ಯಾವುದೇ ಕಾರಣಕ್ಕೂ ಈ ಮಹಿಳೆಯರ ಬಗ್ಗೆ ನಿರ್ಲಕ್ಷ್ಯ ಬೇಡ
ಸದ್ದಿಲ್ಲದೆ ಮಾಲೀಕರಿಗೆ ಗೊತ್ತಿಲ್ಲದ ಹಾಗೇ ಗೋಲ್ಡ್ ಎಗರಿಸ್ತಾರೆ!
ಚಿನ್ನದ ಅಂಗಡಿ ಮಾಲೀಕರೇ ಇವರ ಬಗ್ಗೆ ಎಚ್ಚರವಹಿಸಲೇಬೇಕು
ಬೆಂಗಳೂರು: ಕೆದರಿರೋ ಕೂದಲು.. ಬಾಡಿರೋ ಮುಖ.. ಅಮಾಯಕಳಂತೆ ನಿಂತಿರೋ ಈಕೆ ಹೆಸರು ರತ್ನ ವೇಡಿವೇಲು.. ತನ್ನದ್ದೇನು ತಪ್ಪೇ ಇಲ್ಲದಂತೆ ನಗ್ತಾ ಫೋಟೋಗೆ ಫೋಸ್ ಕೊಟ್ಟಿರೋ ಈಕೆ ಹೆಸ್ರು ಕೃಷ್ಣವೇಣಿ. ಇವರಿಬ್ಬರು ಮೂಲತಃ ತಮಿಳುನಾಡಿನ ನಿವಾಸಿಗಳು.. ಹಲವು ಠಾಣೆಗೆ ಬೇಕಾಗಿರೋ ಖತರ್ನಾಕ್ ಲೇಡಿಗಳು.. ಬರೋಬ್ಬರಿ 10 ವರ್ಷದ ನಂತರ ಸಾಕ್ಷಿ ಸಮೇತ ಪೊಲೀಸರ ಕೈಯಲ್ಲಿ ಲಾಕ್ ಆಗ್ಬಿಟ್ಟಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಈ ಲೇಡಿ ಕೇಡಿಗಳು ಚಿನ್ನದಂಗಡಿಗೆ ಹೀಗೆ ಎಂಟ್ರಿ ಕೊಡ್ತಾರೆ. ನಕಲಿ ಚಿನ್ನದೊಂದಿಗೆ ಬರೋ ಈ ಚಾಲಾಕಿಗಳು, ಚಿನ್ನದ ಬಾಕ್ಸ್ ಓಪನ್ ಮಾಡ್ತಾರೆ. ಬಲ ಕೈಯಲ್ಲಿ ಗೋಲ್ಡ್ ರಿಂಗ್ ಎಗರಿಸಿದ್ರೆ, ಎಡಗೈಯಲ್ಲಿ ಸಲೀಸಾಗಿ ರೋಲ್ಡ್ ಗೋಲ್ಡ್ ಅನ್ನ ಅದೇ ಜಾಗದಲ್ಲಿ ಇಟ್ಟು ಯಾಮಾರಿಸಿಯೇ ಬಿಡ್ತಾರೆ.
ಬೆಂಗಳೂರಿನ ಚಿನ್ನದ ಅಂಗಡಿಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದ ಈ ಚಾಲಾಕಿಯರು, ಎಂದಿನಂತೆ ಅಂದೂ ಸಹ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ರು. ಯಾವಾಗ ಅಂಗಡಿ ಮಾಲೀಕ ಬನಶಂಕರಿ ಪೊಲೀಸ್ ಮೆಟ್ಟಿಲೇರಿದ್ನೋ ಈ ಸಿಸಿಟಿವಿ ಪತ್ತೆಯಾಗಿದ್ದು, ಇಬ್ಬರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇನೆ ಇರ್ಲಿ, ಇಂತಹ ಕಿಲಾಡಿಗಳ ಬಗ್ಗೆ ಒಡವೆ ಅಂಗಡಿ ಮಾಲೀಕರು ಎಚ್ಚರವಹಿಸಿ ಅನ್ನೋದು ನಮ್ಮ ಕಳಕಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ