/newsfirstlive-kannada/media/post_attachments/wp-content/uploads/2024/06/Vijayapura-1-1.jpg)
- 16ರ ಅಪ್ರಾಪ್ತನ ಜೊತೆಗೆ ಓಡಿ ಹೋದ ಆಂಟಿ
- 4 ವರ್ಷದ ಮಗುವಿನ ಜೊತೆಗೆ ಕಾಲ್ಕಿತ್ತ ವಿವಾಹಿತ ಮಹಿಳೆ
- ಇವರಿಬ್ಬರ ನಡುವೆ ಲವ್ ಆಗಿದ್ದು ಎಲ್ಲಿ ಗೊತ್ತಾ? ಈ ಸ್ಟೋರಿ ಓದಿ
ವಿಜಯಪುರ: 16 ವರ್ಷದ ಪೋರನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್ ಆದ ಅಚ್ಚರಿಯ ಘಟನೆಯೊಂದು ಮುನ್ನೆಲೆಗೆ ಬಂದಿದೆ. ವಿಜಯಪುರ ಜಿಲ್ಲೆಯ ಪಟ್ಟಣವೊಂದರಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಂಟಿಗೆ 16ರ ಅಪ್ರಾಪ್ತ ಬಾಲಕನ ಜೊತೆಗೆ ಪ್ರೇಮಾಂಕುರವಾಗಿದ್ದು, ಸದ್ಯ ಇಬ್ಬರು ಕಾಲ್ಕಿತ್ತಿದ್ದಾರೆ. ಇದರಿಂದ ಅಪ್ರಾಪ್ತ ಬಾಲಕನ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ.
ಅಚ್ಚರಿ ಸಂಗತಿ ಎಂದರೆ ವಿವಾಹಿತ ಮಹಿಳೆಗೆ 4 ವರ್ಷದ ಮಗುವಿದ್ದು, ಅಪ್ರಾಪ್ತ ಬಾಲಕನೊಂದಿಗೆ ಓಡಿ ಹೋಗಿದ್ದಾಳೆ. ಈ ಘಟನೆ ಬೆಳಕಿಗೆ ಬಂದಂತೆ ಬಾಲಕನ ತಾಯಿ ವಿವಾಹಿತ ಮಹಿಳೆ ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ: ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?
ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಇಬ್ಬರ ಮಧ್ಯೆ ಲವ್ ಆಗಿದೆ. ಮಗನನ್ನು ಪುಸಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾಳೆ ಅಂತ ಬಾಲಕನ ತಾಯಿ ಆರೋಪಿಸಿದ್ದಾರೆ. ಈ ಹಿಂದೆ ಕೂಡ ಮಹಿಳೆಗಾಗಿ ಬಾಲಕ ವಿಷ ಸೇವಿಸಿದ್ದನು.
ಇದನ್ನೂ ಓದಿ: ತಾಯಿಯಿಂದಲೇ ಮಗುವಿಗೆ ಸಿಗರೇಟ್​​ ಸೇದಿಸುವ ಪ್ರಯತ್ನ.. ಪೊಲೀಸ್ರ ಕೈಲಿ ಲಾಕ್
ಮೇ 13ರಂದು ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿದೆ. ಈವರೆಗೂ ಪೊಲೀಸರು ಬಾಲಕನನ್ನು ಪತ್ತೆ ಮಾಡಿಲ್ಲ. ಪೊಲೀಸರ ನಡೆಗೆ ಬಾಲಕನ ತಾಯಿ ಅಸಮಾಧಾನ ಹೊರಹಾಕಿದ್ದು, ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ