newsfirstkannada.com

ಗ್ಯಾಸ್ಟ್ರಿಕ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವು.. ವೈದ್ಯರ ನಿರ್ಲಕ್ಷ ಎಂದು ಆರೋಪಿಸಿದ ಕುಟುಂಬಸ್ಥರು

Share :

Published April 13, 2024 at 6:47am

    ನಿನ್ನೆ ಗ್ಯಾಸ್ಟ್ರಿಕ್ ಅಂತ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 18ರ ಯುವಕ

    ಆಸ್ಪತ್ರೆಗೆ ದಾಖಲಾದ್ರೂ ಯಾವೊಬ್ಬ ವೈದ್ಯಾಧಿಕಾರಿಗಳೂ ಬಂದಿಲ್ಲ

    ವೈದ್ಯಾಧಿಕಾರಿಗಳು ಸರಿಯಾದ ಚಿಕಿತ್ಸೆ ಕೊಡ್ತಿಲ್ಲ ಅಂತಾ ಕುಟುಂಬಸ್ಥರ ಆರೋಪ

ಚಿತ್ರದುರ್ಗ: ಗ್ಯಾಸ್ಟ್ರಿಕ್ ಅಂತ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಅಲ್ಲಿನ ಗೋಪಾಲಪುರ ರಸ್ತೆಯ ನಿವಾಸಿ ನಯಾಜ್ (18) ಸಾವನ್ನಪ್ಪಿದ ದುರ್ದೈವಿ.

ನಯಾಜ್ ವೈದ್ಯರ ನಿರ್ಲಕ್ಷದಿಂದ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಮುಂಭಾಗ ನಯಾಜ್ ಕುಟುಂಬಸ್ಥರು ದೌಡಾಯಿಸಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೈದ್ಯಾಧಿಕಾರಿಗಳು ಸರಿಯಾದ ಚಿಕಿತ್ಸೆ ಕೊಡ್ತಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಳೆದು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಬ್ಯಾಗ್​ ಸಿಗುವಂತೆ ಮಾಡಿದ ಶಕ್ತಿ ಸ್ಕೀಮ್​​; ಹೇಗೆ..?

ನಿನ್ನೆ ಆಸ್ಪತ್ರೆಗೆ ದಾಖಲಾದ್ರೂ ಯಾವೊಬ್ಬ ವೈದ್ಯಾಧಿಕಾರಿಗಳೂ ಬಂದಿಲ್ಲ ಅಂತಾ ಆರೋಪ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ವ್ಯವಸ್ಥೆ ಬದಲಾಗಬೇಕು ಅಂತಾ ಕುಟುಂಬಸ್ಥರ ಆಕ್ರೋಶ ಹೊರಹಾಕಿದ್ದಾರೆ.

ಅತ್ತ ನಯಾಜ್​ ತಂದೆ, ನನ್ಮಗ ಸತ್ತೋದ, ನಾನೇನ್ ಮಾಡ್ಲಿ ಅಂತಾ ತಂದೆಯ ಕಣ್ಣೀರು ಸುರಿಸಿದ್ದಾರೆ. ನ್ಯಾಯಕ್ಕಾಗಿ ನಯಾಜ್ ಕುಟುಂಬಸ್ಥರ ಪರದಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ಯಾಸ್ಟ್ರಿಕ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವು.. ವೈದ್ಯರ ನಿರ್ಲಕ್ಷ ಎಂದು ಆರೋಪಿಸಿದ ಕುಟುಂಬಸ್ಥರು

https://newsfirstlive.com/wp-content/uploads/2024/04/Gastric.jpg

Load More