newsfirstkannada.com

ಲೀಕ್​ ಆಯ್ತು iPhone SE4 ಮಾಹಿತಿ.. ಬೆಲೆ, ವಿಶೇಷತೆ, ಬಿಡುಗಡೆ ದಿನಾಂಕ ಬಹಿರಂಗ

Share :

Published August 21, 2024 at 9:28am

Update August 21, 2024 at 5:30pm

    iPhone 16 ಬಿಡುಗಡೆಗೆ ಕಾದು ಕುಳಿತ ಆ್ಯಪಲ್ ಪ್ರಿಯರು

    ಹಲವು ವಿಶೇಷತೆಗಳನ್ನು ಒಳಗೊಂಡಿವೆ ಐಫೋನ್​ SE 4

    ಬ್ಯಾಟರಿ, ಬೆಲೆ ಸೇರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ

ಬಹುನಿರೀಕ್ಷಿತ ಆ್ಯಪಲ್​ ಐಫೋನ್​ 16 ಬಿಡುಗಡೆಗೆ ಸಜ್ಜಾಗಿದೆ. ಆದರೆ ಇದರ ಬಿಡುಗಡೆಯ ಸುದ್ದಿಯ ಜೊತೆ ಜೊತೆಗೆ ಐಫೋನ್​ SE 4 ಕುರಿತಾಗಿ ಮಾಹಿತಿ ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿ ಪ್ರಕಾರ ಐಫೋನ್​ SE 4 ಕುರಿತ ಹಲವು ವಿಶೇಷತೆಗಳು ಬಹರಂಗಗೊಂಡಿವೆ.

ಐಫೋನ್​ SE 4ಗಾಗಿ ಆ್ಯಪಲ್​ ಪ್ರಿಯರು ಕಾಯುತ್ತಿದ್ದಾರೆ. ಅಂದಹಾಗೆಯೇ ಇದು BOEಯಿಂದ OLED ಡಿಸ್​​ಪ್ಲೇ, USB-c ಪೋರ್ಟ್​ ಸೇರಿದಂತೆ ಹಲವು ಗಮನಾರ್ಹ ನವೀಕರಣವನ್ನು ಒಳಗೊಂಡಿದೆ ಎಂಬ ವದಂತಿಯಿದೆ.

ಇದನ್ನೂ ಓದಿ: ಆಕರ್ಷಕ ಬೆಲೆ, ಮ್ಯಾಕ್ರೊ ವಿಷನ್​​, ಫ್ಯಾಮಿಲಿ ಸ್ಪೇಸ್ ವೈಶಿಷ್ಟ್ಯ.. ಇಂದು Moto G45 ಸ್ಮಾರ್ಟ್​ಫೋನ್ ರಿಲೀಸ್​​​

ಆ್ಯಪಲ್​ ಐಫೋನ್​ SE 3ಗೆ ಹೋಲಿಸಿದರೆ ಇದರಲ್ಲಿ ಗಮನಾರ್ಹ ಸುಧಾರಣೆ ತರಲಾಗಿದೆ ಎನ್ನಲಾಗುತ್ತಿದೆ. ಮೇಲ್ನೋಟಕ್ಕೆ ಐಫೋನ್​ 14 ಹೋಲುವಂತಿದ್ದು, ದೀರ್ಘ ಕಾಲ ಬಾಳಿಕೆ ಬರುವ ಬ್ಯಾಟರಿ ಇದರಲ್ಲಿದೆ ಎನ್ನಲಾಗುತ್ತಿದೆ. iPhone SE4 ಬಹುತೇಕ ಮಾರ್ಚ್ ಮತ್ತು ಮೇ 2025ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಪರಿಚಿತ ನಂಬರ್​ನಿಂದ ಮೆಸೇಜ್​ ಬರುತ್ತಾ? ಸದ್ಯದಲ್ಲೇ ಅದಕ್ಕೆ ಮುಕ್ತಿ ನೀಡಲಿದೆ ವಾಟ್ಸ್​ಆ್ಯಪ್​

3,279 mAh ಬ್ಯಾಟರಿಯನ್ನು ಐಫೋನ್​ SE 4 ಹೊಂದಿದೆಯಂತೆ. ಇದು ಬಯೋನಿಕ್​ ಚಿಪ್​ನೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಇನ್ನು ಐಫೋನ್​ SE 3ಯನ್ನು ಭಾರತದಲ್ಲಿ 43,900 ರೂಗೆ ಮಾರಾಟ ಮಾಡಲಾಯಿತು. ಆದರೆ ಐಫೋನ್​ SE 4 ದೊಡ್ಡ ನವೀಕರಣದ ಜೊತೆಗೆ ಬರುವುದರಿಂದ ಬೆಲೆ ಕೊಂಚ ಜಾಸ್ತಿ ಇರಬಹುದು ಎಂದು ಅಂದಾಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೀಕ್​ ಆಯ್ತು iPhone SE4 ಮಾಹಿತಿ.. ಬೆಲೆ, ವಿಶೇಷತೆ, ಬಿಡುಗಡೆ ದಿನಾಂಕ ಬಹಿರಂಗ

https://newsfirstlive.com/wp-content/uploads/2024/08/Iphone-SE4.jpg

Load More