newsfirstkannada.com

ಅಪ್ಪನ ಜೀವ ತೆಗೆದ ದರ್ಶನ್ ಮೇಲಿನ ಅಭಿಮಾನ.. ಪ್ರಕರಣದಲ್ಲಿ ಅನು ಪಾತ್ರ ಏನು..?

Share :

Published June 16, 2024 at 9:19am

  ಒಬ್ಬೊಬ್ಬ ಆರೋಪಿಗಳದ್ದು ಒಂದೊಂದು ಕಥೆ, ಒಂದೊಂದು ವ್ಯಥೆ

  ಪುತ್ರ ಬಂಧನವಾಗುತ್ತಲೇ ಅನು ತಂದೆ ಹೃದಯಾಘಾತದಿಂದ ಸಾವು

  ಮಗನನ್ನ ಬಿಡಿಸಲು ಶಕ್ತಿ ಇಲ್ಲ ಎಂದು ಆರೋಪಿ ತಾಯಿ ಅಳಲು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಜೊತೆ ಗ್ಯಾಂಗ್ ಕೂಡ ಲಾಕ್ ಆಗಿದೆ. ಆದ್ರೆ ಈ ಗ್ಯಾಂಗ್​ನಲ್ಲಿರುವ ಒಬ್ಬೊಬ್ಬ ಆರೋಪಿಗಳದ್ದು ಒಂದೊಂದು ಕಥೆ. ಅದರಲ್ಲಿ ಅನುಕುಮಾರ್​ಗೆ ದರ್ಶನ್ ಮೇಲಿನ ಅಭಿಮಾನವೇ ಮುಳುವಾಗಿದೆ. ಅಭಿಮಾನದಿಂದ ತಾನು ಠಾಣೆ ಸೇರಿದ್ರೆ ಈ ಸುದ್ದಿ ಕೇಳಿ ಇವನ ತಂದೆ ಮಸಣ ಸೇರಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ದರ್ಶನ್ ಹಾಗೂ ಪವಿತ್ರಾ ಗೌಡರದ್ದು ಒಂದು ಕಥೆಯಾದ್ರೆ ಉಳಿದ ಗ್ಯಾಂಗ್​ನದ್ದು ಮತ್ತೊಂದು ವ್ಯಥೆ.. ನಟರ ಮೇಲೆ ಅಭಿಮಾನ ಸಹಜ.. ಆದ್ರೆ ಅದು ಹುಚ್ಚು ಅಭಿಮಾನ.. ದುರಭಿಮಾನ ಆಗಿರಬಾರದು. ಬಾಸ್ ಬಾಸ್ ಅಂತ ನಟ ಮಾಡಿದ್ದಕ್ಕೆಲ್ಲಾ ಜೈ ಅಂದ್ರೆ ಆಮೇಲೆ ಜೈಲು ಸೇರಬೇಕಾಗುತ್ತದೆ ಅನ್ನೋಕೆ ಈ ಕೇಸ್ ಸಾಕ್ಷಿಯಾಗಿದೆ. ಅದರಲ್ಲೂ 7ನೇ ಆರೋಪಿ ಅನು ಕುಟುಂಬದ ಪರಿಸ್ಥಿತಿ ಮಾತ್ರ ಕಣ್ಣೀರು ತರಿಸುತ್ತೆ.

ಇದನ್ನೂ ಓದಿ:ಪೊಲೀಸ್ ಠಾಣೆ ಎದುರೇ ನಡೀತು ಬರ್ಬರ ಕೊಲೆ.. ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ

ಅದ್ಯಾವಾಗ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅನು ಅಲಿಯಾಸ್ ಅನುಕುಮಾರ್ ಬಂಧನವಾಯ್ತೋ ಆತನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಅನು ತಂದೆ ಚಂದ್ರಪ್ಪ ನಡೆದುಕೊಂಡು ಹೋಗುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಂದೆ ನಿಧನದ ಸುದ್ದಿ ಕೇಳಿ ಆರೋಪಿ ಅನುಕುಮಾರ್, ನನ್ನಿಂದಲೇ ತಂದೆ ಸಾವಾಯ್ತು ಅಂತ ಪೊಲೀಸ್ ಕಸ್ಟಡಿಯಲ್ಲೇ ಕಣ್ಣೀರಾಕಿದ್ದಾನೆ. ಅನು ಬರದೆ ಅಂತ್ಯಕ್ರಿಯೆ ಮಾಡಲ್ಲ ಅಂತ ಕುಟುಂಬಸ್ಥರು ಪಟ್ಟು ಹಿಡಿದಿದ್ದಕ್ಕೆ ಆರೋಪಿಯನ್ನ ಅಂತ್ಯಕ್ರಿಯೆಗೆ ಕರೆದೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದು ಅನು ಕುಟುಂಬಕ್ಕೆ ಬರಸಿಡಿಲು ಬಡಿಯುವಂತೆ ಮಾಡಿದೆ. ಅತ್ತ ಪುತ್ರ ಜೈಲು ಸೇರಿದ್ರೆ ಇತ್ತ ಪತಿ ಶಾಶ್ವತವಾಗಿ ಕಣ್ಣು ಮುಚ್ಚಿದ್ರಲ್ಲ ಅಂತ ಚಂದ್ರಪ್ಪ ಪತ್ನಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಮಗನನ್ನ ಬಿಡಿಸಲು ಶಕ್ತಿ ಇಲ್ಲ. ಮಗನ ಬಂಧನದ ಸುದ್ದಿ ಕೇಳಿ ಗಂಡ ಸಾವನ್ನಪ್ಪಿದ್ದಾನೆ. ಮಗ ಮನೆಗೆ ಬರದೇ ಇದ್ರೆ ಅಂತ್ಯಸಂಸ್ಕಾರ ಮಾಡಲ್ಲ. ತಂದೆ ಮುಖ ನೋಡಲು ಮಗನಿಗೆ ಅವಕಾಶ ಕೊಡಿ. ಇಲ್ಲಾ ನಮಗೆ ವಿಷ ಕೊಡಿ ಅಂತ ಆರೋಪಿ ತಾಯಿ ಜಯಮ್ಮ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:ಅಪ್ಪನ ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅನು.. ಕಣ್ಣೀರಾಗಿ ಹರಿಯಿತು ಪಶ್ಚಾತಾಪ..!

ದರ್ಶನ್ ಮೇಲಿನ ಅಭಿಮಾನವೇ ಅನುಗೆ ಮುಳುವಾಯ್ತಾ?
ಇನ್ನು ದರ್ಶನ್ ಮೇಲಿನ ಅಭಿಮಾನವೇ ಅನುಗೆ ಮುಳುವಾದಂತಾಗಿದೆ. 6ನೇ ಆರೋಪಿ ಜಗ್ಗ, ಡಿ ಬಾಸ್ ಮೀಟ್ ಮಾಡಿಸ್ತೀನಿ ಎಂದ ಮಾತು ನಂಬಿ ಅನು ಬೆಂಗಳೂರಿಗೆ ಬಂದಿದ್ದ. ಶೆಡ್​ ಬಳಿ ಬರುತ್ತಲೇ ಗಾಬರಿಯಾಗಿ ಹೊರಗೆ ನಿಂತಿದ್ದ. ಲಕ್ಷ ಲಕ್ಷದ ಆಸೆಗೆ ಮೃತದೇಹ ಸಾಗಿಸುವಾಗ ಅನು ಭಾಗಿಯಾಗಿದ್ದ.

ಅಭಿಮಾನ ತಂದ ಆಪತ್ತು!
ಮಾಹಿತಿಗಳ ಪ್ರಕಾರ.. ಕುಂಚಿಗನಾಳ್ ಬಳಿ ಬರುತ್ತಿದ್ದಂತೆ ಅನುಗೆ ಜಗದೀಶ್,​ ದರ್ಶನ್ ಜೊತೆ ಫೋಟೋಗೆ ಪುಸಲಾಯಿಸಿದ್ದ. ರಘು ಅನು ಕೈನಲ್ಲೇ ಕಾರಿಗೆ ಡೀಸೆಲ್ ಹಾಕಿಸಿದ್ದ. ಆದ್ರೆ ಪಟ್ಟಣಗೆರೆ ಗೋದಾಮು ಬಳಿಗೆ ಹೋಗುತ್ತಲೇ ಗೇಟ್​ನಲ್ಲೇ ರಘು ನಿಂತಿದ್ದ. ಇತ್ತ ಅನು ಕೂಡ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಗೆ ಹೊಡೆಯೋದನ್ನ ಕೇಳಿಸಿಕೊಂಡು ಹೊರಗೆ ಇದ್ದ. ಆದ್ರೆ ದರ್ಶನ್ ಗ್ಯಾಂಗ್ ಮರ್ಡರ್ ಮಾಡುತ್ತಲೇ ಗಾಬರಿಯಾಗಿದ್ದ. ಶವ ಸಾಗಾಟಕ್ಕೆ ಡಿ.ಬಾಸ್ ಗ್ಯಾಂಗ್ ಅನುಗೆ ಲಕ್ಷ ಲಕ್ಷ ಆಸೆ ತೋರಿಸಿತ್ತು. ಆದರೂ ರಘು, ಜಗ್ಗ, ರವಿ ಜೊತೆ ತೆರಳದೇ ಶೆಡ್ ಬಳಿ ಅನು ಕುಳಿತಿದ್ದ. ಬಾಡಿ ಎಸೆದು ಬರುತ್ತಲೇ ಚಾಲಕ ರಘು ಜೊತೆ ಕಾರು ಹತ್ತಿ ದುರ್ಗಕ್ಕೆ ಬಂದಿದ್ದ. ಚಿತ್ರದುರ್ಗಕ್ಕೆ ಆಗಮಿಸಿ ಮನೆಯಲ್ಲೇ ಅವಿತು ಕುಳಿತಿದ್ದ. ದರ್ಶನ್ ಗ್ಯಾಂಗ್ ನಮ್ಮನ್ನ ಬಿಡಲ್ಲ ಎಂದು ಹೆದರಿ ಜಗ್ಗನಿಗೆ ಕರೆ ಮಾಡಿದ್ದ. ರಾತ್ರಿ ಚಿತ್ರದುರ್ಗದಲ್ಲಿ ಓಡಾಡುವ ವೇಳೆ ಪೊಲೀಸರ ಕೈಯಲ್ಲಿ ಜಗ್ಗ, ಅನು ಲಾಕ್ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

ಒಟ್ಟಾರೆ ಅನುಕುಮಾರ್​ಗೆ ದರ್ಶನ್ ಮೇಲಿನ ಅಭಿಮಾನವೇ ಆಪತ್ತಾಗಿ ಪರಿಣಮಿಸಿದೆ. ಇದರ ಪರಿಣಾಮ ತನ್ನ ನೆಚ್ಚಿನ ನಾಯಕನ ಜೊತೆಯೇ ಕಂಬಿ ಎಣಿಸುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪನ ಜೀವ ತೆಗೆದ ದರ್ಶನ್ ಮೇಲಿನ ಅಭಿಮಾನ.. ಪ್ರಕರಣದಲ್ಲಿ ಅನು ಪಾತ್ರ ಏನು..?

https://newsfirstlive.com/wp-content/uploads/2024/06/CTR-DARSHAN-1.jpg

Load More