newsfirstkannada.com

ವರುಣನ ರುದ್ರನರ್ತನ.. ಧಾರಾಕಾರ ಮಳೆಗೆ ಜನಜೀವನ ತತ್ತರ; ಸಿಡಿಲು ಬಡಿದು 15 ಮಂದಿ ದಾರುಣ ಸಾವು

Share :

Published July 11, 2024 at 6:27pm

Update July 11, 2024 at 6:28pm

    ಕಳೆದ 2 ದಿನದಿಂದ ಧಾರಾಕಾರ ಮಳೆ ಜೊತೆಗೆ ಗುಡುಗು, ಸಿಡಿಲು

    ಸಿಡಿಲಿನ ಆಘಾತಕ್ಕೆ ಮಕ್ಕಳು, ಮಹಿಳೆಯರು, ಯುವಕರು ಬಲಿ

    ಮೂರು ಜಿಲ್ಲೆಯಲ್ಲಿ ಡೆಡ್ಲಿ ಸಿಡಿಲು ಬಡಿದು ಘೋರ ಅನಾಹುತ

ಉತ್ತರ ಭಾರತದ ಹಲವೆಡೆ ಗುಡುಗು, ಸಿಡಿಲಿನ ಜೊತೆಗೆ ವರುಣನ ಅಬ್ಬರ ಜೋರಾಗಿದೆ. ಉತ್ತರ ಪ್ರದೇಶದಲ್ಲಿ ಕಳೆದ 2 ದಿನದಿಂದ ಧಾರಾಕಾರ ಮಳೆಯಾಗುತ್ತಿದೆ. ಜೋರು ಮಳೆಯಿಂದಾಗಿ ಸುಲ್ತಾನಪುರ, ಅಮೇಥಿ ಮತ್ತು ಚಂದೌಲಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸಿಡಿಲಿನ ಆರ್ಭಟಕ್ಕೆ 15 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯೊಂದರಲ್ಲೇ ಸಿಡಿಲು ಬಡಿದು 6 ಮಂದಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಮೃತರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಮೃತರಲ್ಲಿ ಮಕ್ಕಳು, ಯುವಕರು ಸೇರಿದ್ದಾರೆ ಎನ್ನಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ ನೆರವೇರಿಸಲು ನೆರವಾಗಿದ್ದಾರೆ.

ಇದನ್ನೂ ಓದಿ: ರೀಲ್ಸ್ ಹುಚ್ಚರೇ ಹುಷಾರ್.. ನಾನು ನಂದಿನಿ ಖ್ಯಾತಿಯ ವಿಕಾಸ್‌ಗೆ ಸಂಕಷ್ಟ! ಅಸಲಿಗೆ ಆಗಿದ್ದೇನು? 

ಸುಲ್ತಾನಪುರ ಪಕ್ಕದ ಅಮೇಥಿ ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 2 ಮಹಿಳೆಯರು, ಓರ್ವ ಯುವಕ ಎಂದು ಗುರುತಿಸಲಾಗಿದೆ. ಪೊಲೀಸರು ಮೃತರ ಸಂಬಂಧಿಕರಿಂದ ಮಾಹಿತಿ ಕಲೆ ಹಾಕಿದ್ದಾರೆ. ಅಧಿಕಾರಿಗಳು ಮೃತರ ಸಂಬಂಧಿಕರಿಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.

ಉತ್ತರಪ್ರದೇಶದ ಚಂದೌಲಿ ಜಿಲ್ಲೆಯಲ್ಲೂ ಸಿಡಿಲು ಸಾವಿನ ಮಳೆ ಸುರಿಸಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ 6 ಮಂದಿ ಸಾವ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾಡಳಿತ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದೆ.

ಇದನ್ನೂ ಓದಿ: ನೀನು ಕರಿಯ, ಕಪ್ಪು ಎಂದು ರೇಗಿಸುತ್ತಿದ್ದ ಹೆಂಡತಿ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಗಂಡ; ಆಮೇಲೇನಾಯ್ತು ಗೊತ್ತಾ? 

ಧಾರಾಕಾರ ಮಳೆಯ ಜೊತೆಗೆ ಡೆಡ್ಲಿ ಸಿಡಿಲು ಬಡಿದು ಈ ಘೋರ ಅನಾಹುತ ಸಂಭವಿಸಿದೆ. ಪ್ರಮುಖವಾಗಿ ಉತ್ತರಪ್ರದೇಶದ ಮೂರು ಜಿಲ್ಲೆಯಲ್ಲಿ ಈ ನೈಸರ್ಗಿಕ ವಿಕೋಪ ಬಹಳಷ್ಟು ಹಾನಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣನ ರುದ್ರನರ್ತನ.. ಧಾರಾಕಾರ ಮಳೆಗೆ ಜನಜೀವನ ತತ್ತರ; ಸಿಡಿಲು ಬಡಿದು 15 ಮಂದಿ ದಾರುಣ ಸಾವು

https://newsfirstlive.com/wp-content/uploads/2024/07/Heavy-Rain-Lightning-Strikes.jpg

Load More