ಆಸ್ಪತ್ರೆಗೆ ಬರುತ್ತೆ, ವಾರ್ಡ್ ಬಳಿ ಬಂದು ಕಾಯುತ್ತೆ ಈ ಶ್ವಾನ
ಮಾಲೀಕ ಬರುತ್ತಾನೆಂದು ಕಾದು ಕುಳಿತ ಮೂಲಕ ಪ್ರಾಣಿ
ಮಲೆನಾಡಿನಲ್ಲೊಂದು ಬೆಳಕಿಗೆ ಬಂದ ಮನಕರಗುವ ಕತೆ
ಶ್ವಾನ ನಿಯತ್ತಿನ ಪ್ರಾಣಿ. ಅನ್ನ ಹಾಕಿದ ಮನೆಗೆ ಯಾವತ್ತು ಕನ್ನ ಹಾಕಲ್ಲ. ಪ್ರೀತಿ ತೋರಿದ ಮಾಲೀಕನಿಗೆ ಯಾವತ್ತು ಮೋಸ ಮಾಡಲ್ಲ. ಒಂದು ಬಾರಿ ಸ್ನೇಹ ಬೆಳೆದರೆ ಶ್ವಾನಗಳು ಯಾವತ್ತು ಕೈ ಬಿಡಲ್ಲ. ಮಾತ್ರವಲ್ಲ, ಪ್ರೀತಿ ಕೊಟ್ಟವನಿಗೆ ಕುಟುಂಬದವರು ಕಣ್ಣೀರು ಹಾಕುತ್ತಾರೋ ಗೊತ್ತಿಲ್ಲ ಆದರೆ ಶ್ವಾನಗಳು ಮಾತ್ರ ಮರುಗುತ್ತವೆ. ಅದಕ್ಕೆ ಬೆಸ್ಟ್ ಉದಾಹರಣೆಯೊಂದು ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಹೊಳೆಹೊನ್ನೂರು ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲಿನ ಕನ್ನೆಕೊಪ್ಪ ನಿವಾಸಿ ಪಾಲಾಕ್ಷಪ್ಪ (47) ಎಂಬವರು 15 ದಿನಗಳ ಹಿಂದೆ ನಿಧನರಾಗುತ್ತಾರೆ. ಎದೆನೋವಿನ ಕಾರಣ ಪ್ರಾಥಮಿಕ ಆರೋಗ್ಯದಲ್ಲಿ ದಾಖಲಾಗಿದ್ದ ಅವರನ್ನು ಆರೋಗ್ಯ ಸ್ಥಿತಿ ಗಮನಿಸಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಪಾಕಾಕ್ಷಪ್ಪ ನಿಧನರಾಗಿದ್ದಾರೆ.
ಇದನ್ನೂ ಓದಿ: ನಿಮಗೆ ಗೊತ್ತಿದೆಯೋ? ಗೊತ್ತಿಲ್ವಾ? ಭಾರತದಲ್ಲೇ ಇದೆ ಕಳ್ಳತನ, ರಾಬರಿ, ಡಕಾಯಿತಿಗೆ ಟ್ರೈನಿಂಗ್ ಕೊಡುವ ಶಾಲೆ!
ಪಾಲಾಕ್ಷಪ್ಪ ಸಾವನ್ನಪ್ಪಿದರು ಶ್ವಾನ ಮಾತ್ರ ತನ್ನ ಮಾಲೀಕ ಬದುಕಿದ್ದಾನೆಂದು ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದೆ. ಮಾಲೀಕ ದಾಖಲಾಗಿದ್ದ ವಾರ್ಡ್ ಬಳಿ ಬಂದು ಅವರಿಗಾಗಿ ಕಾಯುತ್ತಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಉರುಳಿ ಬಿದ್ದ ಯಾತ್ರಾರ್ಥಿಗಳ ಬಸ್.. 35 ಜನರು ಸಾವು, 7 ಮಂದಿ ಗಂಭೀರ
ಪ್ರಾರಂಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಬೀದಿ ನಾಯಿಯೆಂದು ಓಡಿಸುತ್ತಿದ್ದರು. ಆದರೆ ಶ್ವಾನ ವಾರ್ಡ್ ಬಳಿನ ಬಂದು ಬೊಗಳುತ್ತಿತ್ತಂತೆ. ಹೀಗೆ ದಿನಾಲು ಬರುತ್ತಿದ್ದ ಶ್ವಾನದ ಬಗ್ಗೆ ತಿಳಿದುಕೊಂಡಾಗ ನಿಜ ವೀಚಾರ ಬೆಳಕಿಗೆ ಬಂದಿದೆ. ಮಾಲೀಕ ಬರುವಿಕೆಗಾಗಿ ಮೂಕ ಶ್ವಾನ ಕಾಯುತ್ತಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ಲೀಕ್ ಆಯ್ತು iPhone SE4 ಮಾಹಿತಿ.. ಬೆಲೆ, ವಿಶೇಷತೆ, ಬಿಡುಗಡೆ ದಿನಾಂಕ ಬಹಿರಂಗ
ಆದರೀಗ ಶ್ವಾನ ಯಾರಿಗಾದರು ಕಚ್ಚಬಹುದು ಎಂಬ ಕಾರಣಕ್ಕೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ಅವರು ನಾಯಿಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ