newsfirstkannada.com

ಬೆಂಗಳೂರಲ್ಲಿ ಕಾರಿನಲ್ಲಿ ಹೋಗ್ತಿದ್ದ ಮಹಿಳೆಯರಿಗೆ ಕಿರುಕುಳ, ಬೆದರಿಕೆ.. ಸಿನಿಮಾ ಸ್ಟೈಲ್​​ನಲ್ಲಿ ಆರೋಪಿಗಳ ಹಿಡಿದ ಪೊಲೀಸರು

Share :

Published April 1, 2024 at 10:45am

Update April 1, 2024 at 10:50am

    ಕಾರು ಸ್ಪೀಡ್​ಲ್ಲಿದ್ದರೂ ಫಾಲೋ ಮಾಡಿ ಬೆದರಿಕೆ ಒಡ್ಡಿದ ಆರೋಪಿಗಳು

    ಮಹಿಳೆಯರನ್ನ ಫಾಲೋ ಮಾಡಿದ್ದಕ್ಕೆ ಮೂವರು ಆರೋಪಿಗಳು ವಶಕ್ಕೆ

    ಘಟನೆಯಲ್ಲಿನ ಉಳಿದ ಕಿಡಿಗೇಡಿಗಳಿಗಾಗಿ ಪೊಲೀಸರಿಂದ ಹುಡುಕಾಟ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರನ್ನ ಫಾಲೋ ಮಾಡಿ ಕಿರುಕುಳ ಕೊಟ್ಟಿದ್ದಾರೆ. ಈ ಘಟನೆಯು ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳಾದ ತೇಜಸ್, ಜಗನ್ನಾಥ್, ಕಣ್ಣನ್ ಎನ್ನುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಉಳಿದವರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ರಾತ್ರಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನ ಇಂಡಿಕೇಟರ್ ಒಂದು ಬದಿಗೆ ಹಾಕಿ ಮತ್ತೊಂದು ಬದಿಗೆ ಕಾರು ಚಲಿಸಿದೆ. ಇದಕ್ಕಾಗಿ ಎರಡ್ಮೂರು ಬೈಕ್​ಗಳಲ್ಲಿದ್ದ ನಾಲ್ಕೈದು ಆರೋಪಿಗಳು ಕಿರಿಕ್ ಮಾಡಿದ್ದಾರೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಚಾಲನೆಯಲ್ಲಿದ್ದ ಕಾರಿನ ಡೋರ್ ಓಪನ್ ಮಾಡಲು ಆರೋಪಿಗಳು ಮುಂದಾಗಿದ್ದಾರೆ.

ಆತಂಕಗೊಂಡ ಮಹಿಳೆಯರು ಕಿರುಚಿಕೊಂಡು ಕಾರನ್ನು ಇನ್ನೂ ಸ್ಪೀಡ್ ಆಗಿ ಚಾಲನೆ ಮಾಡಿದ್ದಾರೆ. ಆರೋಪಿಗಳು ಚೇಸ್ ಮಾಡಿಕೊಂಡು ಬಂದು ಮಹಿಳೆಯರಿಗೆ ದಮ್ಕಿ ಹಾಕುತ್ತಲೇ ಇದ್ದರು. ಮಡಿವಾಳದಿಂದ, ಸೆಂಟ್ ಜಾನ್ಸ್, ಅಲ್ಲಿಂದ ಕೋರಮಂಗಲವರೆಗೂ ಕಿಡಿಗೇಡಿಗಳು ಫಾಲೋ ಮಾಡಿದ್ದರು. ಈ ವೇಳೆ ಸಹಾಯಕ್ಕಾಗಿ 112 ಫೋನ್ ಮಾಡಿದ್ದ ಮಹಿಳೆಯರು ಕಾರು ಎಲ್ಲೆಲ್ಲಿ ಹೋಗುತ್ತಿದೆ ಎಂದು ಎಲ್ಲ ಮಾಹಿತಿಯನ್ನು ನಿರಂತರವಾಗಿ ಪೊಲೀಸರಿಗೆ ತಿಳಿಸುತ್ತಿದ್ದರು.

ಇದನ್ನೂ ಓದಿ: ಊಬರ್​ ಬುಕ್ ಮಾಡಿ ಪ್ರಯಾಣಿಸಿದ ವ್ಯಕ್ತಿಗೆ ಶಾಕ್ ಕೊಟ್ಟ ಬಿಲ್; 7.6 ಕೋಟಿ ಪಾವತಿಸುವಂತೆ ಸೂಚನೆ..!

ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸುತ್ತಿದ್ದಂತೆ ದ್ವಿಚಕ್ರ ವಾಹನಗಳಲ್ಲಿ ಫಾಲೋ ಮಾಡ್ತಿದ್ದ ಕೆಲ ಪುಂಡರು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಹಾಗೇ ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಕಾರಿನಲ್ಲಿ ಹೋಗ್ತಿದ್ದ ಮಹಿಳೆಯರಿಗೆ ಕಿರುಕುಳ, ಬೆದರಿಕೆ.. ಸಿನಿಮಾ ಸ್ಟೈಲ್​​ನಲ್ಲಿ ಆರೋಪಿಗಳ ಹಿಡಿದ ಪೊಲೀಸರು

https://newsfirstlive.com/wp-content/uploads/2024/04/Bangalore-Harrasement.jpg

Load More