ಕಾಂಗ್ರೆಸ್​ ಸಚಿವರ ಅತ್ಯಾಪ್ತನ ಅಪಾರ್ಟ್​ಮೆಂಟ್​ನಲ್ಲಿ ಬರೋಬ್ಬರಿ 18 ಕೋಟಿ ಪತ್ತೆ.. ಯಾರು ಈ ಬಸವರಾಜ ದತ್ತೂನವರ?​

author-image
AS Harshith
Updated On
ಕಾಂಗ್ರೆಸ್​ ಸಚಿವರ ಅತ್ಯಾಪ್ತನ ಅಪಾರ್ಟ್​ಮೆಂಟ್​ನಲ್ಲಿ ಬರೋಬ್ಬರಿ 18 ಕೋಟಿ ಪತ್ತೆ.. ಯಾರು ಈ ಬಸವರಾಜ ದತ್ತೂನವರ?​
Advertisment
  • ಮದ್ಯ ಸಂಗ್ರಹ ಇದೆ ಎಂದು ರೇಡ್​ ಮಾಡಿದ ಅಧಿಕಾರಿಗಳು
  • ಟ್ರೆಝುರಿ ಹುಡುಕಿದಾಗ ಸಿಕ್ತು ಗರಿ ಗರಿ ನೋಟುಗಳ ಕಂತೆ
  • ಹಣ ಎಣಿಸಲಾಗದೆ ಕೊನೆಗೆ ಯಂತ್ರ ತರಿಸಿದ ಅಧಿಕಾರಿಗಳು

ಧಾರವಾಡ: ಫ್ಲ್ಯಾಟ್​ನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಪತ್ತೆಯಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಾಸನಕೊಪ್ಪ ಅರ್ನಾ ಅಪಾರ್ಟ್‌ಮೆಂಟ್​​ನಲ್ಲಿರುವ ಬಸವರಾಜ ದತ್ತೂನವರ ನಿವಾಸದಲ್ಲಿ 18 ಕೋಟಿ ಹಣ ಸಿಕ್ಕಿದೆ.

ಮದ್ಯ ಸಂಗ್ರಹ ಇದೆ ಎಂಬ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು ಬಸವರಾಜ ದತ್ತೂನವರ ಮನೆ ಮೇಲೆ ದಾಳಿ ನಡೆಸಿದರು. ಈ ವೇಳೆ ಚುನಾವಣಾ ಅಧಿಕಾರಿಗಳು ಮದ್ಯ ಹುಡುಕಾಡುವ ವೇಳೆ ಹಣ ಸಿಕ್ಕಿದೆ. ಟ್ರೆಝುರಿಯಲ್ಲಿ 18 ಕೋಟಿ ಪತ್ತೆಯಾಗಿದೆ.

ಚುನಾವಣಾ ಅಧಿಕಾರಿಗಳು ಮನೆಯಲ್ಲಿದ್ದ ಚೀಲಗಳಲ್ಲಿ ಮದ್ಯ ಹುಡುಕಾಡಿದ್ದಾರೆ. ಚೀಲಗಳಲ್ಲಿ ಏನೂ ಸಿಗದಿದ್ದಾಗ ಟ್ರೆಝುರಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಹಣ ಸಿಕ್ಕಿದೆ.

publive-image

ಇದನ್ನೂ ಓದಿ: ಬ್ರೇಕ್ ಫೇಲ್​ ಆಗಿ ಪಲ್ಟಿ ಹೊಡೆದ ರಾಜಹಂಸ ಬಸ್​; ​ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯ

18 ಕೋಟಿ ರೂಪಾಯಿ ಹಣ ಸಿಕ್ಕಿದ ಹಿನ್ನೆಲೆ ಆದಾಯ ತೆರಿಗೆ ಇಲಾಖೆಗೆ ಕೇಸ್ ಶಿಫ್ಟ್ ಆಗಿದೆ. 10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕಿರೋ ಹಿನ್ನೆಲೆ ಐಟಿ ಸಿಬ್ಬಂದಿ ಹಣ ಎಣಿಸಲು ಯಂತ್ರ ತಂದಿದ್ದಾರೆ. ಸದ್ಯ ಬಸವರಾಜರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನು ವಿಚಾರಣೆ ವೇಳೆ ಬಸವರಾಜ ದತ್ತೂನವರ ಯು.ಬಿ. ಶೆಟ್ಟಿ ಅಕೌಂಟೆಂಟ್ ಎಂದು ಹೇಳಿದ್ದಾರೆ. ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ದಾಖಲೆ ನೀಡಿದ್ದಾರೆ.

ಯಾರಿದು ಬಸವರಾಜ ದತ್ತೂನವರ..?​

ಬಸವರಾಜ ದತ್ತೂನವರ ಮೂಲತಃ ಧಾರವಾಡ ಜಿಲ್ಲೆಯ ದುಮ್ಮವಾಡ ಗ್ರಾಮದವರು. LLB ಮಾಡಿರುವ ಇವರು ವಕೀಲ ವೃತ್ತಿಯ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರ ಕೂಡ ನಡೆಸ್ತಿದ್ರು. ಸಚಿವ ಸಂತೋಷ ಲಾಡ್ ಅವರಿಗೆ ಅತ್ಯಾಪ್ತ ಎಂದು ಉನ್ನತ ಮೂಲಗಳ‌ ಮಾಹಿತಿ ಲಭ್ಯವಾಗಿದೆ.

ಬಸವರಾಜ ದತ್ತೂನವರ ಅವರ ಅಪಾರ್ಟ್​ಮೆಂಟ್​ನಲ್ಲಿ ಅಪಾರ ಪ್ರಮಾಣದಲ್ಲಿ ಮಧ್ಯವನ್ನ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ಅಧಿಕಾರಿಗಳಿ ಸಿಕಿತ್ತು. ಅದರ ಜೊತೆಗೆ ಚುನಾವಣೆಗೆ ಹಣ ಹಂಚಲು‌ ಹಣವನ್ನ ಅಪಾರ್ಟ್ಮೆಂಟ್ ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿಯು ಅವರ ಕಿವಿಗೆ ಬಿದ್ದಿತ್ತು. ಈ ಮಾಹಿತಿಯ ಆಧಾರದ ಮೇಲೆ ಚುನಾವಣಾಧಿಕಾರಿಗಳು‌ ದಾಳಿ ಮಾಡಿದ್ದು, 18 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment