newsfirstkannada.com

LSG vs DC ಮಧ್ಯೆ ಹೈ-ವೋಲ್ಟೇಜ್ ಪಂದ್ಯ; ಆರ್​ಸಿಬಿ ಪ್ಲೇ ಆಫ್​ಗೆ ಇವತ್ತು ಯಾವ ತಂಡ ಗೆದ್ದರೆ ಉತ್ತಮ..?

Share :

Published May 14, 2024 at 7:18am

    ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರೋಚಕ ಪಂದ್ಯ

    ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಗೆಲುವು ಬೇಕು

    ಅಧಿಕೃತವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಕೆಕೆಆರ್

ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್​ 2024ರ 64 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇಆಫ್ ರೇಸ್​ನಲ್ಲಿದ್ದು, ಇಂದಿನ ಪಂದ್ಯ ಎರಡು ತಂಡಗಳಿಗೂ ಮಹತ್ವದ್ದಾಗಿದೆ. ತವರಿನಲ್ಲಿ ಗೆಲ್ಲುವ ಭರವಸೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವಿದ್ರೆ, ಅತ್ತ ಈ ಪಂದ್ಯವನ್ನ ಗೆದ್ದು ಫ್ಲೇಆಫ್​ ಕನಸನ್ನು ಹಾಗೆಯೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಇದೆ. ಇನ್ನು ಆರ್​​ಸಿಬಿ ಪ್ಲೇ ಆಫ್​ಗೆ ಹೋಗಬೇಕು ಅಂದರೆ ಇವತ್ತಿನ ಪಂದ್ಯದಲ್ಲಿ ಡೆಲ್ಲಿ ಎಲ್​​ಎಸ್​ಜಿ ಸೋತರೆ ಒಳ್ಳೆಯದು. ಯಾಕೆಂದರೆ ಎಲ್​ಎಸ್​ಜಿ ಇವತ್ತಿನ ಪಂದ್ಯ ಸೇರಿ ಒಟ್ಟು ಎರಡು ಪಂದ್ಯಗಳು ಇವೆ. ಇವತ್ತಿನ ಪಂದ್ಯದಲ್ಲಿ ಭಾರೀ ಅಂತರದಲ್ಲಿ ಗೆದ್ದರೆ ರನ್​ ರೇಟ್ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಡೆಲ್ಲಿ ಗೆದ್ದರೂ ಅವರ ನೆಟ್​ ರನ್​​ ರೇಟ್​ ತುಂಬಾ ಕಡಿಮೆ ಇರೋದ್ರಿಂದ ಅಷ್ಟೊಂದು ಪರಿಣಾಮ ಬೀರಲ್ಲ. ಹೀಗಾಗಿ ಆರ್​ಸಿಬಿ ಪ್ಲೇ-ಆಫ್ ದೃಷ್ಟಿಯಿಂದ ಡೆಲ್ಲಿ ಗೆಲ್ಲೋದೇ ಉತ್ತಮ.

ಇದನ್ನೂ ಓದಿ:ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

ನಿನ್ನೆ ಗುಜರಾತ್​ನ ಅಹಮದಾಬಾದ್​ನ​ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್​ 2024ರ 63ನೇ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದ್ರೆ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದು, ಎರಡೂ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿದೆ. ಈಗಾಗಲೇ ಕೆಕೆಆರ್ ತಂಡ ಫ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಗುಜರಾತ್​ ತಂಡ ಒಟ್ಟು 13 ಪಂದ್ಯಗಳನ್ನಾಡಿ, 5 ಪಂದ್ಯ ಗೆದ್ದು 7ರಲ್ಲಿ ಸೋಲನ್ನ ಅನುಭವಿಸಿದೆ.

ಇದನ್ನೂ ಓದಿ:ಮತ್ತೆ ಮ್ಯಾಚ್​ ಫಿಕ್ಸಿಂಗ್ ಆರೋಪ.. CSK ಬ್ಯಾನ್​​ಗೆ ಆಗ್ರಹಿಸಿದ ಫ್ಯಾನ್ಸ್..! ಏನಿದು ಅನುಮಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

LSG vs DC ಮಧ್ಯೆ ಹೈ-ವೋಲ್ಟೇಜ್ ಪಂದ್ಯ; ಆರ್​ಸಿಬಿ ಪ್ಲೇ ಆಫ್​ಗೆ ಇವತ್ತು ಯಾವ ತಂಡ ಗೆದ್ದರೆ ಉತ್ತಮ..?

https://newsfirstlive.com/wp-content/uploads/2024/04/RCB-KOHLI-1.jpg

Load More