/newsfirstlive-kannada/media/post_attachments/wp-content/uploads/2024/09/UP_ACCIDENT.jpg)
ಲಕ್ನೋ: ಸಾರಿಗೆ ಬಸ್ವೊಂದು ಭೀಕರವಾಗಿ ಮಿನಿ ಟ್ರಕ್ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ 15 ಪ್ರಯಾಣಿಕರು ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದ ಹತ್ರಾಸ್‌ನ ಆಗ್ರಾ-ಅಲಿಗಢ ರಾಷ್ಟ್ರೀಯ ಹೆದ್ದಾರಿ 93ರಲ್ಲಿ ಈ ಘಟನೆ ನಡೆದಿದೆ.
ಆಗ್ರಾ-ಅಲಿಗಢ ರಾಷ್ಟ್ರೀಯ ಹೆದ್ದಾರಿ 93ರಲ್ಲಿ ಮಿನಿ ಟ್ರಕ್ ಹಾಗೂ ಬಸ್ ಎರಡು ಚಲಿಸುತ್ತಿದ್ದವು. ಈ ವೇಳೆ ಮಿನಿ ಟ್ರಕ್ ಅನ್ನು ಬಸ್ ಓವರ್ಟೇಕ್ ಮಾಡಲು ಹೋದಾಗ ಭಯಾನಕ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ 15 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ 16ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಟ ನಾಗಶೇಖರ್ ಕಾರ್ ಅಪಘಾತ; ಮರಕ್ಕೆ ಡಿಕ್ಕಿ ಹೊಡೆದು ಆ್ಯಕ್ಸಿಡೆಂಟ್; ಆಮೇಲೇನಾಯ್ತು?
ಮಿನಿ ಟ್ರಕ್‌ನಲ್ಲಿದ್ದವರು ಹದಿಮೂರನೇ ಔತಣ ಕೂಟ ಮುಗಿಸಿ ಖಂಡೌಲಿ ಬಳಿಯ ಸೇವಾಲ ಎನ್ನುವ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಬಸ್ನಲ್ಲಿದ್ದವರು ಹತ್ರಾಸ್‌ನಿಂದ ಆಗ್ರಾಕ್ಕೆ ತೆರಳುತ್ತಿದ್ದರು. ಈ ವೇಳೆ ಹೆದ್ದಾರಿ 93ರಲ್ಲಿ ಇರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಪ್ರಾಣ ಹಾನಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಜೂನಿಯರ್ NTR ಸಹೋದರ.. ಬಾಲಯ್ಯನ ಫ್ಯಾನ್ಸ್ ಫುಲ್ ಖುಷ್!
ಈ ಅಪಘಾತ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು ಎಕ್ಸ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು ಕೇಳಿ ಅತ್ಯಂತ ದುಃಖಕರವಾಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ