Advertisment

ಮದುವೆಯಾಗಿ ವಾರ ಕೂಡ ಕಳೆದಿರಲಿಲ್ಲ.. 18 ವರ್ಷದ ಮದುಮಗಳು ನಿಗೂಢ ಸಾವು.. ಅಂದು ನಡೆದಿದ್ದೇನು..?

author-image
Ganesh
Updated On
ಶುಭ ಮುಹೂರ್ತದ ಎಫೆಕ್ಟ್‌.. ರಾಜಸ್ಥಾನ ಚುನಾವಣೆಯ ದಿನಾಂಕ ಮುಂದೂಡಿದ ಚುನಾವಣಾ ಆಯೋಗ
Advertisment
  • ಮೇ 6 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಯುವತಿಗೆ ಮದುವೆ
  • ತವರು ಮನೆಯಿಂದ ಗಂಡನ ಮನೆಗೆ ಹೋದ ದಿನವೇ ಗಂಭೀರ
  • ಮದುಮಗಳ ಅಜ್ಜಿ ನೀಡಿದ ಮಾಹಿತಿ ಏನು? ಆಕೆಗೆ ಆಗಿದ್ದೇನು?

ಮದುವೆಯಾದ ಒಂದು ವಾರದಲ್ಲಿ ಮದುಮಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದ್ವಾರಕಪುರಿಯಲ್ಲಿ ನಡೆದಿದೆ ಎಂದು ಇಂದೋರ್​ನ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

18 ವರ್ಷದ ಸಲೋನಿ ಮೃತ ದುರ್ದೈವಿ. ಮದುವೆಯಾದ ಎರಡ್ಮೂರು ದಿನದಲ್ಲೇ ಸಾವನ್ನಪ್ಪಿದ್ದಾಳೆ. ವರದಿಗಳ ಪ್ರಕಾರ ಮುಖ, ಕೈ, ಕಾಲುಗಳಲ್ಲಿ ಬಾಹು ಕಾಣಿಸಿಕೊಂಡು ಮೃತಪಟ್ಟಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯರು ತುರ್ತಿ ನಿಗಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದರು. ದುರಾದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ:ಮೇ 18.. ಆರ್​​ಸಿಬಿ ಟಾರ್ಗೆಟ್​ ಕೂಡ 18..! ಆ 18ರಲ್ಲಿ ಅಡಗಿದೆ ಆರ್​​ಸಿಬಿ ಭವಿಷ್ಯ..!

ಕುಟುಂಬದ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ.. ಸಲೋನಿ ಮದುವೆ ಮೇ 6 ರಂದು ನಡೆದಿದೆ. ಆಕೆ ಜ್ವರದಿಂದ ಬಳಲುತ್ತಿದ್ದಳು. ಮದುವೆಯಾದ ಎರಡು ದಿನಗಳ ನಂತರ ತಾಯಿ ಮನೆಗೆ ಬಂದಿದ್ದಳು. ಭಾನುವಾರ ಆಕೆಯ ಪತಿ ವಿಕಾಸ್ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ಹೋಗ್ತಿದ್ದಂತೆ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಸೋಮವಾರ ರಾತ್ರಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

Advertisment

ಅಂದು ನಡೆದಿದ್ದು ಏನು?

ಮೃತಳ ಅಜ್ಜಿ ನೀಡಿರುವ ಮಾಹಿತಿ ಪ್ರಕಾರ.. ಭಾನುವಾರ ಬೆಳಗ್ಗೆ ಇಲ್ಲಿಂದ (ತಾಯಿಮನೆಗೆ) ಹೊರಟಿದ್ದರು. ಮಧ್ಯಾಹ್ನದ ವೇಳೆಗೆ ಆಕೆಗೆ ಹುಷಾರಿಲ್ಲ ಎಂದು ಆಕೆಯ ಪತಿ ಫೋನ್ ಮಾಡಿ ತಿಳಿಸಿದ್ದ. ಇಲ್ಲಿಂದ ಹೊರಡುವಾಗಲೇ ಆಕೆಯ ಕೈ ಕಾಲುಗಳು ಊದಿಕೊಂಡಿದ್ದವು. ಜ್ವರದಿಂದ ಬಳಲುತ್ತಿದ್ದಳು. ವಿಷಯ ಗೊತ್ತಾಗುತ್ತಿದ್ದಂತೆಯೇ ಸಲೋನಿ ಸಹೋದರ, ಆಕೆ ಇದ್ದಲ್ಲಿಗೆ ಹೋಗಿದ್ದಾನೆ. ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ್ದಾಳೆ ಎಂದು ಕಣ್ಣೀರು ಇಟ್ಟಿದ್ದಾರೆ ಅಜ್ಜಿ ಸುಭದ್ರಾ.

ಇದನ್ನೂ ಓದಿ:ಸಣ್ಣ ವಿಚಾರಕ್ಕೆ ಕಿರಿಕ್.. ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment