newsfirstkannada.com

ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?

Share :

Published June 18, 2024 at 6:43am

  ರೇಣುಕಾಸ್ವಾಮಿ ಕೊಲೆ ಕೇಸ್​, ನಟ ಚಿಕ್ಕಣ್ಣ ವಿಚಾರಣೆ

  ವಕೀಲರ ಜೊತೆ ವಿಚಾರಣೆಗೆ ಹಾಜರಾಗಿದ್ದ ನಟ ಚಿಕ್ಕಣ್ಣ

  ಪಟ್ಟಣಗೆರೆ ಶೆಡ್ ಮಾಲೀಕ ಜಯಣ್ಣಗೂ ಡ್ರಿಲ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣಗೂ ವಿಚಾರಣೆ ಎದುರಿಸುವಂತಾಗಿದೆ. ಪೊಲೀಸರು ಚಿಕ್ಕಣ್ಣ ವಿಚಾರಣೆ ನಡೆಸಿದ್ದಾರೆ. ವಕೀಲರ ಜೊತೆ ವಿಚಾರಣೆಗೆ ಹಾಜರಾಗಿದ್ದ ಚಿಕ್ಕಣ್ಣ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಪಟ್ಟಣಗೆರೆ ಶೆಡ್ ಮಾಲೀಕ ಜಯಣ್ಣ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ನಡೆದಿದ್ದ ಜೂನ್ 8ರಂದೇ ಆರ್‌.ಆರ್‌ ನಗರದ ಸ್ಟೋನಿ ಬ್ರೂಕ್ ಪಬ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದ್ದ ಪಾರ್ಟಿ ಬಗ್ಗೆ ಚರ್ಚೆ ಆಗುತ್ತಿದೆ. ಆವತ್ತು ಪಾರ್ಟಿಯಲ್ಲಿ ಸೇರಿದ್ದ ನಟ ಚಿಕ್ಕಣ್ಣ ಕೂಡಾ ವಿಚಾರಣೆ ಎದುರಿಸಿದ್ದಾರೆ.

ಇದನ್ನೂ ಓದಿ:‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!

ರೇಣುಕಾಸ್ವಾಮಿ ಕೊಲೆ ಕೇಸ್‌ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ 120ಬಿ ಸೆಕ್ಷನ್​​​ ಹಾಕಲಾಗಿದ್ದು ಕೃತ್ಯ ನಡೆಸಲು ಮೊದಲೇ ಸ್ಕೆಚ್​​​ ಹಾಕಿದ್ದ ಸಾಕ್ಷ್ಯಗಳಿಗಾಗಿ ಶೋಧ ನಡೆಸಲಾಗ್ತಿದೆ. ಹೀಗಾಗಿ ಹತ್ಯೆಗೂ ಮುನ್ನ ಪಾರ್ಟಿಯಲ್ಲಿದ್ದ ನಟ ಚಿಕ್ಕಣ್ಣಗೆ ನೋಟಿಸ್​ ಕೊಟ್ಟು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿಕ್ಕಣ್ಣಗೆ ತನಿಖಾಧಿಕಾರಿ ಚಂದನ್​ ಕುಮಾರ್ 3 ಗಂಟೆ 15 ನಿಮಿಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದು ಅಂದು ರೆಸ್ಟೋಬಾರ್​ನಲ್ಲಿದ್ದ ಬಗ್ಗೆ ಇಂಚಿಂಚೂ ಮಾಹಿತಿ ಹಂಚಿಕೊಂಡಿದ್ದಾರೆ.

ಚಿಕ್ಕಣ್ಣಗೆ ಪೊಲೀಸರ ಪ್ರಶ್ನೆ!

 • ಅಂದು ಪಾರ್ಟಿಗೆ ಎಷ್ಟೊತ್ತಿಗೆ ಹೋಗಿದ್ರಿ?
 • ಯಾರು ನಿಮನ್ನು ಪಾರ್ಟಿಗೆ ಕರೆದಿದ್ದರು?
 • ಪಾರ್ಟಿಗೆ ದರ್ಶನ್ ಎಷ್ಟೊತ್ತಿಗೆ ಬಂದಿದ್ದರು?
 • ಅಂದು ಪಾರ್ಟಿಯಲ್ಲಿ ಯಾಱರು ಇದ್ದರು?
 • ಪಾರ್ಟಿ ವೇಳೆ ದರ್ಶನ್​​ಗೆ ಕಾಲ್ ಬಂದಿತ್ತಾ?
 • ದರ್ಶನ್ ಬಳಿ ಯಾಱರು ಮಾತಾಡಿದ್ದರು?
 • ಮೆಸೇಜ್ ವಿಚಾರದ ಮಾತುಕತೆ ನಡೆದಿತ್ತಾ?
 • ಆಗ ರೇಣುಕಾಸ್ವಾಮಿ ಬಗ್ಗೆ ಮಾತಾಡಿದ್ರಾ?

ವಿಚಾರಣೆ ಬಳಿಕ ಮಾತ್ನಾಡಿರೋ ನಟ ಚಿಕ್ಕಣ್ಣ ಅವತ್ತು ದರ್ಶನ್ ಊಟಕ್ಕೆ ಕರೆದಿದ್ರು ಅಂತ ಹೋಗಿದ್ದೆ ಅಷ್ಟೇ, ತನಿಖೆ ನಡೀತಿದೆ, ವಿಚಾರಣೆಗೆ ಸಹಕರಿಸ್ತೀನಿ ಎಂದಿದ್ದಾರೆ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ಪಟ್ಟಣಗೆರೆ ಶೆಡ್ ಮಾಲೀಕ ಜಯಣ್ಣಗೂ ಡ್ರಿಲ್
ಮತ್ತೊಂದೆಡೆ ಆರ್.ಆರ್.ನಗರದ ಪಟ್ಟಣಗೆರೆಯ ಜಯಣ್ಣ ಒಡೆತನದ ಶೆಡ್​​​ನಲ್ಲೇ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಹತ್ಯೆ ನಡೆಸಿದ್ದಾರೆ. ದರ್ಶನ್ ಆಪ್ತ ವಿನಯ್ ಪಟ್ಟಣಗೆರೆ ಜಯಣ್ಣ ಸೋದರಳಿಯನಾಗಿದ್ದು ಸ್ಟೋನಿ ಬ್ರೂಕ್​​ ಪಬ್​​ನ ಮಾಲೀಕನಾಗಿದ್ದಾನೆ. ಹೀಗಾಗಿ ಕೇಸ್ ಸಂಬಂಧ ಪಟ್ಟಣಗೆರೆ ಜಯಣ್ಣ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶೆಡ್​ ಮಾಲೀಕನಾಗಿರುವ ಕಾರಣ ನನ್ನನ್ನು ವಿಚಾರಣೆಗೆ ಕರೆದಿದ್ರು ಅಂತ ಜಯಣ್ಣ ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ, ಸೆಕ್ಷನ್ 120ಬಿ ಹಾಕಿರೋದ್ರಿಂದ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನೂ ಕರೆದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಪಬ್​​ನಲ್ಲಿ ಮತ್ತೋರ್ವ ನಟ ಯಶಸ್ ಸೂರ್ಯ ಕೂಡ ಇದ್ದರು ಎನ್ನಲಾಗಿದ್ದು ಅವರನ್ನೂ ವಿಚಾರಣೆ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?

https://newsfirstlive.com/wp-content/uploads/2024/06/DARSHAN-CHIKKANNA.jpg

Load More