ್ದಾಳೆ. ಅರ್ಚಕನ ಮುಂದೆ ತಾನೊಬ್ಬಳು ಅನಾಥೆ ತನಗೆ ಯಾರು ಇಲ್ಲ. ನನಗೆ ಸಹಾಯ ಮಾಡಿ ಅಂತೆಲ್ಲ ಕೇಳಿಕೊಂಡಿದ್ಳಂತೆ. ಈ ಮಾತು ಕೇಳ್ತಿದ್ದಂತೆ ಅರ್ಚಕ ವಿಜಯಕುಮಾರ್ ಕರಗಿ ನೀರಾಗಿಬಿಟ್ಟಿದ್ರು. ಆಕೆ ಕಷ್ಟಕ್ಕೆ ಸ್ಪಂದಿಸಬೇಕು ಅಂತ ಅರ್ಚಕ ವಿಜಯಕುಮಾರ ಸಿರಿ ಶ್ರೇಷಾ ಅಕೌಂಟ್ನಿಂದ ಚಾಟ್ ಮಾಡ್ತಿದ್ದ ಹುಡುಗಿಗೆ ಹಣ ಹಾಕೋದಕ್ಕೆ ಶುರು ಮಾಡಿದ್ದಾರೆ. 100,200 ಅಂತ ಅವಳ ಅಕೌಂಟ್ಗೆ ದುಡ್ಡು ಹಾಕುತ್ತಲೇ ಇದ್ದ ವಿಜಯ್ಕುಮಾರ್ ಕೊನೆಗೆ ಕಳೆದುಕೊಂಡಿದ್ದು ಲಕ್ಷ ಲಕ್ಷ
ಇದನ್ನೂ ಓದಿ: Mysore Dasara 2024: ಗಜಪಯಣಕ್ಕೆ ಚಾಲನೆ.. ಇಂದು ಮೈಸೂರಿಗೆ ಆಗಮಿಸಲಿರೋ ಅಭಿಮನ್ಯು ಮತ್ತು ಟೀಂ
ಯುವತಿ ಯಾವಗೆಲ್ಲಾ ಹಣ ಕೇಳಿದ್ಲು ವಿಜಯಕುಮಾರ ಆಗೆಲ್ಲ ಹಣ ಹಾಕಿದ್ದಾರೆ. ಪೋನ್ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಹೀಗೆ ಅರ್ಚಕನಿಂದ ಫೇಸ್ಬುಕ್ ಸುಂದರಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂದು ಲಕ್ಷ ಹಣ ಹಾಕಿಸಿಕೊಂಡಿದ್ದಾಳಂತೆ. ಆದ್ರೆ ಯಾವಾಗ ಅರ್ಚಕ ವಿಜಯಕುಮಾರ್ ಫೇಸ್ಬುಕ್ ಸುಂದರಿಯನ್ನ ಮೀಟ್ ಮಾಡ್ಬೇಕು ಅಂತ ಹೇಳಿದ್ನೋ ಆಗ್ಲೇ ನೋಡಿ ಅಸಲಿ ಮ್ಯಾಟರ್ ಬಯಲಾಗಿದ್ದು
ಅರ್ಚಕ ಭೇಟಿಯಾಗಬೇಕು ಅಂದಾಗಲೆಲ್ಲಾ ಫೇಸ್ಬುಕ್ ಸುಂದರಿ ಅವಾಯ್ಡ್ ಮಾಡೋಕೆ ಶುರು ಮಾಡಿದ್ದಾಳೆ. ಹಲವು ಬಾರಿ ಸಿಗುವುದಾಗಿ ಹೇಳಿ ಆ ಯುವತಿ ವಿಜಯಕುಮಾರ ಕೈಗೆ ಸಿಕ್ಕೆ ಇಲ್ಲ. ಆಮೇಲೆ ಫೋನ್ ಮೆಸೆಜ್ ಮಾಡಿದ್ರೂ ನೋ ರೆಸ್ಪಾನ್ಸ್ ಆಗ್ಲೇ ನೋಡಿ ಇದು ಆನ್ಲೈನ್ ದೋಖಾ ಅಂತ ಗೊತ್ತಾಗಿರೋದು. ಯುವತಿ ಆಸೆಗೆ ಲಕ್ಷ ಕಳೆದುಕೊಂಡ ವೃದ್ಧ ಅರ್ಚಕ ಈಗ ಮಂಡ್ಯ ಸೈಬರ್ ಠಾಣೆ ಮೆಟ್ಟಿಲ್ಲೇರಿದ್ದಾನೆ. ಆದ್ರೆ ಅರ್ಚಕನಿಗೆ ಮೆಸೆಜ್ ಮಾಡಿರೋದು ನಕಲಿ ಖಾತೆ ಅನ್ನೋದು ಈಗ ಗೊತ್ತಾಗಿದೆ.
ವಿಜಯಕುಮಾರ್ಗೆ ಮೆಸೆಜ್ ಮಾಡಿದ್ದ ಅಕೌಂಟ್ ಫೇಕ್ ಅಕೌಂಟ್ ಆಗಿದೆ. ಯಾಕಂದ್ರೆ ಈ ಫೋಟೋ ಸಿರಿ ಬರೆಽಲಕ್ಕ ಅನ್ನೋ ಮಹಿಳೆಯದ್ದು. ಮೂಲತಃ ತೆಲಂಗಾಣ ನಿವಾಸಿರುವ ಸಿರಿಗೆ ಇನ್ಸ್ಟಾದಲ್ಲಿ 7 ಲಕ್ಷಕ್ಕೂ ಅಧಿಕ ಜನ ಫಾಲೋವರ್ಸ್ ಇದ್ದಾರೆ. ಈ ಸಿರಿ ಫೋಟೋವನ್ನೆ ಯಾರೋ ಕಿಡಿಗೇಡಿಗಳು ಬಳಸಿಕೊಂಡು ನಕಲಿ ಖಾತೆ ಕ್ರಿಯೇಟ್ ಮಾಡಿ ಈ ಅರ್ಚಕನಿಗೆ ಮೋಸ ಮಾಡಿರುವ ಶಂಕೆಯಿದೆ. ಸದ್ಯ ಈ ಬಗ್ಗೆ ಮಂಡ್ಯ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.ಯಾವುದಕ್ಕೂ ಆನ್ಲೈನ್ನಲ್ಲಿ ಫ್ರೆಂಡ್ಶಿಪ್, ರಿಲೇಷನ್ಶಿಪ್ ಬೆಳೆಸುವ ಮುನ್ನ ಹುಷಾರಾಗಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ