newsfirstkannada.com

3 ತಿಂಗಳಲ್ಲಿ 4 ದುರಂತ.. ನಮ್ಮ ಮೆಟ್ರೋ ಸ್ಟೇಷನ್‌ನಲ್ಲಿ ಏನಾಗ್ತಿದೆ? ಬೆಂಗಳೂರಿಗರ ಬೇಡಿಕೆ ಏನು?

Share :

Published March 23, 2024 at 9:48pm

Update March 23, 2024 at 10:05pm

  ದೆಹಲಿ, ಚೆನ್ನೈ ರೀತಿ ಮೆಟ್ರೋದಲ್ಲಿ 'ಪಿಎಸ್‌ಡಿ' ಅಳವಡಿಕೆ ಆಗುತ್ತಾ?

  ಮೆಟ್ರೋ ಸ್ಟೇಷನ್‌ನಲ್ಲಿ ಏನಾಗ್ತಿದೆ? 4 ತಿಂಗಳಲ್ಲಿ ನಾಲ್ಕು ಅವಘಡ!

  ಏನಿದು 'ಪಿಎಸ್‌ಡಿ'? ಮೆಟ್ರೋ ದುರಂತಗಳನ್ನ ತಡೆಯೋದು ಹೇಗೆ?

ಬೆಂಗಳೂರು: ಮೆಟ್ರೋ ಬಂದಾಗ ಟ್ರಾಫಿಕ್ ಸಮಸ್ಯೆ ಕಮ್ಮಿ ಆಗುತ್ತೆ? ಜನಗಳಿಗೆ ಅನುಕೂಲ ಆಗುತ್ತೆ ಅಂತ ವಿಶ್ಲೇಷಿಸಿದರು. ಜನಗಳಿಗೇನೋ ಅನುಕೂಲ ಆಗ್ತಿದೆ. ಅದೇ ಥರಾ ಅವಘಡಗಳಿಗೂ ಸಾಕ್ಷಿ ಆಗ್ತಿದೆ. ರಿಸೆಂಟ್​ ಆಗಿ ಮೆಟ್ರೋ ಹಳಿಗೆ ಹಾರಿ ಯುವಕನೊಬ್ಬ ಸೂಸೈಡ್​ ಮಾಡ್ಕೊಂಡ. ಆದರೆ ಇದಕ್ಕೂ ಮುಂಚೆಯೂ ಇಂತಹ ಪ್ರಯತ್ನಗಳು ಆಗಿವೆ. ನಗರ ಪ್ರದೇಶಗಳಲ್ಲಿ ಸದ್ಯ ಮೆಟ್ರೋ ತುಂಬಾ ಪರಿಣಾಮಕಾರಿ ಸಾರಿಗೆ ವ್ಯವಸ್ಥೆ ಆಗಿದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳೋಕೆ ಜನ ಮೆಟ್ರೋ ಬಳಸ್ತಿದ್ದಾರೆ. ಬಸ್, ಟ್ಯಾಕ್ಸಿ, ಆಟೋ ಹಾಗೂ ಬೈಕ್​ಗಳನ್ನ ಸೈಡಿಗಟ್ಟಿ ಮೆಟ್ರೋದಲ್ಲಿ ಓಡಾಡೋರ ಸಂಖ್ಯೆ ಜಾಸ್ತಿ ಆಗಿದೆ.

ದಿನೇ ದಿನೇ ಮೆಟ್ರೋ ಮಾರ್ಗ ವಿಸ್ತಾರವಾಗ್ತಿದೆ. ಮೆಟ್ರೋ ಬಂತು, ಜನ ಹೆಚ್ಚು ಓಡಾಡ್ತಿದ್ದಾರೆ, ಜನಗಳಿಗೆ ಹೆಚ್ಚು ಅನುಕೂಲ ಆಗ್ತಿದೆ ಅನ್ನೋದು ಖುಷಿ ಸಮಾಚಾರನೇ. ಆದರೆ ಈ ಖುಷಿಯ ನಡುವೆಯೂ ಮೆಟ್ರೋ ಕೆಲವು ದುರ್ಘಟನೆಗಳಿಗೆ ಸಾಕ್ಷಿ ಆಗ್ತಿದೆ. ಸಾರ್ವಜನಿಕರ ಸೂಸೈಡ್​ ಹಾಟ್​ಸ್ಪಾಟ್​ ಆಗ್ತಿದೆ ಅನ್ನೋದು ಬೇಸರಕ್ಕೆ ಕಾರಣವಾಗ್ತಿದೆ. ಹೌದು, ಮೆಟ್ರೋ ಈಗ ಸೂಸೈಡ್​ ಮಾಡ್ಕೊಳ್ಳೋರಿಗೆ ಹಾಟ್​ಸ್ಪಾಟ್​ ಆಗ್ತಿದೆ ಎಂಬ ಅನುಮಾನ ಕಾಡ್ತಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನೋರು ಮೆಟ್ರೋ ನಿಲ್ದಾಣಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ನಿಜಕ್ಕೂ ದುರಂತ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಎರಡು ದಿನಗಳ ಹಿಂದೆಯಷ್ಟೇ ಯುವಕನೊಬ್ಬ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಆದ್ಮೇಲೆ ಮೆಟ್ರೋ ನಿಲ್ದಾಣದ ಸುರಕ್ಷತೆ ಬಗ್ಗೆ ಬಹುದೊಡ್ಡ ಚರ್ಚೆ ಎದುರಾಗಿದೆ.

ಇದನ್ನು ಓದಿ: ಮೆಟ್ರೋದಲ್ಲಿ ಮತ್ತೆ ಯುವತಿಯರ ಹುಚ್ಚಾಟ.. ಇವರ ವಯ್ಯಾರಕ್ಕೆ ನೆತ್ತಿಗೇರಿತು ಪ್ರಯಾಣಿಕರ ಕೋಪ

ಏನಾಗ್ತಿದೆ ಮೆಟ್ರೋದಲ್ಲಿ? ಪದೇ ಪದೇ ಅವಘಡ ಆಗ್ತಿರೋದೇಕೆ?

ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬ ಕರೆಕ್ಟ್​ ಆಗಿ ಮೆಟ್ರೋ ಬರುವ ಸಮಯದಲ್ಲೇ ಹಳಿ ಮೇಲೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಇದು ಮೆಟ್ರೋ ಪಾಲಿಗೆ ಕಪ್ಪು ಚುಕ್ಕೆಯಾಗಿದ್ದು, ತೀರಾ ಟೀಕೆಗೆ ಕಾರಣವಾಗಿದೆ. ಯಾಕಂದ್ರೆ ಇದುವರೆಗೂ ಬೆಂಗಳೂರು ಮೆಟ್ರೋದಲ್ಲಿ ಸೂಸೈಡ್​ ಮಾಡ್ಕೊಂಡು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿತ್ತು. ಹಾಗಂತ ಇಂಥ ಪ್ರಯತ್ನ ಆಗಿದ್ದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೂ ಆತ್ಮಹತ್ಯೆ ಯತ್ನ ನಡೆದಿತ್ತು. ಬರೀ ಸೂಸೈಡ್ ಮಾತ್ರವಲ್ಲ, ಕೆಲವು ದುರ್ಘಟನೆಗಳಿಗೂ ಸಾಕ್ಷಿಯಾಗಿತ್ತು. 1 ಜನವರಿ 2024 ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಮಹಿಳೆಯೊಬ್ಬಳು ತನ್ನ ಮೊಬೈಲ್​ನ ಟ್ರ್ಯಾಕ್​ ಮೇಲೆ ಬೀಳಿಸಿದ್ದಾಳೆ. ಈ ವೇಳೆ ಮೊಬೈಲ್​ ತೆಗೆಯಲು ಟ್ರ್ಯಾಕ್ ಮೇಲೆ ಜಿಗಿದಿದ್ದಳು. ಇದನ್ನ ಗಮಿನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ, ಆಕೆಯನ್ನ ರಕ್ಷಣೆ ಮಾಡಿದ್ದರು. 5 ಜನವರಿ 2024 ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 23 ವರ್ಷದ ಶ್ಯಾರೋನ್​ ಎಂಬಾತ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಮೆಟ್ರೊ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಧುಮುಕಿದ್ದ. ಈ ವೇಳೆ ಮೆಟ್ರೋ ಟ್ರೈನ್ ಡಿಕ್ಕಿ ಹೊಡೆದಿದ್ದು ಅವತ್ತು ಹಸಿರು ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು. 6 ಜನವರಿ 2024 ಜೆ.ಪಿ.ನಗರ ಮೆಟ್ರೋ ಟ್ರ್ಯಾಕ್‌ನಲ್ಲಿ ಕಪ್ಪು ಬಣ್ಣದ ಬೆಕ್ಕು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಗೊಂಡಿರುವಂತಹ ಘಟನೆ ಜೆ.ಪಿ.ನಗರ ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದಿತ್ತು. ಕೂಡಲೇ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಟ್ರ್ಯಾಕ್​ನಲ್ಲಿದ್ದ ಬೆಕ್ಕನ್ನ ಓಡಿಸಿದ್ದರು. ಈ ಘಟನೆಗಳು ಮಾಸುವ ಮುನ್ನವೇ ಈಗ ಅತ್ತಿಗುಪ್ಪೆಯಲ್ಲಿ ವಿದ್ಯಾರ್ಥಿಯೊಬ್ಬ ಮೆಟ್ರೋ ಹಳಿಗೆ ಬಿದ್ದು ಸೂಸೈಡ್ ಮಾಡ್ಕೊಂಡಿರೋದು ಭಾರಿ ಚರ್ಚೆಗೆ ಕಾರಣವಾಗಿದೆ.

ಮೆಟ್ರೋ ಸ್ಟೇಷನ್‌ನಲ್ಲಿ ಏನಾಗ್ತಿದೆ? ‘ಪಿಎಸ್‌ಡಿ’ ಅಳವಡಿಕೆ ಯಾವಾಗ?

ಕೇವಲ​ ಮೂರೇ ತಿಂಗಳ ಅಂತರದಲ್ಲಿ ನಾಲ್ಕು ಅವಘಡಗಳು ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದೆ. ಹೀಗಾಗಿ ಮೆಟ್ರೋ ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಕೆಗೆ ತೀವ್ರ ಒತ್ತಾಯ ಎದುರಾಗಿದೆ. ಅಷ್ಟಕ್ಕೂ ಏನಿದು ಪಿಎಸ್‌ಡಿ? ಪಿಎಸ್‌ಡಿ ಅಳವಡಿಕೆಯಿಂದ ಇಂಥಹ ಅವಘಡಗಳನ್ನ ತಡೆಯಬಹುದಾ ಅಂತ ಕೇಳಿದ್ರೆ ಸಾಧ್ಯತೆ ಇದೆ ಎನ್ನಲಾಗ್ತಿದೆ. ಪಿಎಸ್‌ಡಿ ಅಂದ್ರೆ ಫ್ಲಾಟ್​ ಫಾರ್ಮ್​ ಸ್ಕ್ರೀನ್​​ ಡೋರ್. ಈ ವ್ಯವಸ್ಥೆ ಪ್ಲ್ಯಾಟ್‌ಫಾರಂಗಳ ಸುರಕ್ಷತೆಯನ್ನು ಹೆಚ್ಚಿಸುವುದೂ ಅಲ್ಲದೇ, ಪ್ರಯಾಣಿಕರು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವುದನ್ನು ತಪ್ಪಿಸಲಿದೆ. ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಈ ಫ್ಲಾಟ್​ ಫಾರ್ಮ್​ ಸ್ಕ್ರೀನ್​​ ಡೋರ್ ಅಳವಡಿಸಲಾಗಿದ್ದು, ಜನರ ಸುರಕ್ಷಿತೆಗೆ ಸಹಕಾರಿಯಾಗಿದೆಯಂತೆ.

ಹಾಗಾಗಿ ಬೆಂಗಳೂರು ಮೆಟ್ರೋದಲ್ಲೂ ಈಗ ಪಿಎಸ್‌ಡಿ ಅಳವಡಿಸಲು ಒತ್ತಾಯ ಹೆಚ್ಚಾಗಿದೆ. ಈ ಹಿಂದಿನಿಂದಲೂ ಪಿಎಸ್​ಡಿ ಅಳವಡಿಕೆಯ ಕೂಗು ಕೇಳಿ ಬರ್ತಿದ್ದರೂ ಮೆಟ್ರೋ ಅಧಿಕಾರಿಗಳು ತಲೆಗೆ ಹಾಕಿಕೊಂಡಿಲ್ಲ. ಆದ್ರೀಗ ಮೆಟ್ರೋದಲ್ಲಿ ಸಾವು ಸಂಭಸಿದೆ. ಹಾಗಾಗಿ ಬೆಂಗಳೂರು ಮೆಟ್ರೋದಲ್ಲಿ ಫ್ಲಾಟ್​ ಫಾರ್ಮ್​ ಸ್ಕ್ರೀನ್​​ ಡೋರ್​ಗೆ ಬೇಡಿಕೆ ಹೆಚ್ಚಾಗಿದೆ. ನಗರದಲ್ಲಿ 63 ಸ್ಟೇಷನ್​ಗಳಿದ್ದು ಯಾವುದರಲ್ಲಿಯೂ ಈ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಆದರೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಿಸುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ದೇಣಿಗೆಯಿಂದ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ ಅಳವಡಿಸಲಾಗುತ್ತಿದೆ. ಹಾಗಾಗಿ ಎಲ್ಲಾ ಮೆಟ್ರೋ ಸ್ಟೇಷನ್​ಗೂ ಇದು ಅಗತ್ಯ ಎನ್ನುವ ಅಭಿಪ್ರಾಯ ಕೇಳಿ ಬರ್ತಿದೆ. ಹಾಗಾದ್ರೆ ಈ ಸಲ ಆದರೂ ಮೆಟ್ರೋ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ? ಈ ರೀತಿಯ ದುರ್ಘಟನೆಗಳಿಗೆ ಕಡಿವಾಳ ಬೀಳುತ್ತಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ತಿಂಗಳಲ್ಲಿ 4 ದುರಂತ.. ನಮ್ಮ ಮೆಟ್ರೋ ಸ್ಟೇಷನ್‌ನಲ್ಲಿ ಏನಾಗ್ತಿದೆ? ಬೆಂಗಳೂರಿಗರ ಬೇಡಿಕೆ ಏನು?

https://newsfirstlive.com/wp-content/uploads/2024/03/namma-metro-death-1.jpg

Load More