newsfirstkannada.com

‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!

Share :

Published June 16, 2024 at 11:08am

Update June 16, 2024 at 11:11am

  ಕಾರ್ಪೋರೇಟರ್ ಆಗಬೇಕೆಂದಿದ್ದ ನಾಗನ ಕನಸಿಗೆ ಕೊಳ್ಳಿ!

  ಬಾಡಿಗೆ ಗಾಡಿ ಓಡಿಸ್ತಿದ್ದವ ಈಗ ಕೊಲೆ ಕೇಸ್ ಆರೋಪಿ!

  ಮಗನದ್ದೇನು ತಪ್ಪಿಲ್ಲ ಬಿಟ್ಟುಬಿಡಿ ಅಂತ ತಾಯಿಯ ಕಣ್ಣೀರು!

ಪವಿತ್ರಾ ಗೌಡ ಒಬ್ಬಾಕೆಯಿಂದ ಹಲವರ ಕನಸು, ಆಸೆಗಳು ಸರ್ವನಾಶವಾಗಿವೆ ಎಂಬ ಮಾತುಗಳು ಕೇಳಿಬಂದಿವೆ. ಆಟೋ ಡ್ರೈವರ್.. ಬಾಡಿಗೆ ಚಾಲಕ.. ಹುಚ್ಚು ಅಭಿಮಾನಿ.. ನಟನ ಪತ್ನಿ.. ನಟನ ಕುಟುಂಬ.. ನಟನ ಆಪ್ತರು.. ಅಷ್ಟೇ ಯಾಕೆ ಖುದ್ದು ದರ್ಶನ್.. ಹೀಗೆ ಪವಿತ್ರಾ ಗೌಡರಿಂದಾಗಿ ಪರೋಕ್ಷವಾಗಿ ಹತ್ತಾರು ಮಂದಿಯ ಭವಿಷ್ಯಕ್ಕೆ ಕೊಳ್ಳಿ ಬೀಳುವ ಸಾಧ್ಯತೆಗಳಿವೆ. ಆ ಆರೋಪಿಗಳ ಕುಟುಂಬಗಳು ದಿಕ್ಕೆಟ್ಟು ಕೂರುವಂತಾಗಿದೆ.

ಪವಿತ್ರಾ ಪಂಚ್ 1:
ನಾಗರಾಜ್ ಅಲಿಯಾಸ್​​ ನಾಗ.. ಈತ ದರ್ಶನ್‌ ಅಂಡ್‌ ಗ್ಯಾಂಗ್‌ ಮರ್ಡರ್ ಕೇಸ್‌ನ 11 ನೇ ಆರೋಪಿ.. ಎಲ್ಲರಂತೆಯೇ ದರ್ಶನ್​​ನ ಬಾಸ್​ ಬಾಸ್​ ಅಂತಾ ಕರ್ಕೊಂಡು ಓಡಾಡ್ತಿದ್ದವನು.. ಭರ್ತಿ 15 ವರ್ಷದಿಂದ ದರ್ಶನ್ ಜೊತೆಯಲ್ಲೇ ಇದ್ದ ನಾಗ ಈಗ ಅಕ್ಷರಶಃ ಕಂಬಿ ಹಿಂದೆ ಕಣ್ಣೀರಾಕುವಂತಾಗಿದೆ. ಎಂಥ ತಪ್ಪು ಮಾಡಿಬಿಟ್ಟೆ ಅಂತ ಗೋಳಾಡ್ತಿದ್ದಾನಂತೆ. ಮೈಸೂರು ಮೂಲದ ನಾಗರಾಜ್​ ದರ್ಶನ್‌ಗೆ ಮ್ಯಾನೇಜರ್‌ನಂತೆ ಇದ್ನಂತೆ. ಮೈಸೂರು ಪಾಲಿಕೆಯ 21 ನೇ ವಾರ್ಡ್‌ನಲ್ಲಿ ಕಾರ್ಪೋರೇಟರ್ ಆಗೋ ಕನಸು ಕಂಡಿದ್ದ ನಾಗನ ಭವಿಷ್ಯ ನುಚ್ಚುನೂರಾಗಿದೆ.

ಇದನ್ನೂ ಓದಿ:ಅಪ್ಪನ ಜೀವ ತೆಗೆದ ದರ್ಶನ್ ಮೇಲಿನ ಅಭಿಮಾನ.. ಪ್ರಕರಣದಲ್ಲಿ ಅನು ಪಾತ್ರ ಏನು..?

ದರ್ಶನ್ ಜೊತೆ ನಾಗರಾಜ್
ದರ್ಶನ್ ಜೊತೆ ನಾಗರಾಜ್

ದರ್ಶನ್​ನ ಅಪ್ಪಟ ಅಭಿಮಾನಿಯೂ ಆಗಿದ್ದ ನಾಗರಾಜ್ ಮೂಲತಃ ಮೈಸೂರು ನಗರದ ಟಿ.ಕೆ.ಲೇಔಟ್​ನ ನಿವಾಸಿ. ಹಿಂದೆ ಪೆಟ್ರೋಲ್​ ಬಂಕ್​ನಲ್ಲಿ ಕೆಲ್ಸ ಮಾಡ್ತಿದ್ದ ಈತ, ಬಳಿಕ ಸ್ನೇಹಿತರ ಮೂಲಕ ನಟ ದರ್ಶನ್ ಆಪ್ತವಲಯಕ್ಕೆ ಎಂಟ್ರಿಕೊಟ್ಟಿದ್ದ. ಕಳೆದ 15 ವರ್ಷದಿಂದ ದರ್ಶನ್ ಜೊತೆಯಲ್ಲೇ ಇದ್ದ. ಮೈಸೂರು ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ತೋಟದ ಮನೆ ನಿರ್ವಹಣೆಯ ಹೊಣೆ ಹೊತ್ತಿದ್ದ. ಅಷ್ಟೇ ಅಲ್ಲ ದರ್ಶನ್ ಅಭಿಮಾನಿ ಸಂಘಗಳಿಗೆ ಸಂಪರ್ಕ ಸೇತುವೆಯಾಗಿದ್ನಂತೆ.. ದರ್ಶನ್​ ನಂಬಿಕೆ ಗಳಿಸಿದ್ದ ಕಾರಣ ನಾಗರಾಜ್‌ಗಾಗಿ ಮೈಸೂರಿನಲ್ಲಿ ಬಾರ್ ಇಟ್ಟುಕೊಟ್ಟಿದ್ರಂತೆ ನಟ ದರ್ಶನ್.. ಆದ್ರೆ ವ್ಯವಹಾರ ಕೈ ಹಿಡಿಯದ ಹಿನ್ನೆಲೆ ಮತ್ತೆ ದರ್ಶನ್ ಜೊತೆಯಲ್ಲೇ ನಾಗರಾಜ್​ ಸುತ್ತಾಡಿಕೊಂಡಿದ್ದನಂತೆ. ಈಗ ಈ ನಾಗ ಅಲಿಯಾಸ್ ನಾಗರಾಜ. ತನ್ನ ಬಾಸ್​ನ ಮತ್ತಷ್ಟು ಮೆಚ್ಚಿಸಲು ಹೋಗಿ ಕಂಬಿ ಹಿಂದೆ ಸೇರಿದ್ದಾನೆ.

ಇದನ್ನೂ ಓದಿ:ಪೊಲೀಸ್ ಠಾಣೆ ಎದುರೇ ನಡೀತು ಬರ್ಬರ ಕೊಲೆ.. ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ

ಈ ಹಿಂದೆ ದರ್ಶನ್ ವಿರುದ್ಧ ತೋಟದ ಮನೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಾಗಿತ್ತು. ಸಂರಕ್ಷಿತ ಸಾಲಿನಲ್ಲಿ ಸೇರಿಸಲಾಗಿರೋ ಪಟ್ಟೆತಲೆ ಹೆಬ್ಬಾತುಗಳನ್ನು ಕೂಡಿ ಹಾಕಿ ಸಾಕಿದ್ದ ಕಾರಣಕ್ಕೆ ದರ್ಶನ್ ವಿರುದ್ಧ ಕೇಸ್ ಹಾಕಲಾಗಿತ್ತು. ಆ ಕೇಸ್‌ನಲ್ಲಿ ಈ ನಾಗರಾಜ್ ಕೂಡ ಆರೋಪಿಯಾಗಿದ್ದ. ಆ ಕೇಸ್‌ನ ಎಫ್ಐಆರ್‌ನಲ್ಲಿ ನಾಗರಾಜ್‌ನನ್ನು ದರ್ಶನ್‌ರ ವ್ಯವಸ್ಥಾಪಕ ಅಂತಾ ಉಲ್ಲೇಖಿಸಲಾಗಿತ್ತು.

ರೇಣುಕಾಸ್ವಾಮಿ ಮೇಲೆ ದರ್ಶನ್ ಕ್ರೌರ್ಯದ ಕೆಂಗಣ್ಣು ಬಿದ್ದಿದ್ದೇ ಪವಿತ್ರಾಗೌಡಳಿಂದ ಅನ್ನೋದು ರಹಸ್ಯವೇನಲ್ಲ. ಪವಿತ್ರಾ ಗೌಡಗೆ ಅಶ್ಲೀಲ ಮೆಸೆೇಜ್, ಕಾಮೆಂಟ್ ಮಾಡ್ತಿದ್ದ ಎಂಬ ಕಾರಣಕ್ಕೆ ದರ್ಶನ್ ಕುಪಿತಗೊಂಡು ರೇಣುಕಾಸ್ವಾಮಿಯನ್ನು ಕರೆತರೋಕೆ ಹೇಳಿದ್ದನೆಂಬ ಆರೋಪವಿದೆ. ದರ್ಶನ್ ಸೂಚನೆ ಮೇರೆಗೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕರೆತರೋ ಜವಾಬ್ದಾರಿ ಹೊತ್ತಿದ್ದೇ ಈ ನಾಗನಂತೆ.

ಪವಿತ್ರಾ ಪಂಚ್ ನಂ 2:
ನಸೀಬು ಕೆಟ್ರೆ ಕೇಡುಕಾಲ ಅಟ್ಟಾಡಿಸ್ಕೊಂಡು ಬರುತ್ತೆ ಅನ್ನೋದು ಈ ಚಾಲಕ ರವಿಗೆ ಪಕ್ಕಾ ಸೂಟ್ ಆಗುತ್ತೆ. ದರ್ಶನ್ ಗ್ಯಾಂಗ್ ವಿರುದ್ಧದ ಮರ್ಡರ್ ಕೇಸ್‌ನಲ್ಲಿ 8ನೇ ಆರೋಪಿಯಾಗಿರೋ ಚಾಲಕ ರವಿ ಇಂದು ಮಾಡದ ತಪ್ಪಿಗೆ ಲಾಕ್ ಆಗಿಬಿಟ್ನಾ ಎಂಬ ಪ್ರಶ್ನೆ ಹುಟ್ಟಿದೆ. ಯಾಕಂದ್ರೆ, ಚಿತ್ರದುರ್ಗದಲ್ಲಿ ಬಾಡಿಗೆ ಗಾಡಿ ಓಡಿಸುತ್ತಾ ಕುಟುಂಬ ಸಾಕುತ್ತಾ ಮಿಡಲ್ ಕ್ಲಾಸ್ ಜೀವನ ಸಾಗಿಸ್ತಿದ್ದ ರವಿಗೆ ಪವಿತ್ರಾ ಗೌಡ ಅಕ್ಷರಶಃ ಕಿಲ್ಲೇಡಿ ತರ ಕಾಣಿಸ್ತಿದ್ರೂ ಅಚ್ಚರಿಯಿಲ್ಲ. ಪವಿತ್ರಾ ಗೌಡಳಿಗೆ ರೇಣುಕಾಸ್ವಾಮಿ ಮೇಸೇಜ್ ಕಹಾನಿಯಿಂದ ಶುರುವಾದ ಕಿಲ್ಲಿಂಗ್ ಜರ್ನಿ ಈತನಿಗೆ ಅರಿವಿಲ್ಲದೆ ಇವನನ್ನು ಕೇಸ್‌ನಲ್ಲಿ ತಗ್ಲಾಕಿಸಿದೆ ಎನ್ನಲಾಗ್ತಿದೆ.

ಇದನ್ನೂ ಓದಿ:ಅಪ್ಪನ ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅನು.. ಕಣ್ಣೀರಾಗಿ ಹರಿಯಿತು ಪಶ್ಚಾತಾಪ..!

ರೇಣುಕಾಸ್ವಾಮಿ ಕೊಲೆ ಕೇಸ್‌ನ 8ನೇ ಆರೋಪಿಯಾಗಿರೋ ರವಿ ರೇಣುಕಾಸ್ವಾಮಿಯನ್ನು ಕರೆತಂದು ಬಿಟ್ಟ ಬಳಿಕ ಎಸ್ಕೇಪ್ ಆಗಿದ್ದ. ಬಳಿಕ ಚಿತ್ರದುರ್ಗದಲ್ಲಿ ಡಿವೈಎಸ್‌ಪಿ ಕಚೇರಿಗೆ ಬಂದು ಶರಣಾಗಿದ್ದ. ಕೊಲೆ ಕೇಸ್‌ನ 8ನೇ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಆದ್ರೀಗ ಸರೆಂಡರ್ ಆಗಿರೋ ರವಿ ಹತ್ಯೆಯಲ್ಲಿ ಶಾಮೀಲಾಗಿಲ್ಲ ಎಂಬ ಮಾತು ಕೇಳಿಬರ್ತಿದೆ. ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಕರೆತಂದಿದ್ದಾರೆ. ಅದೊಂದು ಕಿಡ್ನಾಪ್ ಅನ್ನೋ ಸಣ್ಣ ಮಾಹಿತಿಯೂ ಇರಲಿಲ್ವಂತೆ.

ಪವಿತ್ರಾ ಪಂಚ್ ನಂ 03:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತರಾಗಿರೋ ದರ್ಶನ್ ಅಂಡ್ ಗ್ಯಾಗ್‌ನಲ್ಲಿ ಈ ಪ್ರದೋಶ್ ಕೂಡ ಒಬ್ಬ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರೋ ಪ್ರದೋಶ್ ದರ್ಶನ್‌ಗೆ ಆಪ್ತನಂತೆ. ಕೆಲವೊಂದು ಸಿನಿಮಾಗಳಲ್ಲೂ ಸಹಕಲಾವಿದನಾಗಿ ಬಣ್ಣ ಹಚ್ಚಿರೋ ಪ್ರದೋಶ್ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದಾ ಬಿಂದಾಸ್ ಲೈಫ್ ಸಾಗಿಸ್ತಿದ್ದನಂತೆ. ಕೊಲೆ ಆರೋಪದಲ್ಲಿ ದರ್ಶನ್ ಗ್ಯಾಂಗ್ ಜೊತೆ ಲಾಕ್ ಆಗಿದ್ದಾನೆ.

ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

ಮನಸ್ಸು ಮಾಡಿದ್ದರೆ ವೃತ್ತಿಯಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಬಹುದಿತ್ತು.. A14 ಆರೋಪಿಯಾಗಿರೋ ಪ್ರದೋಶ್ ಕೂಡ ಕಾರ್ಪೋರೇಟರ್ ಕನಸು ಕಟ್ಟಿಕೊಂಡಿದ್ನಂತೆ. ಸಹವಾಸದಿಂದ ಕೆಟ್ಟು ಜೈಲು ಸೇರಿದ್ದಾನೆ. ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ ದರ್ಶನ್ ಗ್ಯಾಂಗ್‌ನಲ್ಲಿ ಈತನೂ ಇದ್ದನೆಂಬ ಆರೋಪವಿದೆ. ಅಲ್ಲದೆ, ಡೆಡ್‌ಬಾಡಿ ಎಸೆಯೋದ್ರಿಂದ ಹಿಡಿದು. ದರ್ಶನ್ ಅಣತಿಯಂತೆ ಸರಂಡರ್ ಆಗೋರಿಗೆ 30 ಲಕ್ಷ ಆಮೀಷವೊಡ್ಡಿದ್ದರಲ್ಲಿ ಈತನೇ ಪ್ರಮುಖ ಪಾತ್ರಧಾರಿ ಎನ್ನಲಾಗಿದೆ.

ಪವಿತ್ರಾ ಪಂಚ್ ನಂ 4
ದರ್ಶನ್ ಗ್ಯಾಂಗ್ ವಿರುದ್ಧದ ಮರ್ಡರ್‌ ಕೇಸ್‌ನಲ್ಲಿ ತಮಗೆ ಅರಿವಿಲ್ಲದೆ ಪರೋಕ್ಷವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗ್ತಿರೋ ಈತನ ಹೆಸರು ಅನಿಲ್‌ ಕುಮಾರ್ ಅಲಿಯಾಕ್ ಅನು ಅಂತ. ಕೇಸ್‌ನಲ್ಲಿ ಏಳನೇ ಆರೋಪಿಯಾಗಿರೋ ಅನು ಚಿತ್ರದುರ್ಗದಲ್ಲಿ ಆಟೋ ಓಡಿಸಿಕೊಂಡು ಕಷ್ಟದಲ್ಲಿ ಬದುಕು ಸಾಗಿಸ್ತಿದ್ದ. ಗ್ರಹಚಾರ ಬೆನ್ನೇರಿ ಈತ ಕೂಡ ಕೇಸ್‌ನಲ್ಲಿ ಲಾಕ್ ಆಗಿದ್ದಾನೆ. ಕೊಲೆ ಕೇಸ್‌ನ 4ನೇ ಆರೋಪಿಯಾಗಿರೋ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ರಘು ಈ ಅನು ಎಂಬಾತನನ್ನು ಕರೆದುಕೊಂಡು ಬಂದು ರೇಣುಕಾಸ್ವಾಮಿ ಕಿಡ್ನಾಪ್‌ನಲ್ಲಿ ಬಳಸಿಕೊಂಡಿದ್ದಾನಂತೆ. ನಟ ದರ್ಶನ್‌ರನ್ನು ಭೇಟಿ ಮಾಡಿಸೋದಾಗಿ ಅನಿಲ್ ಕುಮಾರ್ ಮತ್ತು ಜಗ್ಗ ಎಂಬಿಬ್ಬರಿಗೆ ಸುಳ್ಳು ಹೇಳಿದ್ದ ರಘು ಪರೋಕ್ಷವಾಗಿ ಕೊಲೆ ಕೇಸ್‌ನಲ್ಲಿ ಭಾಗಿಯಾಗುವಂತೆ ಮಾಡಿದ್ದಾನಂತೆ. ಮನೆಗೆ ಆಧಾರವಾಗಿದ್ದ ಮಗ ಬಂಧನವಾಗಿದ್ದು ತಾಯಿ ಸಮೇತ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ಆಪರೇಷನ್ ಡಿ..! ದರ್ಶನ್ ಬಂಧನ ನೀವು ಅಂದುಕೊಂಡಷ್ಟು ಸುಲಭ ಇರಲಿಲ್ಲ..!

ಪವಿತ್ರಾ ಪಂಚ್ ನಂ 5:
ಚಿತ್ರದುರ್ಗ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 5ನೇ ಆರೋಪಿಯಾಗಿರೋ ನಂದೀಶ್ ಮರ್ಯಾದೆಗೆ ಅಂಜಿ ಬದುಕುತ್ತಿದ್ದನಂತೆ. ಮಂಡ್ಯ ತಾಲೂಕಿನ ಚಾಮಲಾಪುರ ಗ್ರಾಮದ ನಿವಾಸಿಯಾಗಿರೋ ನಂದೀಶನ ಕುಟುಂಬಸ್ಥರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸರ್ಕಾರದಿಂದ ಮಂಜೂರಾಗಿದ್ದ ಸೈಟ್​ನಲ್ಲಿ ಈ ಕುಟುಂಬ ವಾಸವಾಗಿದೆ. ಹೊಟ್ಟೆ ಪಾಡಿಗಾಗಿ 8 ವರ್ಷಗಳ ಹಿಂದೆ ಸಿಲಿಕಾನ್​ ಸಿಟಿ ಬೆಂಗಳೂರಿಗೆ ಬಂದು ಕೇಬಲ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಂದೀಶ ಈಗ ಕೊಲೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್‌ ಜೊತೆ ಬಂಧನವಾಗಿದ್ದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಆರೋಪಿ ನಂದೀಶ್ ತಂದೆ ಟೀ ಅಂಗಡಿ, ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬೇರೆಯವರ ಜಮೀನಿನಲ್ಲಿ ಪೋಷಕರು ಗುತ್ತಿಗೆ ಆಧಾರದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರಂತೆ. ಮತ್ತೊಂದು ಕಡೆ ಕೌಟುಂಬಿಕ ಸಮಸ್ಯೆಯಿಂದಾಗಿ ನಂದೀಶ್ ಅಕ್ಕ ನಂದಿನಿ ತವರು ಸೇರಿದ್ದರಂತೆ. ಇದರಿಂದ ಅಕ್ಕ ಹಾಗೂ ಅಕ್ಕನ ಮಕ್ಕಳ ಜವಾಬ್ದಾರಿ ನಂದೀಶ್ ಹೆಗಲಿಗೆ ಇತ್ತು. ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಕಿಡ್ನಾಪ್ ಮತ್ತು ಹಲ್ಲೆ ನಡೆಸಿರೋ ಆರೋಪದಲ್ಲಿ ನಂದೀಶ್ 5ನೇ ಆರೋಪಿಯಾಗಿದ್ದಾನೆ. ಮಗನ ಬಂಧನದಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ನಂದೀಶನಿಗೆ ಮದುವೆ ಮಾಡೋಕೆ ಸಿದ್ಥತೆ ಮಾಡಲಾಗ್ತಿತ್ತಂತೆ. ನಂದೀಶನ ಬಂಧನದಿಂದ ಕುಟುಂಬಸ್ಥರು ಮಾತ್ರವಲ್ಲ ಗ್ರಾಮಸ್ಥರಿಗೂ ಶಾಕ್ ಆಗಿದೆ. ಗ್ರಾಮದಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ ನಂದೀಶ್ ದರ್ಶನ್ ಜೊತೆ ಸೇರಿ ಇಂತಹ ಕೃತ್ಯ ಎಸಗಿದ್ನಾ ಅಂತ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರಂತೆ. ನನ್ನ ಮಗನನ್ನು ಪ್ಲಾನ್ ಮಾಡಿ ಕೇಸ್​ನಲ್ಲಿ ತಗ್ಲಾಕಿಸಿದ್ದಾರೆಂದು ನಂದೀಶ್​ ಕುಟುಂಬಸ್ಥರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಅಲ್ಲದೆ.. ತನ್ನ ಮಗನ ಈ ಸ್ಥಿತಿಗೆ ಕಾರಣರಾದ ದರ್ಶನ್ ಮತ್ತು ಪವಿತ್ರಾ ಗೌಡ ವಿರುದ್ಧವೂ ಹಿಡಿ ಶಾಪ ಹಾಕ್ತಿದ್ದಾರೆ.

ಪವಿತ್ರಾ ಪಂಚ್ ನಂ 6
ಫಾರ್ಮಸಿಯಲ್ಲಿ ಕೆಲಸ ಮಾಡುತ್ತಾ ಇಡೀ ಕುಟುಂಬ ಸಾಕುತ್ತಿದ್ದ.. 5 ತಿಂಗಳ ಗರ್ಭಿಣಿ ಪತ್ನಿಯ ಆರೈಕೆ ಮಾಡುತ್ತಿದ್ದ.. ನೆಮ್ಮದಿ ಬದುಕು ಸಾಗಿಸೋ ಕನಸು ಹೊತ್ತಿದ್ದ ರೇಣುಕಾಸ್ವಾಮಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಅಶ್ಲೀಲ ಮೇಸೆಜ್ ಮಾಡಿದ ಎಂಬ ಒಂದೇ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್ ಆತನ ಪ್ರಾಣವನ್ನೇ ತೆಗೆದುಬಿಟ್ಟಿದೆ. ಕ್ರೂರವಾಗಿ ಥಳಿಸಿ ಕೊಂದುಹಾಕಿದೆ. ರೇಣುಕಾಸ್ವಾಮಿ ಬರುತ್ತಿದ್ದ 20 ಸಾವಿರ ಸಂಬಳದಲ್ಲಿ ಇಡೀ ಮನೆ ನೋಡಿಕೊಳ್ತಿದ್ನಂತೆ. ಹೆತ್ತವರು, ಗರ್ಭಿಣಿಯಾಗಿದ್ದ ಪತ್ನಿಗೆ ಶಕ್ತಿಯಾಗಿ ನಿಂತಿದ್ದನಂತೆ. ಆದ್ರೆ.. ರೇಣುಕಾಸ್ವಾಮಿ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾಗಿದ್ದು.. ಇಡೀ ಕುಟುಂಬ ಅಕ್ಷರಶಃ ದಿಕ್ಕೆಟ್ಟು ಕೂತಿದೆ. ಎಲ್ಲಕ್ಕೂ ಮಿಗಿಲಾಗಿ.. ಈ 5 ತಿಂಗಳ ಗರ್ಭಿಣಿಯ ನೋವನ್ನು ಕಲ್ಪಿಸಿಕೊಳ್ಳೋಕು ಸಾಧ್ಯವಿಲ್ಲದಂತಾಗಿದೆ.

ಪವಿತ್ರಾ ಪಂಚ್ ನಂ 07
ನಟ ದರ್ಶನ್‌ರ ಪತ್ನಿ ವಿಜಯಲಕ್ಷ್ಮಿ ಈಗ ಇದ್ದ ಒಂಚೂರು ನೆಮ್ಮದಿಯನ್ನೂ ಕಳೆದುಕೊಂಡು ಬದುಕುವಂತಾಗಿದೆ. ತನ್ನ ಸಂಸಾರದಲ್ಲಿ ಅಪ್ಪಳಿಸಿದ್ದ ಬಿರುಗಾಳಿಯಿಂದಲೇ ಮಾನಸಿಕವಾಗಿ ಜರ್ಜರಿತರಾಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಮತ್ತೊಂದು ಶಾಕ್‌ಗೆ ಒಳಗಾಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹೆಸರಿನ ಯುವಕನ ಬರ್ಬರ ಹತ್ಯೆ ಕೇಸ್‌ನಲ್ಲಿ ಗಂಡ ದರ್ಶನ್ ಬಂಧನವಾಗಿರೋದು, ಕೊಲೆಯ ಸುತ್ತ ಹತ್ತಾರು ಬೆಚ್ಚಿಬೀಳಿಸೋ ಸಂಗತಿಗಳು ಕಿವಿಗಿ ಬೀಳ್ತಿದ್ದಂತೆ ವಿಜಯಲಕ್ಷ್ಮಿಗೆ ಬಹುದೊಡ್ಡ ಆಘಾತವಾಗಿರೋದಂತೂ ಸತ್ಯ. ಆ ಆಘಾತದ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿ ತಮ್ಮ ನೋವು ಹೊರಗೆಡವಿದ್ದಾರೆ.

ಪವಿತ್ರಾ ಪಂಚ್ ನಂ 8
ದರ್ಶನ್ ವರ್ತನೆಗಳು, ಲೈಫ್‌ಸ್ಟೈಲ್‌ನಿಂದಾಗಿ ಖುದ್ದು ದರ್ಶನ್ ತಾಯಿಯೇ ಬೇಸತ್ತು ಹೋಗಿದ್ದರೆಂದ ಹೇಳಲಾಗುತ್ತೆ. ಹಾಗಾಗಿ, ಮಗನಿಂದ ದೂರವಾಗಿದ್ದ ತಾಯಿ ಮೀನಾ ಅವರು ಮೈಸೂರಿನಲ್ಲಿ ವಾಸ ಮಾಡುತ್ತಿದ್ದಾರೆ. ದರ್ಶನ್ ಜೊತೆಯಲ್ಲಿದ್ದ ತಾಯಿ ಮೀನಾಕ್ಷಿಯವರು ಕೆಲ ವರ್ಷಗಳಿಂದಲೂ ಮೈಸೂರಿನ ಮನೆಯಲ್ಲಿ ವಾಸವಿದ್ದಾರೆ. ಮತ್ತೊಂದು ಕಡೆ ಜೀವ ಜೀವ ಕೊಡುವಂತಿದ್ದ ಸಹೋದರ ದಿನಕರ್ ಕೂಡ ದರ್ಶನ್‌ರ ಸಹವಾಸ ಸಾಕು ಅಂತ ದೂರವಾಗಿದ್ದಾರಂತೆ. ಈಗ ದಿನಕರ್ ತಮ್ಮ ಪತ್ನಿ ಜೊತೆ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡ್ತಿದ್ದಾರಂತೆ.

ದರ್ಶನ್‌ ಎಂಬ ಹೆಸರಿನಿಂದಲೇ ದೂರವಿರಬೇಕು ಎಂದುಕೊಂಡು ಬೇರೆ ಬೇರೆಯಾಗಿ ಬದುಕುತ್ತಿದ್ದ ತಾಯಿ ಮತ್ತು ಸಹೋದರನಿಗೆ ದರ್ಶನ್‌ ಮತ್ತೊಮ್ಮೆ ನೋವು ನೀಡಿದ್ದಾರೆ ಅಂದ್ರೂ ತಪ್ಪಿಲ್ಲ. ಇದೀಗ.. ದರ್ಶನ್ ವಿಚಾರವಾಗಿ ತಾಯಿ ನೋವು, ಸಂಕಟ ಪಡೋ ಸ್ಥಿತಿ ಎದುರಾಗಿದ್ರೆ.. ಸಹೋದರನ ಮೇಲಿನ ಆರೋಪದಿಂದಾಗಿ ದಿನಕರ್ ತೂಗುದೀಪ್ ಕೂಡ ಮುಜುಗರ ಮತ್ತು ಮಾನಸಿಕ ಹಿಂಸೆ ಅನುಭವಿಸೋ ದುಸ್ಥಿತಿ ಬಂದಿದೆ. ಈ ಎಲ್ಲಕ್ಕೂ ಮೂಲ ಕಾರಣರಾಗಿರೋ ಪವಿತ್ರಾ ಗೌಡ ಮೇಲೆಯೇ ಎಲ್ಲರೂ ಆಕ್ರೋಶ ಹೊರಗೆಡವ್ತಿದ್ದಾರೆ.

ಪವಿತ್ರಾ ಪಂಚ್ 9
ಬಾಕ್ಸ್ ಆಫೀಸ್ ಸುಲ್ತಾನ ಅಂತಲೇ ಕರೆಯಲ್ಪಡ್ತಿದ್ದ ನಟ ದರ್ಶನ್‌ ಸಿನಿಮಾಗಳು ಬಿಗ್‌ ಬಜೆಟ್‌ನಲ್ಲಿ ತಯಾರಾಗ್ತಿದ್ವು. 50.. 100 ಕೋಟಿ ಬಂಡವಾಳದೊಂದಿಗೆ ತಯಾರಾಗ್ತಿರೋ ಹಲವಾರು ಸಿನಿಮಾಗಳಿವೆ. ದರ್ಶನ್ ಸಿನಿಮಾ ಎಂಬ ಏಕೈಕ ಕಾರಣಕ್ಕೆ ಅಷ್ಟೊಂದು ಹಣ ಹೂಡಿದ್ದ ನಿರ್ಮಾಪಕರು ನಿಜಕ್ಕೂ ಕಂಗಾಲಾಗಿದ್ದಾರೆ. ದರ್ಶನ್ ಪರ್ಮನೆಂಟಾಗಿ ಲಾಕ್ ಆಗಿದ್ದೇ ಆದ್ರೆ ತಾವು ಹೂಡಿದ ದುಡ್ಡಿನ ಕಥೆಯೇನು ಅಂತ ಆತಂಕಗೊಂಡಿದ್ದಾರೆ. ಹಲವಾರು ಕುಟುಂಬಗಳ ಕಣ್ಣೀರಿಗೆ ಪರೋಕ್ಷ ಕಾರಣರಾಗಿರೋ ಪವಿತ್ರಾ ಗೌಡ.. ದರ್ಶನ್ ಸಿನಿಮಾ ನಿರ್ಮಾಪಕರಿಗೂ ವಿಲನ್‌ ಆಗಿ ಪರಿಣಮಿಸಿದ್ದಾರೆ.

ಪವಿತ್ರಾ ಪಂಚ್ 10
ಕೊಲೆ ಕೇಸ್‌ನಲ್ಲಿ ಲಾಕ್ ಆಗಿರೋ ದರ್ಶನ್‌ ವಿರುದ್ಧ ಆರೋಪ ಸಾಬೀತಾದ್ರೆ ಜೀವಾವಧಿ ಶಿಕ್ಷೆ ಕನ್ಫರ್ಮ್ ಎನ್ನಲಾಗ್ತಿದೆ. ಹಾಗಾಗಿ.. ಇಷ್ಟು ದಿನ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿದ್ದ.. ಹೈಫೈ ಬದುಕು ಸಾಗಿಸ್ತಿದ್ದ.. ತಮ್ಮಿಷ್ಟದಂತೆ ಮಜಾ ಮಾಡುತ್ತಾ ಕಾಲ ಕಳೆಯುತ್ತಿದ್ದ ದರ್ಶನ್‌ ಲೈಫ್‌ ಮೇಲೆಯೂ ಕಾರ್ಮೋಡ ಕವಿದಂತಾಗುತ್ತೆ. ಜೀವಾವಧಿ ಶಿಕ್ಷೆಯಾಗದೆ, ಜಸ್ಟ್ 10 ವರ್ಷ ಶಿಕ್ಷೆಯಾದ್ರೂ ದರ್ಶನ್‌ ಬದುಕಿಗೆ ದೊಡ್ಡ ಪೆಟ್ಟು ಬಿದ್ದಂತಾಗುತ್ತೆ.. ಹಾಗಾಗಿ.. ಪವಿತ್ರಾ ಗೌಡ ಸಹವಾಸವೇ ದರ್ಶನ್‌ ಪಾಲಿಗೆ ಮುಳುವಾಯ್ತು ಅಂದ್ರೂ ತಪ್ಪಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!

https://newsfirstlive.com/wp-content/uploads/2024/06/PAVITRA-1.jpg

Load More