newsfirstkannada.com

ಮೇ 18.. ಆರ್​​ಸಿಬಿ ಟಾರ್ಗೆಟ್​ ಕೂಡ 18..! ಆ 18ರಲ್ಲಿ ಅಡಗಿದೆ ಆರ್​​ಸಿಬಿ ಭವಿಷ್ಯ..!

Share :

Published May 14, 2024 at 10:41am

  ಕಥೆ ಮುಗೀತು ಅಂದವರಿಗೆ ರಾಯಲ್​ ಸವಾಲ್​​

  ಚೆನ್ನೈ ಎದುರು ಆರ್​​ಸಿಬಿ ಗೆದ್ದರೆ ಸಾಕಾ? ಲಕ್ನೋ ಕತೆ?

  ಡೆಲ್ಲಿ, ಹೈದ್ರಾಬಾದ್​ ತಂಡಗಳ ಕಥೆ ಏನು? ಇಲ್ಲಿದೆ ಮಾಹಿತಿ

ಫಿನಿಕ್ಸ್​​ನಂತೆ ಆರ್​​ಸಿಬಿ ಎದ್ದು ಬಂದ ಬೆನ್ನಲ್ಲೇ ಪ್ಲೇ ಆಫ್​ ಲೆಕ್ಕಾಚಾರ ಜೋರಾಗಿದೆ. ಕ್ಯಾಲ್ಕ್ಯುಲೇಟರ್​ ಹಿಡಿದು ಫ್ಯಾನ್ಸ್​ ಲೆಕ್ಕಾಚಾರ ಹಾಕ್ತಿದ್ದಾರೆ. ಡೆಲ್ಲಿ ವಿರುದ್ದ ಭರ್ಜರಿಯಾಗಿ ಗೆದ್ದ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡುತ್ತಾ? ಸಿಎಸ್​​ಕೆ ಎದುರು ಸಾಮಾನ್ಯ ಗೆಲುವು ಸಾಕಾ? ಅದ್ದೂರಿ ಗೆಲುವು ಬೇಕಾ? ಪ್ಲೇ ಆಫ್​ ಲೆಕ್ಕಾಚಾರದ ಕಂಪ್ಲೀಟ್​ ಕಹಾನಿ ಇಲ್ಲಿದೆ.

ಐಪಿಎಲ್​ ಸೀಸನ್​ 17 ಹಿಂದೆದಿಗಿಂತಲೂ ರಣರೋಚಕ ಘಟ್ಟ ತಲುಪಿದೆ. ಬಲಾಢ್ಯ ತಂಡಗಳ ನಡುವೆ ಪ್ಲೇ ಆಫ್​ ಎಂಟ್ರಿಗಾಗಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಎಲ್ರೂ ಆರ್​​ಸಿಬಿ ಕಥೆ ಮುಗಿದೇ ಹೋಯ್ತು ಅಂದುಕೊಂಡಿದ್ರು. ಆದ್ರೆ ಎಲ್ಲರ ಲೆಕ್ಕಾಚಾರಕ್ಕೆ ರಾಯಲ್​​ ಚಾಲೆಂಜ್​​ ಮಾಡಿ ಆರ್​​ಸಿಬಿ ರಣರೋಚಕ ರೀತಿಯಲ್ಲಿ ಕಮ್​​ಬ್ಯಾಕ್​​ ಮಾಡಿದೆ. ಆರ್​​ಸಿಬಿ ಕ್ಯಾಂಪ್​ನಲ್ಲೀಗ ಪ್ಲೇ ಆಫ್​ ಕನಸು ಚಿಗುರೊಡೆದಿದೆ.

ಇದನ್ನೂ ಓದಿ:ಸಣ್ಣ ವಿಚಾರಕ್ಕೆ ಕಿರಿಕ್.. ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ

ಕೆಲವೊಮ್ಮೆ ನಿರೀಕ್ಷೆ ಮಾಡದಂತ ಘಟನೆಗಳು ನಡೆಯುತ್ತವೆ. ದುರಾದೃಷ್ಟಕರವಾದ ಘಟನೆಗಳೂ ನಡೆಯುತ್ತವೆ. ಇವತ್ತು ನಾನು ಇಲ್ಲಿರೋದಕ್ಕೆ ಕಾರಣ ಇನ್ನೂ 1% ಅವಕಾಶವಿದೆ. ಕೆಲವೊಮ್ಮೆ ಈ ಅವಕಾಶ ಸಾಕು. ನೀವು ಆ 1% ಅವಕಾಶದ ಬಗ್ಗೆ ಹೇಗೆ ಯೋಚಿಸ್ತಿರಿ ಅನ್ನೋದು ಮುಖ್ಯವಾಗುತ್ತೆ-ವಿರಾಟ್ ಕೊಹ್ಲಿ

ಚೊಚ್ಚಲ WPL​​ನಲ್ಲಿ RCB ಮಹಿಳಾ ತಂಡ ಸೋತು ಸುಣ್ಣವಾಗಿತ್ತು. ಆಗ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ್ದ ಕಿಂಗ್​ ಕೊಹ್ಲಿ, ಈ ಹಿಂದೆ ಆಡಿದ ಮಾತುಗಳಿವು. ಆ ಸೀಸನ್​ನಲ್ಲಿ ಈ ಆತ್ಮವಿಶ್ವಾಸದ ಮಾತುಗಳು ಮಹಿಳಾ ತಂಡದ ಪಾಲಿಗೆ ವರ್ಕೌಟ್​ ಆಗ್ಲಿಲ್ಲ. ಈ ಬಾರಿ ಆರ್​​ಸಿಬಿ ಕ್ಯಾಂಪ್​ನಲ್ಲಿ ಈ ಮಾತು ನೂರಕ್ಕೆ ನೂರರಷ್ಟು ವರ್ಕೌಟ್​ ಆಗಿದೆ. ಸತತ ಸೋಲಿನಿಂದ ಕಂಗೆಟ್ಟು ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದ್ದ ಆರ್​​ಸಿಬಿ ಪ್ಲೇ ಆಫ್​​ ರೇಸ್​ಗೆ ಎಂಟ್ರಿ ಕೊಟ್ಟಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​​.. ಟೀಂ ಇಂಡಿಯಾಗೆ ಕ್ಯಾಪ್ಟನ್ ರೋಹಿತ್ ಶರ್ಮಾನೇ ಕಂಟಕ..!

ಫಿನಿಕ್ಸ್​​ನಂತೆ ಎದ್ದು ಬಂದ ರಾಯಲ್​ ಚಾಲೆಂಜರ್ಸ್​..!
ಪಾಯಿಂಟ್ಸ್​ ಟೇಬಲ್​ನಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್​ ಆಗಿದ್ದ ಆರ್​​ಸಿಬಿ ಇದೀಗ 5ನೇ ಸ್ಥಾನಕ್ಕೆ ಜಿಗಿದಿದೆ. ಡೆಲ್ಲಿ ವಿರುದ್ಧದ ಗೆಲುವು ಪ್ಲೇ ಆಫ್​ ಎಂಟ್ರಿಯ ಅವಕಾಶವನ್ನ ಇನ್ನಷ್ಟು ಹೆಚ್ಚಿಸಿದೆ. ಮುಂದಿನ ಪಂದ್ಯದಲ್ಲಿ ಗೆದ್ರೆ, ಪ್ಲೇ ಆಫ್​ಗೆ ಲೆಕ್ಕಾಚಾರ ಎಲ್ಲೆಡೆ ಶುರುವಾಗಿದೆ. ಅಸಲಿಗೆ ಸಿಎಸ್​ಕೆ ವಿರುದ್ಧ ಗೆದ್ರೆ, ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡೋಕೆ ಆಗಲ್ಲ.. ಅಲ್ಲೂ ಅದೃಷ್ಟ ಕೈ ಹಿಡಿಯಲೇಬೇಕಿದೆ.

ಪ್ಲೇ ಆಫ್​ ಎಂಟ್ರಿಗೆ ಶುರುವಾಯ್ತು ಜಿದ್ದಾಜಿದ್ದಿನ ಪೈಪೋಟಿ..!
ನಿನ್ನೆಯ ಪಂದ್ಯದಲ್ಲಿ ಗೆದ್ದಿರುವ ಗುಜರಾತ್​​ ಕೂಡ ಇದೀಗ ಪ್ಲೇ ಆಫ್​ ರೇಸ್​​ಗೆ ಕಾಲಿಟ್ಟಿದೆ. ಆದ್ರೆ, ರನ್​ರೇಟ್​ ಲೆಕ್ಕಾಚಾರದಲ್ಲಿ ಗುಜರಾತ್​ ಹಾಗೂ ಡೆಲ್ಲಿಗೆ ಅವಕಾಶ ತೀರಾ ಕಡಿಮೆಯಿದೆ./ ನಿನ್ನೆಯ ಪಂದ್ಯದಲ್ಲಿ ಸೋತ ಗುಜರಾತ್​​ ಪ್ಲೇ ಆಫ್​ ರೇಸ್​​ ನಿಂದ ಹೊರಬಿದ್ದಿದೆ. ರನ್​ರೇಟ್​ ಲೆಕ್ಕಾಚಾರದಲ್ಲಿ ಡೆಲ್ಲಿಗೆ ಅವಕಾಶ ತೀರಾ ಕಡಿಮೆಯಿದೆ. ಸಾಲಿಡ್​ ಫಾರ್ಮ್​ನಲ್ಲಿರೋ ಸನ್​ರೈಸರ್ಸ್​ ಹೈದ್ರಾಬಾದ್​ ಮುಂದಿನ 1 ಪಂದ್ಯದಲ್ಲಿ ಗೆದ್ರೆ ಸೇಫ್​ ಆಗಲಿದೆ. ಉಳಿದ 1 ಸ್ಥಾನಕ್ಕೆ ಲಕ್ನೋ, ಚೆನ್ನೈ, ಬೆಂಗಳೂರು ತಂಡಗಳ ನಡುವೆ ಪೈಪೋಟಿಯಿದೆ.

ಇದನ್ನೂ ಓದಿ:ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

ಲಕ್ನೋ ಸೋಲಿಗೆ ಶುರುವಾಯ್ತು ಪ್ರಾರ್ಥನೆ
6 ಪಂದ್ಯ ಪಾಯಿಂಟ್ಸ್​ ಹೊಂದಿರುವ ಲಕ್ನೋ ಸೂಪರ್​ ಜೈಂಟ್ಸ್​​ ಇನ್ನುಳಿದ 2 ಪಂದ್ಯ ಗೆದ್ರೆ ಆರ್​​ಸಿಬಿ ಕನಸು ನುಚ್ಚುನೂರಾಗಲಿದೆ. ಇಂದು ನಡೆಯೋ ಡೆಲ್ಲಿ ಕ್ಯಾಪಿಟಲ್ಸ್​​ ಅಥವಾ ಮುಂಬರುವ ಮುಂಬೈ ಎದುರಿನ ಬ್ಯಾಟಲ್​ನಲ್ಲಿ ಲಕ್ನೋ ಸೋತ್ರೆ, ಆರ್​​ಸಿಬಿ ಪ್ಲೇ ಆಫ್​ ಎಂಟ್ರಿಯ ಆಸೆ ಜೀವಂತವಾಗಿರಲಿದೆ. ಅದೃಷ್ಟ ಕೈ ಹಿಡಿದು ಲಕ್ನೋ ಸೋತ್ರೂ ಸಿಎಸ್​ಕೆ ಎದುರು ಭರ್ಜರಿ ಗೆಲುವಿನ ಅಗತ್ಯತೆ ಆರ್​​ಸಿಬಿಗಿದೆ.

ಮೇ 18.. ಆರ್​​ಸಿಬಿಯ ಟಾರ್ಗೆಟ್​ ಕೂಡ 18..!
ಅಂದುಕೊಂಡತೆ ಲಕ್ನೋ, ಡೆಲ್ಲಿ ತಂಡಗಳು ಪ್ಲೇ ಆಫ್​ ರೇಸ್​ನಿಂದ ಔಟಾದ್ರೆ ಮೇ 18ರಂದು ನಡೆಯೋ ಸಿಎಸ್​ಕೆ VS ಆರ್​​ಸಿಬಿ ಕದನ ಎಲಿಮಿನೇಟರ್​ ಸ್ವರೂಪ ಪಡೆದುಕೊಳ್ಳಲಿದೆ. ಈ ಪಂದ್ಯದಲ್ಲಿ ಆರ್​​ಸಿಬಿಗೆ ಸಾಮಾನ್ಯ ಗೆಲುವು ಸಾಕಾಗಲ್ಲ.. ರನ್​ರೇಟ್​ ಹೆಚ್ಚಿಸಿಕೊಳ್ಳಬೇಕಂದ್ರೆ, ಭರ್ಜರಿ ಗೆಲುವು ಬೇಕು. ಉದಾಹರಣೆಗೆ ಮೊದಲು ಬ್ಯಾಟಿಂಗ್​ ನಡೆಸಿ 200 ರನ್​ಗಳಿಸಿದ್ರೆ, 18 ರನ್​​​​​ ಅಂತರದಲ್ಲಿ ಗೆಲ್ಲಬೇಕಿದೆ. ಒಂದು ವೇಳೆ ಚೇಸಿಂಗ್​ ಮಾಡಿದ್ರೆ, 18.1 ಓವರ್​​ಗಳಲ್ಲಿ ಗುರಿ ಮುಟ್ಟಬೇಕು. ಆಗ ಮಾತ್ರ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ.

ಇದನ್ನೂ ಓದಿ:LSG vs DC ಮಧ್ಯೆ ಹೈ-ವೋಲ್ಟೇಜ್ ಪಂದ್ಯ; ಆರ್​ಸಿಬಿ ಪ್ಲೇ ಆಫ್​ಗೆ ಇವತ್ತು ಯಾವ ತಂಡ ಗೆದ್ದರೆ ಉತ್ತಮ..?

ಸತತ 6 ಸೋಲುಗಳನ್ನು ಕಂಡು ಇದೀಗ ಸತತವಾಗಿ 5 ಪಂದ್ಯ ಗೆದ್ದಿರೋ ಆರ್​​ಸಿಬಿ ಆಟ ಮೊದಲಿನಂತಿಲ್ಲ. ಜೊತೆಗೆ ಲಾಯಲ್​​ ಅಭಿಮಾನಿಗಳ ಪ್ರಾರ್ಥನೆಯೋ ಏನೋ, ಆ ದೇವರು ಕೂಡ ಆರ್​ಸಿಬಿ ಬೆಂಬಲಕ್ಕೆ ನಿಂತಂತಿದೆ. ಪ್ರತಿ ಪಂದ್ಯದಲ್ಲೂ ಅದೃಷ್ಟ ಕೈ ಹಿಡಿದಿದೆ. ಈ ಅದೃಷ್ಟದಾಟ ನೋಡಿದ್ರೆ, ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡೋದಲ್ಲ.. ಕಪ್​ ಗೆದ್ರೂ ಆಶ್ಚರ್ಯಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮೇ 18.. ಆರ್​​ಸಿಬಿ ಟಾರ್ಗೆಟ್​ ಕೂಡ 18..! ಆ 18ರಲ್ಲಿ ಅಡಗಿದೆ ಆರ್​​ಸಿಬಿ ಭವಿಷ್ಯ..!

https://newsfirstlive.com/wp-content/uploads/2024/05/RCB-43.jpg

Load More