newsfirstkannada.com

ಬ್ರೇಕ್ ಫೇಲ್​ ಆಗಿ ಪಲ್ಟಿ ಹೊಡೆದ ರಾಜಹಂಸ ಬಸ್​; ​ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯ

Share :

Published April 16, 2024 at 10:31pm

    ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದ ದುರ್ಘಟನೆ

    ಜನರನ್ನು ತುಂಬಿಕೊಂಡು ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್​

    ಸ್ಥಳೀಯ ನಿವಾಸಿಗಳ ಸಹಾಯದಿಂದ ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ

ಬೆಳಗಾವಿ: ರಾಜಹಂಸ ಬಸ್ ಬ್ರೇಕ್ ಫೇಲ್ ಆಗಿ ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಅಪಘಾತ ಸಂಭವಿಸಿದೆ.

ರಾಜಹಂಸ ಬಸ್ ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿತ್ತು. ಈ ವೇಳೆ ರಸ್ತೆ ಪಕ್ಕದ ಬ್ಯಾರಿಕೆಡ್ ಗೆ ಗುದ್ದಿ ಸರ್ವಿಸ್ ರಸ್ತೆಯಲ್ಲಿ ಬಸ್ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಇಪ್ಪತ್ತು ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳೀಯ ನಿವಾಸಿಗಳ ಸಹಾಯದಿಂದ ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: VIDEO: ಬಾಲರಾಮನಿಗೆ ಸೂರ್ಯ ತಿಲಕ.. ಅಯೋಧ್ಯೆಯಲ್ಲಿ ನಡೆದ ಮೊದಲ ಪ್ರಯೋಗ ಹೇಗಿತ್ತು ಗೊತ್ತಾ?

ಬೆಳಗಾವಿ, ಹುಬ್ಬಳ್ಳಿ ನಡುವೆ ಕಿಮೀ ಮೀರಿದ ಬಸ್ ಗಳ ಓಡಾಟ ಹೆಚ್ಚಾಗುತ್ತಿವೆ. ಡಕೋಟಾ ಬಸ್ ಗಳ ಓಡಾಟ ಹಿನ್ನೆಲೆ ತಾಂತ್ರಿಕ ದೋಷ, ಬ್ರೇಕ್ ಫೇಲ್ ನಿಂದ ಅಪಘಾತ ನಡೆದಿದೆ. ಇಲಾಖೆ ಗಮನಕ್ಕೆ ಸಿಬ್ಬಂದಿ ತಂದ್ರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್​ ಮಾಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರೇಕ್ ಫೇಲ್​ ಆಗಿ ಪಲ್ಟಿ ಹೊಡೆದ ರಾಜಹಂಸ ಬಸ್​; ​ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯ

https://newsfirstlive.com/wp-content/uploads/2024/04/Bus.jpg

Load More