ಇಂತಹದೊಂದು ಸ್ಕೂಲ್ ಯಾವ ರಾಜ್ಯದಲ್ಲಿದೆ ಗೊತ್ತಾ?
ಲಕ್ಷ ಲಕ್ಷ ಪೀಸ್.. ಮಕ್ಕಳನ್ನು ಅಪ್ಪ-ಅಮ್ಮನೇ ಇಲ್ಲಿಗೆ ಸೇರಿಸ್ತಾರಂತೆ
ಯಾರ ಭಯವೂ ಇಲ್ಲ.. ರಾಜಾರೋಷವಾಗಿ ನಡೀತಿವೆ ಈ ಶಾಲೆಗಳು
ಮಕ್ಕಳು ಚೆನ್ನಾಗಿ ಓದಬೇಕು. ಒಳ್ಳೇ ಮಾರ್ಕ್ಸ್ ಪಡೀಬೇಕು. ಎಜುಕೇಷನ್ನಲ್ಲಿ ಮಾಸ್ಟರ್ಸ್ ಮಾಡಬೇಕು. ಒಟ್ಟಿನಲ್ಲಿ ಉತ್ತಮವಾಗಿ ಲೈಫ್ನ ಲೀಡ್ ಮಾಡಬೇಕು ಅಂತಾ ಹೇಳೋದು ಅಪ್ಪ ಅಮ್ಮ ಮಾತ್ರ. ಏನೇ ಮಾಡು, ಎಷ್ಟೇ ಸಂಪಾದನೆ ಮಾಡು ಆದ್ರೇ ಒಳ್ಳೇ ಕೆಲಸ ಮಾಡು. ನಮಗ್ ಮಾತ್ರ ಕೆಟ್ಟ ಹೆಸರು ತರಬೇಡ ಅಂತ ಹೇಳ್ತಾರೆ. ಹೊಟ್ಟೆಗೆ ಬಟ್ಟೆ ಕಟ್ಟಿ, ಸಾಲ ಮಾಡಿಕೊಂಡು ಮಕ್ಕಳನ್ನು ಇರೋದ್ರಲ್ಲೇ ಒಳ್ಳೆಯ ಸ್ಕೂಲ್ ಹುಡುಕಿ ಸೇರಿಸ್ತಾರೆ. ಮಕ್ಕಳು ಎಲ್ಲಿ ಅಡ್ಡ ದಾರಿ ಹಿಡಿತಾರೋ ಎಂಬ ಭಯದಲ್ಲೇ ಎಷ್ಟೇ ಖರ್ಚಾದ್ರೂ ಪರವಾಗಿಲ್ಲ, ನಮ್ಮ ಮಕ್ಕಳು ಹೈಫೈ ಸ್ಕೂಲ್ ಕಾಲೇಜ್ಗಳಲ್ಲೇ ಓದಿಸಬೇಕು ಪ್ಲ್ಯಾನ್ ಮಾಡೋದು ಕಾಮನ್. ಆದರೆ ಇಲ್ಲೊಂದು ಕಡೆ ಮಕ್ಕಳಿಗೆ ಕಳ್ಳತನ, ಸುಲಿಗೆ, ರಾಬರಿ ಹೇಗೆ ಮಾಡೋದು, ಕ್ರೈಂ ಹೇಗೆ ಮಾಡೋದು ಅಂತ ಕಲಿಸೋ ಶಾಲೆ ನಡೀತಿದೆ.
ಮಧ್ಯಪ್ರದೇಶದ ಮೂರು ಕುಗ್ರಾಮಗಳಲ್ಲಿ ಇಂತಹದೊಂದು ಶಾಲೆ ಇವೆ. ಇಲ್ಲಿ ಕ್ರಿಮಿನಲ್ಗಳಿಂದ, ಕ್ರಿಮಿನಲ್‌ಗಳೋಸ್ಕರ, ಕ್ರಿಮಿನಲ್‌ಗಳಿಗಾಗಿ ಎಂಬ ಸಂದೇಶ ಸಾರೋ ಶಾಲೆಗಳು ನಡೀತಿವೆ. ಈ ಕ್ರಿಮಿನಲ್ ಶಾಲೆಗಳಿಗೆ ಸುಮ್ ಸುಮ್ಮನೆ ಸೇರೋಕೆ ಆಗಲ್ಲ. ಈ ಶಾಲೆಗೆ ಸೇರಬೇಕಂದ್ರೇ ಲಕ್ಷ ಲಕ್ಷ ಫೀಸ್ ಕಟ್ಟಬೇಕು. ವೆರೈಟಿ ವೆರೈಟಿ ಕೋರ್ಸ್ಗಳಿಗೆ ಡಿಫ್ರೆಂಟ್ ಸ್ಟೈಲ್ನಲ್ಲಿ ಫೀಸ್ ಕಟ್ಟಬೇಕು. ಆ ಫೀಸ್ ರೇಟ್ ಕೇಳಿದ್ರೂ ನೀವ್ ಶಾಕ್ ಆಗಬಹುದು.
ಇದನ್ನೂ ಓದಿ: ಅಬ್ಬಬ್ಬಾ.. ಯೂಟ್ಯೂಬ್ನಿಂದ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾರೆ ಈ ಟ್ರಕ್ ಡ್ರೈವರ್; ಯಾರಿವರು?
ಹೌದು. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಸುಮಾರು 117 ಕಿ.ಮೀ ದೂರದಲ್ಲಿರುವ ಕಾದಿಯಾ, ಗುಲ್ಖೇದಿ ಹಾಗೂ ಹುಲ್ಖೇದಿ ಅನ್ನೋ ಗ್ರಾಮಗಳಲ್ಲಿ ಕಳ್ಳತನ, ರಾಬರಿ ಮತ್ತು ಡಕಾಯಿತಿ ಟ್ರೈನಿಂಗ್ ಕೊಡಲಾಗುತ್ತೆ. ಪೊಲೀಸರಿಗೆ ಈ ಬಗ್ಗೆ ಸಂಪೂರ್ಣವಾಗಿ ವಿಚಾರ ಗೊತ್ತಿದ್ದರೂ, ಯಾವುದೇ ರೀತಿ ಭಯವೇ ಇಲ್ಲದೇ ಶಾಲೆಗಳು ರಾಜಾರೋಷವಾಗಿ ನಡೀತಿವೆ.
12, 13 ವರ್ಷ ವಯಸ್ಸಿನ ಚಿಕ್ಕ ಮಕ್ಕಳನ್ನು ಕ್ರೈಂ ಆ್ಯಕ್ಟಿವಿಟಿಗಳಲ್ಲಿ ಟ್ರೈನಿಂಗ್ ಕೊಡೋಕೆ ಮಕ್ಕಳ ತಂದೆ ತಾಯಿಯರೇ ಇಷ್ಟಪಡ್ತಾರೆ. ಈ ಕ್ಲಾಸ್ಗಳನ್ನ ಅಟೆಂಡ್ ಮಾಡು ಅಂತಾನೂ ಹೇಳ್ತಾರಂತೆ. ಪೋಷಕರು, ಗ್ಯಾಂಗ್ ನಾಯಕರನ್ನು ಮೀಟ್ ಮಾಡಿದ ಮೇಲೆ ನಮ್ಮ ಮಗುವಿಗೆ ಯಾರು ಸೂಪರ್ ಆಗಿ ಟ್ರೈನಿಂಗ್ ಮಾಡ್ತಾರೆ ಅಂತ ಫೈನಲ್ ಮಾಡ್ತಾರೆ. ಈ ಕ್ರಿಮಿನಲ್ ಸಿಲಬಸ್ನಲ್ಲಿ ಅಡ್ಮಿಷನ್ ಆಗೋಕೆ ಬರೋಬ್ಬರಿ 2 ಲಕ್ಷದಿಂದ 3 ಲಕ್ಷದವರೆಗಿನ ಫೀಸ್ ಕಟ್ತಾರೆ. ಇಲ್ಲಿ ಮಕ್ಕಳಿಗೆ ಪಿಕ್ ಪಾಕೆಟ್, ತುಂಬ ಜನ ಇರೋ ಸ್ಥಳಗಳಲ್ಲಿ ಬ್ಯಾಗ್ ಎಗರಿಸೋದು, ಫಾಸ್ಟ್ ರನ್ನಿಂಗ್, ಪೊಲೀಸರಿಂದ ಹೇಗೆ ಎಸ್ಕೇಪ್ ಆಗೋದು, ಅಕಸ್ಮಾತ್ ಸಿಕ್ಕಿಬಿದ್ದರೆ ಪೊಲೀಸರ ಲಾಠಿ ಏಟುಗಳನ್ನ ಸಹಿಸಿಕೊಳ್ಳೋದು ಹೇಗೆ ಅನ್ನೋದನ್ನ ವಿವರವಾಗಿ ಹೇಳಿಕೊಡ್ತಾರೆ. ಗ್ಯಾಂಗ್‌ನಲ್ಲಿ ಒಂದು ವರ್ಷ ಟ್ರೈನಿಂಗ್ ತೆಗೆದುಕೊಂಡಾದ್ಮೇಲೆ, ಮಗುವಿನ ಪೋಷಕರು ಗ್ಯಾಂಗ್ ಲೀಡರ್‌ನಿಂದ ವರ್ಷಕ್ಕೆ 3 ಲಕ್ಷ ದಿಂದ 5 ಲಕ್ಷ ಹಣವನ್ನು ರಿಟರ್ನ್ ಪಡೀತಾರೆ.
ಇದನ್ನೂ ಓದಿ: ಉರುಳಿ ಬಿದ್ದ ಯಾತ್ರಾರ್ಥಿಗಳ ಬಸ್.. 35 ಜನರು ಸಾವು, 7 ಮಂದಿ ಗಂಭೀರ
ದೆಹಲಿಯಲ್ಲಿ ಡಿಸೆಂಬರ್ 2023ರಂದು, 22 ವರ್ಷದ ಯಶ್ ಸಿಸೋಡಿಯಾ ಎನ್ನುವ ಹುಡುಗನ ಮದುವೆಯಲ್ಲಿ ಚಿನ್ನಾಭರಣ ತುಂಬಿದ್ದ ಚೀಲವನ್ನು ಕದ್ದು ಒಬ್ಬ ಪರಾರಿಯಾಗಿದ್ದ. ಆತನ ವಿರುದ್ಧ ಬರೋಬ್ಬರಿ 18 ಪ್ರಕರಣಗಳು ದಾಖಲಾಗಿದೆ. ಇತ್ತೀಚಿಗೆ ಈ ಗ್ಯಾಂಗ್ ಬಿಗ್ ರಾಬರಿ ಮಾಡಿ ಸುದ್ದಿಯಾಗಿತ್ತು.
ಆಗಸ್ಟ್ 8ರಂದು ರಾಜಸ್ತಾನದ ಜೈಪುರದ ಹಯಾತ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್ ಇವೆಂಟ್ನಲ್ಲಿ ಅಪ್ರಾಪ್ತ ಕಳ್ಳನೊಬ್ಬ ಬರೊಬ್ಬರಿ 1.5 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 1 ಲಕ್ಷ ಹಣ ಇರೋ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದ.
ಇದನ್ನೂ ಓದಿ: ಒಡಲು ತುಂಬಿಸುತ್ತಿದ್ದಾಳೆ ತುಂಗಭದ್ರೆ.. ಹೆಚ್ಚುತ್ತಿದೆ ಒಳಹರಿವು! ಡ್ಯಾಂ ಭರ್ತಿಗೆ ಇನ್ನೆಷ್ಟು ಬಾಕಿ?
ಇನ್ನೊಂದು ಕೇಸ್ನಲ್ಲಿ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಮಗನ ಮದುವೆಯಲ್ಲಿ, ಮದುಮಕ್ಕಳಿಗೆ ಆಶೀರ್ವಾದ ಮಾಡುತ್ತಿರುವ ಹುಡುಗನ ತಾಯಿಯ ಬ್ಯಾಗ್ನ ಕುರ್ಚಿಯಲ್ಲಿ ಇಟ್ಟಿದ್ದರು. ಅಪ್ರಾಪ್ತ ವಯಸ್ಕ ಅದನ್ನ ಟಾರ್ಗೆಟ್ ಮಾಡಿ, ಬ್ಯಾಗ್ ಕದ್ದು ಪರಾರಿಯಾಗಿದ್ದ. ಕಳ್ಳತನ ಮಾಡಿದ ಮೇಲೆ, ಆತನ ಗ್ಯಾಂಗ್ ರಾಜ್‌ಗಢ್ ಜಿಲ್ಲೆಯ ಕಡಿಯಾ ಗ್ರಾಮಕ್ಕೆ ಎಸ್ಕೇಪ್ ಆಗಿದ್ದಾರೆ. ಸ್ವಲ್ಪವೂ ಅನುಮಾನ ಬರದಂತೆ ಕದ್ದ ಆಭರಣಗಳನ್ನು ತಕ್ಷಣ ಮಾರಾಟ ಮಾಡಿದ್ದಾರೆ. ಅಲ್ಲಿಂದಲೇ ನೇರವಾಗಿ ಧಾರ್ಮಿಕ ಯಾತ್ರೆಯಾದ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇವರ ಜೊತೆಗೆ ಬೆನ್ನು ಹತ್ತಿದ್ದ ಪೊಲೀಸರು ಕಳ್ಳನನ್ನು ಹಿಡಿದು, ಚೆನ್ನಾಗಿ ರುಬ್ಬಿದಾಗ ಇಡೀ ಗ್ಯಾಂಗ್ ನ ಭಯಂಕರ ಇತಿಹಾಸ ಬಾಯ್ ಬಿಟ್ಟಿದ್ದಾನೆ.
ಈ ಕ್ರಿಮಿನಲ್ ಗಳು ಎಷ್ಟು ಖತರ್ನಾಕ್ಗಳೆಂದರೇ ಅವರು ಆಭರಣದ ಅಂಗಡಿಗೆ ಹೋಗದೇನೆ, ಈ ಗೋಲ್ಡ್ ಎಷ್ಟು ಗ್ರಾಂ ಇದೆ. ಯಾವ ಕ್ಯಾರೆಟ್ ಚಿನ್ನ ಅಂತ ಜಡ್ಜ್ ಮಾಡ್ತಾರೆ. ಮಕ್ಕಳಿಗೆ ಕಳ್ಳತನ, ಜೂಜಾಟ ಮತ್ತು ಮದ್ಯ ಮಾರಾಟ ಮಾಡೋಕೆ ಟ್ರೈನಿಂಗ್ ಕೊಡ್ತಾರೆ ಅಂತ ಎಡಿಜಿಪಿ ಜೈದೀಪ್ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ಲೀಕ್ ಆಯ್ತು iPhone SE4 ಮಾಹಿತಿ.. ಬೆಲೆ, ವಿಶೇಷತೆ, ಬಿಡುಗಡೆ ದಿನಾಂಕ ಬಹಿರಂಗ
ಬೋಡಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮ್‌ಕುಮಾರ್ ಭಗತ್ ಈ ಕೇಸ್ ಬಗ್ಗೆ ಮಾಹಿತಿ ಕೊಟ್ಟಿದ್ದು, ಈ ಅಪರಾಧಿಗಳು ಬ್ಯಾಗ್ ಎಗರಿಸುವುದು, ಬ್ಯಾಂಕ್ ಕಳ್ಳತನದಲ್ಲಿ ಹೆಚ್ಚು ತರಬೇತಿ ಪಡೆದಿದ್ದಾರೆ. ಸಾಮಾನ್ಯವಾಗಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ತಮ್ಮ ಆ್ಯಕ್ಟಿವಿಟಿಗಳಲ್ಲಿ ಬಳಸಿಕೊಳ್ತಾರೆ. ಈ ಗ್ರಾಮಗಳಲ್ಲಿ ಮಕ್ಕಳಿಗೆ ಕಳ್ಳತನ ತರಬೇತಿ ಕೊಟ್ಟ ಮೇಲೆ ಪ್ರೊಫೆಶನಲ್ ಕಳ್ಳರನ್ನಾಗಿ ತಯಾರು ಮಾಡಲಾಗುತ್ತಿದೆ ಅಂತ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಈ ಗ್ರಾಮಗಳ 300ಕ್ಕೂ ಹೆಚ್ಚು ಮಕ್ಕಳು ಬೇರೆ ಬೇರೆ ರಾಜ್ಯಗಳಲ್ಲಿ ಅದ್ದೂರಿ ಮದುವೆ ಸಮಾರಂಭಗಳಲ್ಲಿ ಕಳ್ಳತನ ಬರ್ತಾರೆ. ಈ ಗ್ಯಾಂಗ್‌ಗಳು ಹೆಚ್ಚು ಸಿಸ್ಟಮೇಟಿಕ್ನಿಂದ ಇರುತ್ತೆ. ಕ್ರೈಂಗಾಗಿ ಅಂತ ಕೆಲ ಟೆಕ್ನಾಲಜಿಗಳನ್ನ ಬಳಸಿಕೊಳ್ತಾರೆ. ಹಳ್ಳಿಯ ಶ್ರೀಮಂತ ವ್ಯಕ್ತಿಗಳು ಹರಾಜ್ ಮೂಲಕ 1 ರಿಂದ 2 ವರ್ಷಗಳವರೆಗೆ ಬಡ ಮಕ್ಕಳನ್ನು ಬಾಡಿಗೆಗೆ ಪಡೀತಾರೆ. ಈ ಹರಾಜು ಬರೊಬ್ಬರಿ 20 ಲಕ್ಷದವರೆಗೆ ಹೋಗೋ ಚಾನ್ಸ್ ಇರುತ್ತೆ. ಒಮ್ಮೆ ಟ್ರೈನಿಂಗ್ ಪಡೆದ ಮೇಲೆ, ಮಕ್ಕಳ ಇನ್ವೆಸ್ಟ್ಗಿಂತ ಐದರಿಂದ ಆರು ಪಟ್ಟು ಇನ್ಕಮ್ ಗಳಿಸುತ್ತಾರೆ, ಆಮೇಲೆ ಅವರನ್ನು ಗ್ಯಾಂಗ್‌ಗಳಿಂದ ರಿಲೀವ್ ಮಾಡ್ತಾರೆ.
ಇದನ್ನೂ ಓದಿ: ಥೇಟ್ ರಂಬೆಯಂತೆ ಕಾಣುತ್ತಿರುವ ಸಂಗೀತಾ ಶೃಂಗೇರಿ; ನಟಿ ಮೈಮಾಟಕ್ಕೆ ಫಿದಾ ಆದ್ರು ಅಭಿಮಾನಿಗಳು
ಸ್ಕೂಲ್ನಲ್ಲಿ ಹೇಳಿ ಕೊಡೊ ಪಾಠ ಕಲಿತು, ಲೈಫ್ನಲ್ಲಿ ಒಳ್ಳೇ ಮನುಷ್ಯರಾಗಿ, ನಾಲ್ಕು ಜನಕ್ಕೆ ಒಳ್ಳೇದ್ ಮಾಡೋಕೆ ಆಗದೇ ಇದ್ರೂ, ಕೆಟ್ಟದ್ದಂತೂ ಮಾಡಬೇಡ ಅಂತಾರೆ. ಆದ್ರೇ ಮೂರು ನಾಲ್ಕು ಹಳ್ಳಿಗಳಲ್ಲಿ ಮಕ್ಕಳಿಗೆ ಕಳ್ಳತನ ಮಾಡೋದು ಹೇಗೆ? ರಾಬರಿ ಟೆಕ್ನಿಕ್ಸ್, ಪಿಕ್ಪಾಕೆಟ್ಗೆ ಐಡಿಯಾಗಳನ್ನ ಹೇಳಿ ಕೊಡ್ತಾರೆ. ಅವರ ಅಪ್ಪ-ಅಮ್ಮಾನೇ ಸ್ಕೂಲ್ಗೆ ಕಳಿಸ್ತಾರೆ. ಅದರಿಂದ ಇನ್ಕಮ್ ಪಡೀತಾರೆ. ಹುಟ್ಟಿದ ಮಕ್ಕಳನ್ನೇ ಬಾಡಿಗೆಗೆ ಬಿಡ್ತಾರೆ ಅಂದ್ರೇ ಇನ್ನೂ ಈ ಕಣ್ಣಲ್ಲಿ ಏನೇನೂ ನೋಡಬೇಕೋ. ಕಿವಿಯಲ್ಲಿ ಇನ್ನೂ ಏನೇನು ಕೇಳಬೇಕು ಅಂತ ದೇವರೇ ಬಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ