ರಸ್ತೆಯಲ್ಲಿ ಹೋಗುವಾಗ ಮರಕ್ಕೆ ಡಿಕ್ಕಿಯಾಗಿರುವ ಕಾರು
ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಪರಿಶೀಲನೆ, ಕಾರು ವಶಕ್ಕೆ
ಈ ಡೈರೆಕ್ಟರ್ ನಿರ್ದೇಶನ ಮಾಡಿದ ಸಿನಿಮಾಗಳು ಯಾವ್ಯಾವು?
ಬೆಂಗಳೂರು: ಸ್ಯಾಂಡಲ್ವುಡ್ ನಟ ಕಮ್ ಡೈರೆಕ್ಟರ್ ನಾಗಶೇಖರ್ ಅವರ ಕಾರು ಮರಕ್ಕೆ ಡಿಕ್ಕಿಯಾಗಿದ್ದು ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಈ ಘಟನೆಯು ಸಿಲಿಕಾನ್ ಸಿಟಿಯ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ನಡೆದಿದೆ.
ಇದನ್ನೂ ಓದಿ: ಮಕ್ಕಳಿಗೆ ಐಸ್ ಕ್ರೀಂ ಕೊಡಿಸುವ ಮುನ್ನ ಹುಷಾರ್.. ಪೋಷಕರು ಓದಲೇಬೇಕಾದ ಸ್ಟೋರಿ
ನಿರ್ದೇಶಕ ನಾಗಶೇಖರ್ ಅವರು ಬೆಂಜ್ ಕಾರಿನಲ್ಲಿ ಹೋಗುವಾಗ ಮರಕ್ಕೆ ರಭಸವಾಗಿ ಡಿಕ್ಕಿಯಾಗಿದೆ. ಇದರ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಜ್ಞಾನ ಭಾರತಿ ಕ್ಯಾಂಪಸ್ ಪೊಲೀಸರು ಭೇಟಿ ನೀಡಿದ್ದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಲಾರಿಗೆ ಡಿಕ್ಕಿ ಆಗುವುದನ್ನ ತಪ್ಪಿಸಲು ಹೋಗಿ ಬೈಕ್ ಆಕ್ಸಿಡೆಂಟ್.. ಇಬ್ಬರು ಯುವಕರು ಸಾವು
ಸದ್ಯ ನಾಗಶೇಖರ್ ಅವರು ಹಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಇದರ ಜೊತೆ ಡೈರೆಕ್ಟರ್ ಆಗಿಯು ಕೆಲಸ ಮಾಡಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ-2 ಶೂಟಿಂಗ್ ಮುಗಿಸಿದ್ದಾರೆ. ಕೆಲಸ ನಿಮಿತ್ತ ಹೋಗುವಾಗ ಈ ಅಪಘಾತ ಸಂಭವಿಸಿದೆ. ಅಂದಹಾಗೆ ನಾಗಶೇಖರ್ ಅವರು ಮಾಸ್ತಿಗುಡಿ, ಸಂಜು ವೆಡ್ಸ್ ಗೀತಾ, ಅಮರ್, ಮೈನಾ, ಶ್ರೀಕೃಷ್ಣ ಎಟ್ ಜೀಮೇಲ್ ಡಾಟ್ ಕಾಮ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ